ಕೊಟ್ಟಿಗೆಹಾರ: ನಾಲ್ಕು ತಲೆಮಾರು ಹಿಂದಿನ ತನ್ನ ಪೂರ್ವಜನ್ಮದ ಊರಾದ ಮೇಗೂರಿಗೆ ಹೋಗಬೇಕು ಎಂದು ಬೆಂಗಳೂರಿನ ಯುವತಿಯೊಬ್ಬಳು ಹಠ ಹಿಡಿದ ಕಾರಣ ಆಕೆಯ ಹೆತ್ತವರು ಅವಳನ್ನು ಜಾವಳಿ ಗ್ರಾ. ಪಂ. ವ್ಯಾಪ್ತಿಯ ಮೇಗೂರು ಗ್ರಾಮಕ್ಕೆ ಕರೆತಂದ ಕುತೂಹಲಕಾರಿ ಪ್ರಸಂಗವೊಂದು ನಡೆದಿದೆ.
ಬೆಂಗಳೂರಿನ ಹೆಬ್ಟಾಳ ಸಮೀಪದ ನಾಗವಾರದ ಯುವತಿ ಕೆಲವು ತಿಂಗಳುಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದು, ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ.
ಪೋಷಕರು ಪ್ರಶ್ನಿಸಿದಾಗ, ತಾನು ನಾಲ್ಕು ತಲೆಮಾರುಗಳ ಹಿಂದೆ ಜಾವಳಿ ಸಮೀಪದ ಮೇಗೂರಿನ ಅರ್ಚಕರೊಬ್ಬರ ಮಗಳಾಗಿದ್ದು, ಆ ಊರಿಗೆ ಹೋಗಬೇಕು ಎಂದು ಪಟ್ಟು ಹಿಡಿದಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಮೇಗೂರಿನ ಅಮೃತೇಶ್ವರ ದೇವಸ್ಥಾನಕ್ಕೆ ಕರೆತರಲಾಗಿದೆ.
ಇಲ್ಲಿಗೆ ಬಂದ ಬಳಿಕ ಆಕೆಯ ವರ್ತನೆಯಲ್ಲಿ ಸಹಜತೆ ಕಂಡು ಬಂದಿದೆ ಎಂದು ಮನೆಯವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಗ್ರಾಮಸ್ಥ ಚನ್ನಕೇಶವ ಗೌಡ, ಯುವತಿ ಹೇಳಿದಂಥ ಅರ್ಚಕರು ಈ ಹಿಂದೆ ಈ ಗ್ರಾಮದಲ್ಲಿದ್ದ ಬಗ್ಗೆ ಹಿರಿಯರಿಗೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.