Advertisement
ಬೀಗವೇ ತೆರೆದಿಲ್ಲಗಂಗೊಳ್ಳಿ ಗ್ರಾ.ಪಂ.ನ 14ನೇ ಹಣಕಾಸು ಯೋಜನೆಯ ವಿಕಲಚೇತನರ ಶೇ. 5ರ ಅನುದಾನದಲ್ಲಿ ಎಸ್.ವಿ. ಜೂನಿ
ಯರ್ ಕಾಲೇಜು ರಸ್ತೆಯಲ್ಲಿರುವ ಹಳೆ ಪಂಚಾಯತ್ ಕಚೇರಿ ಸಮೀಪ ಸುಮಾರು 3.30 ಲ.ರೂ. ವೆಚ್ಚದಲ್ಲಿ ಅಂಗವಿಕಲರ ವಿ.ಆರ್. ಡಬ್ಲ್ಯು. ಕಚೇರಿ ಕಟ್ಟಡ ನಿರ್ಮಿಸಲಾಗಿತ್ತು. ಕಳೆದ ಸುಮಾರು 1 ವರ್ಷದ ಹಿಂದೆ ಕಟ್ಟಡ ಉದ್ಘಾಟಿಸಲಾಗಿದ್ದರೂ ಕಟ್ಟಡಕ್ಕೆ ಹಾಕಿರುವ ಬೀಗ ಈವರೆಗೂ ತೆರೆದಿಲ್ಲ. ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕವಾಗಿದ್ದು, ನೂತನ ಕಟ್ಟಡ ಕಾರ್ಯಾರಂಭ ಮಾಡದೇ ಇರುವುದರಿಂದ ಅವರು ಕಳೆದ ಅನೇಕ ವರ್ಷಗಳಿಂದ ಗಂಗೊಳ್ಳಿ ಗ್ರಾ.ಪಂ. ಕಚೇರಿಯಲ್ಲಿಯೇ ಕಾರ್ಯ
ನಿರ್ವಹಿಸುತ್ತಿದ್ದಾರೆ. ಸರಕಾರದ ನಿಯಮ ದಂತೆ ಗ್ರಾ.ಪಂ. ಮೂಲಕ ಇವರಿಗೆ ಗೌರವಧನ ನೀಡಲಾಗುತ್ತಿದೆ.
ಅಂಗವಿಕಲರಿಗೆ ಸಹಾಯ, ಉಪಯೋಗಕ್ಕಾಗಿ ನಿರ್ಮಿಸಲಾಗಿರುವ ನೂತನಕಟ್ಟಡದಲ್ಲಿ ಪೀಠೊಪಕರಣ ಸಹಿತ ಯಾವುದೇ ಮೂಲ ಸೌಲಭ್ಯಗಳಿಲ್ಲ. ನೂತನವಾಗಿ ನಿರ್ಮಿಸಲಾಗಿರುವ ಗ್ರಾಮೀಣ ಪುನರ್ವಸತಿ ಕಚೇರಿಯಲ್ಲಿ ಮೂಲ ಸೌಲಭ್ಯ ಒದಗಿಸಿ ಸಾರ್ವಜನಿಕ ಸೇವೆಗೆ ನೀಡಲು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಗ್ರಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹಾಗಿದ್ದರೂ ಈವರೆಗೆ ನೂತನ ಕಟ್ಟಡದ ಬೀಗಮುದ್ರೆ ತೆರವುಗೊಂಡಿಲ್ಲ. ತೆರವಿಗೆ ಆಗ್ರಹ
ಸುಸಜ್ಜಿತ ನೂತನ ಕಟ್ಟಡ ನಿರ್ಮಾಣಗೊಂಡಿದ್ದರೂ ಅದರ ಪ್ರಯೋಜನ ಸಾರ್ವಜನಿಕರಿಗೆ ದೊರೆಯುತ್ತಿಲ್ಲ. ಹೀಗಾಗಿ ಗ್ರಾಮೀಣ ಪುನರ್ವಸತಿ ಕಚೇರಿಯನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು. ಅಂಗವಿಕಲರ ಸೇವೆಗೆ ನಿಯುಕ್ತಿಗೊಂಡಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಈ ಕಚೇರಿಮೂಲಕ ಸೇವೆ ನೀಡುವಂತೆ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Related Articles
ಹಳೆ ಪಂಚಾಯತ್ ಕಚೇರಿ ಸಮೀಪ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಕಚೇರಿ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಯಾಗಿ ವರ್ಷ ಕಳೆದರೂ ಸೇವೆಗೆ ಮುಕ್ತವಾಗಿಲ್ಲ. ಹೀಗಾಗಿ ಆದಷ್ಟು ಶೀಘ್ರ ಈ ಕಚೇರಿಯನ್ನು ಸಾರ್ವಜನಿಕ ಸೇವೆಗೆ ಉಪಯೋಗವಾಗುವಂತೆ ಮಾಡಬೇಕಿದೆ.
-ಬಿ. ಗಣೇಶ ಶೆಣೈ,
ಗ್ರಾ.ಪಂ. ಸದಸ್ಯ, ಗಂಗೊಳ್ಳಿ
Advertisement
ಶೀಘ್ರ ಸೇವೆಗೆ ಮುಕ್ತ ನೂತನವಾಗಿ ನಿರ್ಮಿಸಲಾಗಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಕಚೇರಿಯಲ್ಲಿ ಪೀಠೊಪಕರಣ ಮತ್ತಿತರ ಮೂಲ ಸೌಕರ್ಯ ಇಲ್ಲ. ಆದಷ್ಟು ಶೀಘ್ರ ಪೀಠೊಪಕರಣ ಒದಗಿಸಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಕಚೇರಿ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು.
-ಉಮಾಶಂಕರ,
ಪಿಡಿಒ, ಗಂಗೊಳ್ಳಿ ಗ್ರಾ. ಪಂ.