Advertisement
“ವಿ ದಿ ವುಮೆನ್’ ಎಂಬ ಶೀರ್ಷಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಮಹಿಳಾ ಸಾಧಕಿರೊಂದಿಗೆ ಹಿರಿಯ ಪತ್ರಕರ್ತೆ ಬರ್ಕಾ ದತ್ ಅವರು ಸಂವಾದ ನಡೆಸಿದರು. ಈ ವೇಳೆ ಸಾಧಕಿಯರು ತಾವು ನಡೆದು ಬಂದ ಹಾದಿ, ಎದುರಿಸಿದ ಸವಾಲುಗಳು, ಅವುಗಳನ್ನು ಮೀರಿ ಬೆಳೆದ ಬಗೆ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಫೇಸ್‌ಬುಕ್ ಮತ್ತು ಯುನೈಟೆಡ್ ನೇಷನ್ಸ್ ವುಮೆನ್ ಸಂಘಟನೆಗಳು ನಗರದಲ್ಲಿ ಭಾನುವಾರ ಜಂಟಿಯಾಗಿ ಆಯೋಜಿಸಿದ್ದ “ವಿ ದ ವುಮೆನ್’ ಎಂಬ ಸಂವಾದ ಕಾರ್ಯಕ್ರಮದಲ್ಲಿ
Related Articles
Advertisement
ನನ್ನದೇ ಆದ ಐಡೆಂಟಿಟಿ ಬೇಕಿತ್ತು: ಸಂವಾದದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್, “ಇವತ್ತಿನ ಭಾರತೀಯ ಮಹಿಳೆಯರು’ ವಿಷಯ ಕುರಿತು ಮಾತನಾಡಿದರು. ಈ ವೇಳೆ ನಾನು ಖ್ಯಾತ ನಟನ ಮಗಳಾಗಿದ್ದರೂ, ಆ ಗುರುತ್ವದಿಂದ ಹೊರತಾಗಿ ಸ್ವತಂತ್ರವಾಗಿ ಜನರು ನನ್ನನ್ನು ಗುರುತಿಸಬೇಕೆಂಬ ಉದ್ದೇಶದಿಂದ ಉದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದರು.
ನಾನು ಮೊದಲು ಎಲ್ಲಿಗೆ ಹೋದರೂ ಬಚ್ಚನ್ ಮಗಳು ಎಂದು ಜನ ಗುರುತಿಸುತ್ತಿದ್ದರು. ನನ್ನ ಸ್ನೇಹಿತರಾದವರು ತುಂಬಾ ಜನರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ತಮ್ಮದೇ ಆದ ಐಡೆಂಟಿಟಿ ಕಂಡುಕೊಂಡಿದ್ದರು. ಹೀಗಾಗಿ ನನಗೂ ನನ್ನದೇ ಆದ ಐಡೆಂಟಿಟಿ ಬೇಕು ಎಂದೆನಿಸಿತ್ತು. ಇನ್ನು ನಟನೆಯಲ್ಲಿ ಆಸಕ್ತಿಯಿದ್ದರೂ, ಶಾಲೆಯಲ್ಲಿದ್ದಾಗ ತಮ್ಮ ಪ್ರಮುಖ ಪಾತ್ರ ಮಾಡಿದರೆ, ನಾನು ಸಣ್ಣ ಪಾತ್ರ ಮಾಡಿದ್ದೇ ಕೊನೆಯಾಯಿತು ಎಂದು ಸ್ಮರಿಸಿದರು.
ಸಂವಾದದಲ್ಲಿ ನಟಿಯರಾದ ಸೋನಂ ಕೆ. ಅಹುಜಾ, ತನುಶ್ರೀ ದತ್ತ, ತಾಸ್ಸಿ ಪನ್ನು, ನಟ ವಿಕಿ ಕೌಶಲ್, ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಸ್ಯಾಕೊಫೋನ್ ವಾದಕಿ ಸುಬ್ಬಲಕ್ಷಿ, ನ್ಯಾಸ್ಕಾಂನ ದೇಬಾನಿ ಘೋಷಸ್ ಸೇರಿದಂತೆ ಹಲವು ಸಾಧಕಿಯರು ಭಾಗವಹಿಸಿದ್ದರು.
ಕೇರಳದ ಚರ್ಚ್‌ಗಳಲ್ಲಿ ಮಹಿಳಾ ಪಾದ್ರಿಗಳ ಸ್ಥಿತಿ ಶೋಚನೀಯವಾಗಿದೆ. ಕೆಲವೆಡೆ ರಾಜಕಾರಣಿಗಳ ಪ್ರಭಾವದಿಂದಾಗಿ ಪ್ರಕರಣಗಳು ಬಹಿರಂಗವಾಗುತ್ತಿಲ್ಲ. ಇದರ ವಿರುದ್ಧ ದನಿಯೆತ್ತಿದ್ದಕ್ಕೆ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.-ಇಂದುಲೇಖಾ ಜೋಸೆಫ್ ಮುಸ್ಲಿಂ ಪುರುಷರು ತಮ್ಮ ಪತ್ನಿಯರಿಗೆ ವಿಚ್ಛೇಧನ ನೀಡುವುದನ್ನು ಪ್ರಶ್ನಿಸುವುದಿಲ್ಲ. ಆದರೆ, ಆಕೆಯ ಅನುಪಸ್ಥಿತಿಯಲ್ಲಿ ಯಾವುದೇ ರೀತಿಯ ಒಪ್ಪಿಗೆ ಪಡೆಯದೆ ತ್ರಿವಳಿ ತಲಾಖ್ ನೀಡುವುದು ಸರಿಯಲ್ಲ. ಒಪ್ಪಿತವಲ್ಲದ ರೀತಿಯಲ್ಲಿ ತಲಾಖ್ ನೀಡುವಂತೆ ಕುರಾನ್‌ನಲ್ಲಿ ಅಲ್ಲಾ ಸಹ ಹೇಳಿಲ್ಲ.
-ಝಾಕಿಯಾ ಸೋಮನ್