ಉಡುಪಿ: ಜಿಲ್ಲೆಯಲ್ಲಿ ವಿದೇಶಿಯರು ತಂಗಿರುವ ಬಗೆಗಿನ ಮಾಹಿತಿಯನ್ನು ಸಂಬಂಧಪಟ್ಟ ಮಾಲಕರು 24 ಗಂಟೆಯೊಳಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಡ್ಡಾಯವಾಗಿ ನೀಡುವಂತೆ ಆದೇಶಿಸಲಾಗಿದೆ.
ವಿದೇಶೀಯರ ಕಾಯ್ದೆ 1946ರ ಕಲಂ 7ರಂತೆ ಯಾವುದೇ ವಿದೇಶಿಯರು ತಂಗುವ ಸ್ಥಳಗಳಾದ ಹೊಟೇಲ್, ಗೆಸ್ಟ್‌ಹೌಸ್, ಧರ್ಮ ಶಾಲಾ, ಪ್ರತ್ಯೇಕ ಮನೆ, ಯುನಿವರ್ಸಿಟಿ, ವಿದ್ಯಾ ಸಂಸ್ಥೆ ಸಹಿತ ಇತರೆ ಸ್ಥಳಗಳಲ್ಲಿ ವಿದೇಶಿಯರು ತಂಗಿದ ಬಗ್ಗೆ ಮಾಹಿತಿ ಫಾರ್ಮ್ ಸಿಯನ್ನು ಸಂಬಂಧಪಟ್ಟ ಮಾಲಕರು ನೋಂದಣಿ ಅಧಿಕಾರಿಗಳಿಗೆ (ಸಂಬಂಧಪಟ್ಟ ಜಿಲ್ಲೆಯ ಪೊಲೀಸ್ ಅಧೀಕ್ಷಕರು) 24 ಗಂಟೆಯೊಳಗೆ ನೀಡಬೇಕು.
ಈ ನಿಯಮಾವಳಿಯನ್ನು ಉಲ್ಲಂ ಸಿದರೆ ಸಂಬಂಧಪಟ್ಟವರ ವಿರುದ್ದ ಕಲಂ 14 ವಿದೇಶಿಯರ ಕಾಯ್ದೆ 1946 ರಂತೆ ಕ್ರಮ ಜರಗಿಸಬಹುದು. ಈ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹರಾಗಿರುತ್ತಾರೆ.
https://indianfrro.gov.in/frro/FormC ಮೂಲಕ ನೋಂದಣಿ ಮಾಡಬಹುದಾಗಿದೆ. ವಿದೇಶಿಯರಿಗೆ ಫಾರ್ಮ್ ಸಿ ಭರ್ತಿ ಗೊಳಿಸುವ ಅವಕಾಶವಿರುವುದಿಲ್ಲ. ಪ್ರತ್ಯೇಕ ಮನೆಯ ಮಾಲಕರಿಗೆ ಒಟಿಪಿ ಮೂಲಕ ಸ್ವಯಂ ನೋಂದ ಣಿಗೆ ಅವಕಾಶವಿದೆ. ಫಾರ್ಮ್ ಸಿ ಆನ್‌ಲೈನ್‌ನಲ್ಲಿ ಭರ್ತಿಗೊಳಿಸುವ ಸಂಬಂಧ ತಾಂತ್ರಿಕ ಕಾರಣಗಳಿಗೆ ಮೋಜಿಲ್ಲಾ ಪೈರ್‌ಫಾಕ್ಸ್ ಉಪ ಯೋಗಿಸಬೇಕು.
ಅನಧಿಕೃತ ಏಜೆಂಟರನ್ನು ಸಂಪರ್ಕಿಸದಿರಿ
ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಮುಂಗಡವಾಗಿ ಹಣ ಪಡೆದು ವಿದೇಶಕ್ಕೆ ತೆರಳಿದ ಅನಂತರ ಸರಿಯಾದ ಕೆಲಸವಿಲ್ಲದೆ ಹಣ ಹಾಗೂ ಕೆಲಸವನ್ನು ಕಳೆದುಕೊಂಡು ವಂಚನೆಗೊಳಗಾದ ಉದಾಹರಣೆಗಳು ಕಂಡುಬಂದಿರುತ್ತದೆ. ಆದುದರಿಂದ ನಾಗರಿಕರು ಜಾಗರೂಕತೆಯಿಂದ ಅನಧಿಕೃತ ಏಜೆಂಟರನ್ನು ಸಂಪರ್ಕಿಸದೆ ಮಿನಿಸ್ಟ್ರೀ ಆಫ್ ಎಕ್ಸ$rರ್‌ನಲ್ ಎಫೇರ್ಸ್ ನೊಂದಿಗೆ ನೋಂದಾಯಿತ ಏಜೆಂಟರುಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ. ಉಡುಪಿ ಜಿಲ್ಲೆಯಲ್ಲಿ ಅಧಿಕೃತವಾಗಿ ನೊಂದಾಯಿತರ ಮಾಹಿತಿಯನ್ನು https://www.emigrants.gov.in ನಿಂದ ಪಡೆದು ಕೊಳ್ಳಬಹುದು.
Related Articles
ಹೊಸ ಅಥವಾ ನವೀಕೃತ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸುವ ಬಗ್ಗೆ ಸ್ಥಳೀಯ ಅಧಿಕೃತ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು(ಬ್ರಹ್ಮಾವರ/ಮಂಗಳೂರು) ಸಂಪರ್ಕಿಸಿ ಸರಿಯಾದ ಮಾಹಿತಿಯನ್ನು ಪಡೆಯ ಬಹುದಾಗಿದೆ. ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯ ಪ್ರಕಟನೆ ಯಂತೆ ಯಾವುದೇ ಅಧಿಕೃತ ನೋಂದಾಯಿತ ಏಜೆಂಟ್‌ಗಳು ಇರುವುದಿಲ್ಲ.
ಹೆಚ್ಚಿನ ಮಾಹಿತಿಯನ್ನು https://www.passportindia.gov.in ನಲ್ಲಿ ಪಡೆದು ಕೊಳ್ಳುಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನು ಮುಂದೆ ನಕಲಿ ಪಾಸ್‌ಪೋರ್ಟ್ ಪಡೆಯಲು ಸಹಕರಿಸುವ ಏಜೆಂಟ್ ಹಾಗೂ ಅರ್ಜಿದಾರರು ಪತ್ತೆಯಾದಲ್ಲಿ ಅವರ ವಿರುದ್ದ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.