Advertisement

ಲಸಿಕೆ ಪಡೆಯಲು ನೋಂದಾಯಿಸಿಕೊಳ್ಳಿ

02:16 PM May 11, 2021 | Team Udayavani |

ಚಿಕ್ಕಬಳ್ಳಾಪುರ: 18 ರಿಂದ 44 ವರ್ಷದೊಳಗಿನವರು ಕೋವಿಡ್ ಲಸಿಕೆ ಪಡೆಯಲು ಕೋವಿನ್‌ ಅಥವಾ ಆರೋಗ್ಯ ಸೇತು ಆ್ಯಪ್‌ನಲ್ಲಿ ನೋಂದಣಿ ಮಾಡಿಸಿ, ಸಮಯ ನಿಗದಿ ಮಾಡಿಕೊಳ್ಳಬೇಕು. ಅವರಿಗೆ ಮಾತ್ರ ಲಸಿಕೆ ನೀಡಲಾಗುವುದು.  ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅರ್ಹರು ನೋಂದಾಯಿಸಿ ಕೊಳ್ಳುವಂತೆ ಜಿಲ್ಲಾಧಿಕಾರಿ ಆರ್‌.ಲತಾ ಮನವಿ ಮಾಡಿದ್ದಾರೆ.

Advertisement

ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸೋಮವಾರದಿಂದಲೇ ಲಸಿಕೆ ನೀಡಲಾಗುತ್ತದೆ. ನೋಂದಣಿ ಇಲ್ಲದೆ ನೇರವಾಗಿ ಲಸಿಕಾ ಕೇಂದ್ರಕ್ಕೆ ಬರುವವರಿಗೆ ಅವಕಾಶವಿ ರುವುದಿಲ್ಲ. 18 ರಿಂದ 44 ವರ್ಷದೊಳ ಗಿನವರಿಗೆ ಕೊರೊನಾ ಲಸಿಕೆ ಹಾಕಲು ಕೋವಿನ್‌ ಪೋರ್ಟಲ್‌ನಲ್ಲಿ ಪ್ರತ್ಯೇಕ ಲಸಿಕಾ ಕೇಂದ್ರ ಗಳನ್ನು ಮಾಡಲಾಗುತ್ತಿದೆ ಹಾಗೂ ಪ್ರತಿ ಕೇಂದ್ರಕ್ಕೆ 150 ಫಲಾನುಭವಿಗಳಿಗೆ ಅವಕಾಶ ಒದಗಿಸಲಾಗಿದೆ.

ಚಿಕ್ಕ ಬಳ್ಳಾ ಪುರ ಜಿಲ್ಲೆಯಲ್ಲಿ 6,05,366 ಫಲಾನುಭವಿಗಳು 18 ರಿಂದ 44 ವಯೋಮಾನದವರೆಂದು ರಾಜ್ಯದಿಂದ ಗುರಿ ನಿಗದಿಪಡಿಸಿದೆ. 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್‌ ಲಸಿಕೆಯನ್ನು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂದಿನಂತೆ ನಡೆಸಲು ಸೂಚಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್‌ ಲಸಿಕೆಯನ್ನು ಮಾತ್ರ ನೀಡಲು ಅವಕಾಶ ನೀಡಲಾಗಿದೆ. ಅನಿವಾರ್ಯ ಸಮಯದಲ್ಲಿ ಶೇ.10 1ನೇ ಡೋಸ್‌ ಲಸಿಕೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್‌.ಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next