Advertisement
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿ ಐ) ಇಂಟರ್ ನೆಟ್ ಬ್ಯಾಂಕಿಂಗ್ ಪೋರ್ಟಲ್ ಗ್ರಾಹಕರಿಗೆ ವ್ಯಾಪಕವಾದ ಸೌಲಭ್ಯಗಳನ್ನು ಒದಗಿಸುತ್ತಿದೆ.
Related Articles
Advertisement
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಒಟ್ಟು 8 ಬ್ಯಾಂಕಿಂಗ್ ವ್ಯವಹಾರವನ್ನು ನಿಭಾಯಿಸಬಹುದು ಎಂದು ಎಸ್ ಬಿ ಐ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ.
ಹಣದ ವಹಿವಾಟು, ಎಟಿಎಂ ಕಾರ್ಡ್ ಗೆ ಅರ್ಜಿ, ಠೇವಣಿ ಖಾತೆಗೆ ಸಂಬಂಧಿಸಿದ ಕೆಲಸ, ಬಿಲ್ ಪಾವತಿ, ಸೇವಿಂಗ್ ಬ್ಯಾಂಕ್ ಅಕೌಂಟ್ ಸ್ಟೇಟ್ ಮೆಂಟ್, ಚೆಕ್ ಬುಕ್ ಗಾಗಿ ಅರ್ಜಿ ಸಲ್ಲಿಸುವುದು, ಯುಪಿಐ ಪ್ರಾರಂಭಿಸುವುದು ಮತ್ತು ನಿಲ್ಲಿಸುವುದು, ತೆರಿಗೆ ಪಾವತಿ ಸೌಲಭ್ಯಗಳು ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಲಭ್ಯವಿದೆ.
ಎಸ್ ಬಿ ಐ ಗೆ ಸಂಬಂಧಿಸಿದ ಬ್ಯಾಂಕಿಂಗ್ ವ್ಯವಹಾರವನ್ನು ಈ ಕೆಳಗಿನವುಗಳನ್ನು ಅನುಸರಿಸುವುದರಿಂದ ಆನ್ ಲೈನ್ ಮೂಲಕ ಮಾಡಬಹುದಾಗಿದೆ :
*ಎಸ್ ಬಿ ಐ ನೆಟ್ ಬ್ಯಾಂಕಿಂಗ್ ನ ಅಧಿಕೃತ ಹೋಮ್ ಪೇಜ್ onlinesbi.com ಗೆ ಹೋಗಿ.
*”New User Registration/Activation” ಮೇಲೆ ಕ್ಲಿಕ್ ಮಾಡಿ.
* ಖಾತೆ ಸಂಖ್ಯೆ, ಸಿಐಎಫ್ ಸಂಖ್ಯೆ, ಶಾಖೆ ಕೋಡ್, ದೇಶ, ನೋಂದಾಯಿತ ಮೊಬೈಲ್ ಸಂಖ್ಯೆ, ಅಗತ್ಯವಿರುವ ಸೌಲಭ್ಯವನ್ನು ನಮೂದಿಸಿದ ನಂತರ “ಸಬ್ ಮಿಟ್” ಬಟನ್ ಕ್ಲಿಕ್ ಮಾಡಿ.
*ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
*ಎಟಿಎಂ ಕಾರ್ಡ್ ಆಯ್ಕೆಮಾಡಿ ಮತ್ತು ಎಟಿಎಂ ಕಾರ್ಡ್ ಇಲ್ಲದಿದ್ದರೆ, ಬ್ಯಾಂಕ್ ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ.
*ತಾತ್ಕಾಲಿಕ ಬಳಕೆದಾರ ಹೆಸರನ್ನು ಗಮನಿಸಿ ಮತ್ತು ಲಾಗಿನ್ ಪಾಸ್ ವರ್ಡ್ ನ್ನು ಕ್ರಿಯೇಟ್ ಮಾಡಿ. ಪಾಸ್ ವರ್ಡ್ ನನ್ನು ಮತ್ತೆ ನಮೂದಿಸಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘ಸಬ್ ಮಿಟ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಓದಿ :ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ
*ತಾತ್ಕಾಲಿಕ ಬಳಕೆದಾರ ಹೆಸರು ಮತ್ತು ಹೊಸ ಪಾಸ್ ವರ್ಡ್ ನೊಂದಿಗೆ ಲಾಗ್ ಇನ್ ಮಾಡಿ.
*ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡ ನಂತರ ಮತ್ತು ಲಾಗಿನ್ ಪಾಸ್ ವರ್ಡ್ ಮತ್ತು ಪ್ರೊಫೈಲ್ ಪಾಸ್ ವರ್ಡ್ ನನ್ನು ಹೊಂದಿಸಿ
*ಹುಟ್ಟಿದ ದಿನಾಂಕ, ಹುಟ್ಟಿದ ಸ್ಥಳ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಬ್ಯಾಂಕ್ ಖಾತೆ ಮಾಹಿತಿಯನ್ನು ನೋಡಲು “ಅಕೌಂಟ್ ಸಮ್ಮರಿ” ಲಿಂಕ್ ಅನ್ನು ಕ್ಲಿಕ್ ಮಾಡಿ.
* ನೀವು “View only right” ಎಂದು ನೋಂದಾಯಿಸಿದ್ದರೆ, ನಿಮ್ಮ ಆನ್ ಲೈನ್ ನೋಂದಣಿ ಪ್ರಕ್ರಿಯೆಯ ಮುದ್ರಣದೊಂದಿಗೆ ನಿಮ್ಮ “ಟ್ರಾನ್ಸ್ ಕೇಶನ್ ರೈಟ್” ಅನ್ನು ಸಕ್ರಿಯಗೊಳಿಸಲು ನಿಮ್ಮ ಶಾಖೆಯನ್ನು ಸಂಪರ್ಕಿಸಿ.
ಓದಿ : ತಂದೆ ಪರ ಮಾತಾಡಿದ ಮಗುವನ್ನು ಕೊಂದ ತಾಯಿ: ಗೋಬಿ ಮಂಚೂರಿ ಕೊಡಿಸಲು ಕರೆದೊಯ್ದು ಕೊಲೆ!