ಬೆಂಗಳೂರು: ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ನಾಗರಿಕರು ಬೂಸ್ಟರ್ ಡೋಸ್ ನೋಂದಣಿ, ಲಸಿಕೆ ಪಡೆಯುವ ವೇಳೆ ನಿಗದಿಪಡಿಸಲು, ಆನ್‌ಲೈನ್ ಮತ್ತು ಆನ್‌ಸೈಟ್(ವಾಕ್-ಇನ್) ಮೂಲಕ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕೋವಿನ್ ಪೋರ್ಟಲ್‌ನಲ್ಲಿ ನಮೂದಿಸಿದಂತೆ 2ನೇ ಡೋಸ್ ಲಸಿಕೆ ಪಡೆದ 39 ವಾರ (9ತಿಂಗಳು) ಗಳ ನಂತರ ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಳ್ಳಬಹುದು.
ಇದನ್ನೂ ಓದಿ:ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗ ಪ್ರಶಸ್ತಿಗೆ ಸ್ಮೃತಿ ಮಂಧನಾ ನಾಮ ನಿರ್ದೇಶನ
60 ವಯೋಮಿತಿಗಿಂತ ಕಡಿಮೆ ಇದ್ದು, ಸಾಮಾನ್ಯ ನಾಗರಿಕ ವರ್ಗದಡಿ ನೋಂದಣಿ ಮಾಡಿಕೊಂಡಿರುವ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ತಮ್ಮ ಉದ್ಯೋಗ ಪ್ರಮಾಣ ಪತ್ರವನ್ನು ನೀಡಿ, ಆರೋಗ್ಯ/ಮುಂಚೂಣಿ ಕಾರ್ಯಕರ್ತರಾಗಿ ವರ್ಗಾಯಿಸಿಕೊಂಡು ಸರ್ಕಾರಿ ಆರೋಗ್ಯ ಕೇಂದಗ್ರಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದು.