Advertisement

ಚೆಕ್‌ಪೋಸ್ಟ್‌ ಅವಾಂತರ, ಭುಗಿಲೆದ್ದ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಪ್ರಾದೇಶಿಕ ಸ್ಪಷ್ಟತೆ

10:37 PM Dec 12, 2019 | mahesh |

ಬೈಂದೂರು: ಕಾಶ್ಮೀರ ಸಮಸ್ಯೆ, ಕಾಸರಗೋಡು ಗಡಿ ಇವೆಲ್ಲ ರಾಷ್ಟ್ರ ,ರಾಜ್ಯಮಟ್ಟದ ವಿಷಯಗಳಾದರೆ ಉಡುಪಿ ಜಿಲ್ಲೆಯ ಶಿರೋಭಾಗ ವಾದ ಶಿರೂರಿನಲ್ಲಿ ಕಳೆದೊಂದು ತಿಂಗಳಿಂದ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲಾ ಗಡಿ ಸಮಸ್ಯೆ ಉಲ್ಬಣಿಸಿದೆ. ಮಾತ್ರವಲ್ಲದೆ ಇದುವರೆಗೆ ಅಂದಾಜು ನಕ್ಷೆಯಲ್ಲಿ ಗಡಿ ವಿಭಜಿಸುತ್ತಿರುವುದು ಎರಡು ಜಿಲ್ಲೆಗಳ ಗಡಿಭಾಗದ ಜನರಿಗೆ ಅತ್ತ ಉತ್ತರ ಕನ್ನಡದ ಸೌಲಭ್ಯವು ಪಡೆಯಲಾಗದೆ ಇತ್ತ ಉಡುಪಿ ಜಿಲ್ಲೆಯ ಸವಲತ್ತು ಸ್ವೀಕರಿಸಲಾಗದೆ ಅತಂತ್ರ ವ್ಯವಸ್ಥೆಗೆ ಸಿಲುಕಿರುವುದು ಈ ಸಮಸ್ಯೆಗೆ ಕಾರಣವಾಗಿದೆ.

Advertisement

ಎರಡು ಜಿಲ್ಲೆಗಳ ಗಡಿ ಭಾಗಗಳನ್ನು ಜಿಲ್ಲಾಡಳಿತ ಸಮರ್ಪಕವಾಗಿ ಗುರುತಿಸಬೇಕಾಗಿರುವುದು ಪ್ರಸ್ತುತ ವ್ಯವಸ್ಥೆಯಲ್ಲಿ ಅನಿವಾರ್ಯವಾಗಿದೆ. ದಿನದಿಂದ ದಿನಕ್ಕೆ ಆಡಳಿತಾತ್ಮಕ ವಿಚಾರದಲ್ಲಿ ಈ ಅಂದಾಜು ವಿಭಜನೆಯ ಸ್ಪಷ್ಟತೆ ಇಲ್ಲದಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಮಾತ್ರವಲ್ಲದೆ ಎರಡು ಜಿಲ್ಲೆಗಳಿಗೆ ತೊಂದರೆಯಾಗುತ್ತಿರುವ ಚೆಕ್‌ಪೋಸ್ಟ್‌ ಗಳನ್ನು ಸ್ಥಳಾಂತರಿಸಬೇಕು ಎನ್ನುವ ಹೋರಾಟಕ್ಕೆ ಕೂಡ ಚಾಲನೆ ದೊರೆತಿದೆ.

ಗಡಿ ಭಾಗದ ಸಮಸ್ಯೆಗಳಿಗೆ ಕಾರಣ ಗಳೇನು?
ಶಿರೂರಿನಿಂದ ಉತ್ತರ ಕನ್ನಡವನ್ನು ಬೇರ್ಪಡಿಸುವ ಭೌಗೋಳಿಕ ನಕಾಶೆ ಎಂದರೆ ಗಡಿ ಭಾಗದಲ್ಲಿ ಹರಿವ ನದಿಯಾಗಿದೆ. ಹೆದ್ದಾರಿ ಎಡಪಾರ್ಶ್ವದಲ್ಲಿ ನದಿಯ ಬಳಿ ಸರ್ವೆ ನಂ.7 ಹಿಸ್ಸಾ 12 ಹಾಗೂ 13 ಉಡುಪಿ ಜಿಲ್ಲೆಗೆ ಒಳಪಡುತ್ತವೆ. ದಾಖಲೆಗಳು ಕೂಡ ಇದನ್ನು ಪುಷ್ಟೀಕರಿಸುತ್ತವೆ. ಹೆದ್ದಾರಿಯ ಬಲಭಾಗದ ಬೆಳಕೆ ಗ್ರಾಮ ಸರ್ವೆ ನಂ.223 ವ್ಯಾಪ್ತಿ ಹೆಚ್ಚುಕಮ್ಮಿ ಅಳ್ವೆಗದ್ದೆ ಕ್ರಾಸ್‌ನವರೆಗೆ ಬರುತ್ತದೆ. ಹೊಸದಾಗಿ ನಿರ್ಮಾಣವಾಗಿರುವ ಟೋಲ್‌ಗೇಟ್‌ ಕೂಡ ಅರ್ಧಭಾಗ ಉತ್ತರ ಕನ್ನಡ ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ಉಡುಪಿಯಿಂದ ಉತ್ತರಕನ್ನಡ ಜಿಲ್ಲೆಗೆ ಪ್ರವೇಶಿಸುವಾಗ ಒಂದು ಪಾಶ್ವ ಉಡುಪಿ ಜಿಲ್ಲೆ ಇನ್ನೊಂದು ಪಾಶ್ವ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುತ್ತದೆ. ನಡುವೆ ಹೆದ್ದಾರಿ ಹಾದುಹೋಗುತ್ತದೆ.ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ಕಳೆದ ಆರೇಳು ವರ್ಷಗಳ ಹಿಂದೆ ಗಡಿ ಚೆಕ್‌ಪೋಸ್ಟ್‌ ನಿರ್ಮಿಸಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇರುವಾಗ ಎರಡು ಜಿಲ್ಲೆಗಳ ಗಡಿಭಾಗದಲ್ಲಿ ರಾಷ್ಟಿªàಯ ಹೆದ್ದಾರಿಯಲ್ಲಿ ವೃತ್ತ ನಿರ್ಮಿಸಿದ್ದರು. ಒಂದು ಜಿಲ್ಲೆಯಿಂದ ಬರುವ ಸಚಿವರನ್ನು, ಅಧಿಕಾರಿಗಳನ್ನು ಸ್ವಾಗತಿಸುವ ಬೆಂಗಾವಲು ಪಡೆ ಇಲ್ಲಿಂದಲೆ ಆರಂಭವಾಗುತ್ತಿತ್ತು.

ಸಮಸ್ಯೆ ತಂದಿರುವ ಪೊಲೀಸ್‌ ಚೆಕ್‌ಪೋಸ್ಟ್‌
ಪ್ರಸ್ತುತ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳು ಸಮಸ್ಯೆಗಳು ಉಲ್ಬಣಿಸಲು ಕಾರಣವಾಗಿದೆ. ಉಡುಪಿ ಜಿಲ್ಲೆಯಿಂದ ಸಾಗಿಸುವ ಮರಳು ಜಿಲ್ಲೆಯಿಂದ ಹೊರ ಹೋಗುವಂತಿಲ್ಲ. ಮಾತ್ರವಲ್ಲದೆ ಚೆಕ್‌ಪೋಸ್ಟ್‌ ನಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಆದರೆ ನಮ್ಮದೆ ಜಿಲ್ಲೆಯ ಬಪ್ಪನಬೈಲು ಮುಂತಾದ ಊರುಗಳಿಗೆ ಮರಳು ಹಾಗೂ ಕಟ್ಟಡ ಸಾಮಗ್ರಿ ಸಾಗಿಸಬೇಕಾದರೆ ಚೆಕ್‌ಪೋಸ್ಟ್‌ ಪಕ್ಕದಲ್ಲಿರುವ ರಸ್ತೆಯಿಂದ ಸಾಗಬೇಕು.ಇತರ ಮಾರ್ಗಗಳಿಲ್ಲ. ಆದರೆ ಇಲಾಖೆ ಇದಕ್ಕೆ ಸಮ್ಮತಿ ನೀಡುವುದಿಲ್ಲ. ಇದು ಒಂದು ಪಾಶ್ವದ ಸಮಸ್ಯೆಯಾದರೆ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿ ಇರುವ ನೂಜ್‌, ಕೆಕ್ಕೋಡ್‌, ಅಡಿಬೇರು, ಹೇರ್‌ಬುಡಿR, ಹೇಜಲು ಮುಂತಾದ ಊರುಗಳಿಗೆ ಇರುವ ಏಕೈಕ ರಸ್ತೆ ಚೆಕ್‌ಪೋಸ್ಟ್‌ಗಿಂತ ಹಿಂದುಗಡೆ ಇದೆ. ಹೀಗಾಗಿ ಅಲ್ಲಿನ ವಾಹನಗಳು ಈ ರಸ್ತೆಗೆ ಚೆಕ್‌ಪೋಸ್ಟ್‌ ದಾಟಿ ಬರಬೇಕಾಗುತ್ತದೆ. ಆದರೆ ಇಲಾಖೆ ಉತ್ತರ ಕನ್ನಡದಿಂದ ಮರಳನ್ನು ಹಾಗೂ ಕಲ್ಲು ಲಾರಿಗಳನ್ನು ಚೆಕ್‌ಪೋಸ್ಟ್‌ ದಾಟಲು ಬಿಡುತ್ತಿಲ್ಲ ಹೀಗಾಗಿ ಉಡುಪಿ ಜಿಲ್ಲೆಯ ಬಪ್ಪನಬೈಲು ಹಾಗೂ ಉತ್ತರ ಕನ್ನಡ ಜಿಲ್ಲೆಯ ನೂಕ್‌, ಕೆಕ್ಕೋಡ್‌, ಅಡಿಬೇರು ಮುಂತಾದ ಊರುಗಳು ಅತ್ತ ಉತ್ತರ ಕನ್ನvವೂ ಅಲ್ಲ ಇತ್ತ ಉಡುಪಿ ಜಿಲ್ಲೆಯ ವ್ಯಾಪ್ತಿಗೂ ಸೇರಿದೆ. ಮೂಲ ಸೌಕರ್ಯ ಪಡೆಯಲು ಹೆಣಗಾಡಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಬೆಳಕೆ ಗ್ರಾಮ ಪಂಚಾಯತ್‌ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವ ಚೆಕ್‌ಪೋಸ್ಟ್‌ನ್ನು ಸ್ಥಳಾಂತರಿಸಬೇಕು ಎಂದು ಎರಡೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ಒಟ್ಟಾರೆಯಾಗಿ ಇನ್ನಷ್ಟೆ ಆರಂಭಗೊಳ್ಳಬೇಕಾದ ಹೆದ್ದಾರಿ ಟೋಲ್‌ಗೇಟ್‌ ಹಾಗೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಆರಕ್ಷಕ ಇಲಾಖೆಯ ಚೆಕ್‌ಪೋಸ್ಟ್‌ಗಳು ವಾಸ್ತವ ಸಮಸ್ಯೆಗಳನ್ನು ಮನಗಂಡು ಮೇಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಿ ಭವಿಷ್ಯದಲ್ಲಿನ ಸಮಸ್ಯೆಗಳ ಶಮನಕ್ಕಾಗಿ ಭೌಗೋಳಿಕ ಸ್ಪಷ್ಟತೆ ನೀಡಬೇಕಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Advertisement

ಕಾನೂನು ಹೋರಾಟ
ಆರಕ್ಷಕ ಇಲಾಖೆಯ ಚೆಕ್‌ಪೋಸ್ಟ್‌ ಹಾಗೂ ಟೋಲ್‌ಗೇಟ್‌ಗಳು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿವೆ.ಶಿರೂರಿನ ಪಕ್ಕದಲ್ಲಿರುವ ಅಡಿಬೇರು ಮುಂತಾದ ಊರುಗಳು ಉತ್ತರಕನ್ನಡ ವ್ಯಾಪ್ತಿಯಲ್ಲಿದ್ದರೂ ಸಹ ಉಡುಪಿ ಜಿಲ್ಲೆಯ ಅಧಿಕಾರಿಗಳು ವಾಹನ ತಡೆಯುತ್ತಾರೆ. ಹಾಗಿದ್ದರೆ ಇಲ್ಲಿಯ ಜನರು ಸರಕುಗಳನ್ನು ಎಲ್ಲಿಂದ ತರಬೇಕು.ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಸ್ಥಳಾಂತರಿಸಬೇಕು. ಈ ಕುರಿತು ಮುಂದಿನ ದಿನದಲ್ಲಿ ಕಾನೂನು ಹೋರಾಟ ಮಾಡಲಾಗುತ್ತದೆ.
– ರಮೇಶ ನಾಯ್ಕ ಅಧ್ಯಕ್ಷರು ಗ್ರಾ.ಪಂ.ಬೆಳಕೆ

ಪುನರ್‌ ಪರಿಶೀಲನೆಗೆ ಆಗ್ರಹ
ಶಿರೂರಿನ ಬಪ್ಪನಬೈಲು ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ.ಆದರೆ ಇಲ್ಲಿಗೆ ಸರಕು ಸಾಗಿಸಲು ಚೆಕ್‌ಪೋಸ್ಟ್‌ ದಾಟಿ ಬರಬೇಕಾಗಿದೆ.ಗಡಿ ಸ್ಪಷ್ಟತೆಯ ಗೊಂದಲಗಳಿರುವುದರಿಂದ ಗಡಿ ಭಾಗದ ಎರಡು ಜಿಲ್ಲೆಯ ಜನರಿಗೆ ತೊಂದರೆಯಾಗುತ್ತದೆ.ಹೀಗಾಗಿ ಜಿಲ್ಲಾಧಿಕಾರಿಗಳು ಪುನರ್‌ ಪರಿಶೀಲಿಸಬೇಕು.
ದಿಲ್‌ಶಾದ್‌ ಬೇಗಂ. ಅಧ್ಯಕ್ಷರು ಶಿರೂರು ಗ್ರಾ.ಪಂ.

 ಅರುಣ ಕುಮಾರ್‌, ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next