Advertisement

ಶಿಕ್ಷಣದಲ್ಲಿರಲಿ ಮಾನವೀಯ ಮೌಲ್ಯ

03:49 PM Mar 03, 2017 | |

ಕಲಬುರಗಿ: ಶಿಕ್ಷಣ ಕಲಿಯುವಿಕೆ ಯಾಂತ್ರಿಕ ವಾಗುತ್ತಿರುವ ಅರ್ಥಪೂರ್ಣವಾಗಲು ಶಿಕ್ಷಣ ಅಭ್ಯಾಸವು ಮಾನವೀಯ ಮೌಲ್ಯಗಳೊಂದಿಗೆ ಕರಗತ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿರುವ ಅಫಜಲಪುರ ಶಾಸಕ ಮಾಲೀಕಯ್ಯ ವಿ. ಗುತ್ತೇದಾರ ಹೇಳಿದರು. 

Advertisement

ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಗುರುವಾರ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಅಡಿ ಕಟ್ಟಲಾದ ನಾಲ್ಕು ಕೋಣೆಗಳ ಸರ್ಕಾರಿ ಪ್ರೌಢ ಶಾಲಾ ನೂತನ ಕಟ್ಟಡ ಉದ್ಘಾಟನೆ, ವಸತಿ ನಿಲಯ ಕಟ್ಟಡ ಶಂಕುಸ್ಥಾಪನೆ ಹಾಗೂ ಎಸ್ಸೆಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
 
ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಸರ್ವ ನಿಟ್ಟಿನಲ್ಲಿ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೆ ಶಿಕ್ಷಣ ಗುಣಮಟ್ಟ ಸೌಲಭ್ಯಗಳ ತಕ್ಕ ಇಲ್ಲ. ಎಲ್ಲಿ ಎಡವುತ್ತಿದ್ದೇವೆ ಎಂಬುದರ ಕುರಿತು ಚಿಂತನೆ ನಡೆಯಬೇಕಿದೆ ಎಂದರು. ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿಯೇ ಫರಹತಾಬಾದ ವಲಯದಲ್ಲಿ ಆರು ಹೊಸ ಪ್ರೌಢಶಾಲೆಗಳನ್ನು ಪ್ರಾರಂಭಿಸಲಾಗಿದೆ.

ಶಾಲೆಗಳ ವಾತಾವರಣ ಉತ್ತ,ಮಗೊಳ್ಳಲು ಎಲ್ಲ ಶಾಲೆಗಳಿಗೆ ಕಾಂಪೌಂಡ್‌ ನಿರ್ಮಾಣ ಗೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದೆ ಎಂದರು. ಪ್ರೌಢ ಶಾಲೆಯ ಹಳೆಯ ಕಟ್ಟಡ ಮೇಲ್ಚಾವಣಿ ಅಪಾಯದಲ್ಲಿರುವುದರಿಂದ ಹೊಸದಾಗಿ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next