Advertisement
ಉದಯವಾಣಿ ಎಚ್ಚರಿಸಿತ್ತು…ನೂತನ ಸೇತುವೆ ಹಾಗೂ ಸಂಪರ್ಕ ರಸ್ತೆಯ ಕಾಮಗಾರಿ ಉತ್ತಮವಾಗಿ ಪೂರ್ಣಗೊಂಡಿದ್ದರೂ ಸಂಪರ್ಕ ರಸ್ತೆ ಕಡಬ ಭಾಗದಿಂದ ಸೇತುವೆಯನ್ನು ಸೇರುವಲ್ಲಿನ ತಿರುವು ಅಪಾಯಕಾರಿಯಾಗಿರುವ ಬಗ್ಗೆ ಉದಯವಾಣಿ ಸುದಿನ ತನ್ನ ಮೇ 7ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿ, ನಿಗಮದ ಅಧಿಕಾರಿಗಳ ಗಮನ ಸೆಳೆದಿತ್ತು. ಪ್ರಸಿದ್ಧ ಪುಣ್ಯಕ್ಷೇತ್ರ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ರಾಜ್ಯ ರಸ್ತೆ ಆಗಿರುವುದರಿಂದ ಇಲ್ಲಿ ಹೆಚ್ಚಿನ ಸಂಖ್ಯೆಯ ವಾಹನ ಸಂಚಾರ ಇದ್ದು, ಅಪಘಾತ ಸಂಭವಿಸುವ ಸಾಧ್ಯತೆಗಳ ಬಗ್ಗೆ ವರದಿಯಲ್ಲಿ ಎಚ್ಚರಿಸಲಾಗಿತ್ತು.
ಹೊಸಮಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸೇತುವೆಯ ಸಂಪರ್ಕ ರಸ್ತೆಯ ಇಕ್ಕೆಲೆಗಳಲ್ಲಿ ಮತ್ತು ಮಧ್ಯದಲ್ಲಿ ಬಣ್ಣದ ಪಟ್ಟಿ ಹಾಕಲಾಗಿದೆ. ಸೇತುವೆಯಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸಿದ ಫುಟ್‌ಪಾತ್‌ಗೊàಡೆಗಳಿಗೂ ರಿಫ್ಲೆಕ್ಟರ್ ಅಳವಡಿಸಿದೆ. ಸಂಪರ್ಕ ರಸ್ತೆ ಸೇತುವೆಗೆ ಸೇರುವಲ್ಲಿ ಹಾಗೂ ಸಂಪರ್ಕ ರಸ್ತೆಯ ತಿರುವಿನಲ್ಲಿ ಝೀಬ್ರಾ ಕ್ರಾಸ್ ರೀತಿಯಲ್ಲಿ ಹಳದಿ ಬಣ್ಣದ ಪಟ್ಟಿ ಹಾಕಿ ಅದಕ್ಕೂ ರಿಫ್ಲೆಕ್ಟರ್ ಅಳವಡಿಸಿದೆ. ವಾಹನಗಳ ವೇಗ ನಿಯಂತ್ರಿಸಲು ರಸ್ತೆ ಉಬ್ಬು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
– ಮಂಜುನಾಥ್, ಎಇಇ, ಕೆಆರ್‌ಡಿಸಿಎಲ್