Advertisement
6 ತಿಂಗಳುಗಳ ಅವಧಿಯಲ್ಲಿ ತಡಂಬೈಲ್‌ನಿಂದ ಕೋಡಿಕಲ್ ವರೆಗೆ 7 ವಾಹನಗಳು ಡಿವೈಡರ್ ಹಾರಿ ಅಪಘಾತ ಸಂಭವಿಸಿದೆ. ಇದರಲ್ಲಿ ಎರಡು ಮಾತ್ರ ಟ್ರಾಫಿಕ್ ವಿಭಾಗದಲ್ಲಿ ದೂರು ದಾಖಲಾಗಿದೆ. ಉಳಿದಂತೆ ನಾಲ್ಕು ಕಾರುಗಳಿಗೆ ಸಣ್ಣ ಪುಟ್ಟ ಹಾನಿಯಾದ ಕಾರಣ ಕೇಸು ದಾಖಲಿಸದೆ ಪ್ರಯಾಣ ಮುಂದುವರಿಸಿದ್ದಾರೆ. ಓವರ್‌ಟೇಕ್ ಮಾಡುವ ಸಂದರ್ಭ ಇಂತಹ ಪ್ರಮಾದಗಳು ನಡೆಯುತ್ತಿವೆ. ರಸ್ತೆ ಡಾಮರು ಹಾಕುವ ಮಾಡಿದ ಎಡವಟ್ಟಿನಿಂದ ಡಿವೈಡರ್‌ಗಳ ಎತ್ತರ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಲೇ ಹೋಗುತ್ತಿದ್ದು, ಕೆಲವೆಡೆ ಕಾಣದಂತಾಗಿದೆ. ಕೇವಲ ಹಳದಿ ಪೈಂಟ್ ಮಾತ್ರ ಕಾಣಿಸುತ್ತಿದೆ! ಇರ್ಕಾನ್ ನಿರ್ಮಾಣದ ಸುರತ್ಕಲ್ ಕೊಟ್ಟಾರವರೆಗಿನ ರಸ್ತೆ ನಿರ್ವಹಣೆ ಗಮನಿಸಿದರೆ ಡಿವೈಡರ್‌ಗಳ ಅಯೋಮಯ ಸ್ಥಿತಿ ಕಂಡು ಬರುತ್ತಿದೆ.
Related Articles
Advertisement
ಸುರಕ್ಷಿತ ಸಂಚಾರಕ್ಕೆ ಆದ್ಯತೆ: ಹೆದ್ದಾರಿ ನಿರ್ವಹಣೆ ಹಾಗೂ ಮರು ಡಾಮರು ಅಳವಡಿಸುವ ವೇಳೆ ಅನುಸರಿಸುಬೇಕಾದ ನೀತಿ ನಿಯಮಾವಳಿ ಬಗ್ಗೆ ಸ್ಥಳೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಪರಿಶೀಲಿಸುತ್ತೇನೆ. ಹೆದ್ದಾರಿಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡಬೇಕು. ಗುತ್ತಿಗೆದಾರರ ತಪ್ಪಾಗಿದ್ದಲ್ಲಿ ಅದಕ್ಕೆ ಬೇಕಾದ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. – ಡಾ| ಭರತ್ ಶೆಟ್ಟಿ ವೈ., ಶಾಸಕರು
-ಲಕ್ಷ್ಮೀ ನಾರಾಯಣ ರಾವ್