Advertisement

ರೆಡ್‍ ಮಿ ಇಯರ್ ಬಡ್ಸ್ 3 ಪ್ರೊ: ಕಡಿಮೆ ಬಜೆಟ್‍ನ ಟ್ರೂ ವೈರ್ ಲೆಸ್‍ ಇಯರ್ ಬಡ್‍

02:11 PM Oct 26, 2021 | Team Udayavani |

ಇತ್ತೀಚೆಗೆ ಟ್ರೂ ವೈರ್ ಲೆಸ್‍ ಇಯರ್ ಬಡ್‍ (ಟಿಡಬ್ಲೂಎಸ್‍) ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಅನೇಕ ಸೆಲೆಬ್ರಿಟಿಗಳು, ಶ್ರೀಮಂತರು ತಮ್ಮ ಕಿವಿಯಲ್ಲಿ ಅ್ಯಪಲ್‍ ನ ಏರ್ ಪಾಡ್ಸ್ ಹಾಕಿಕೊಂಡು ಮೊಬೈಲ್‍ನಲ್ಲಿ ಮಾತನಾಡುವುದನ್ನು ನೋಡಿರುತ್ತೀರಿ. ಇಷ್ಟೊಂದು ದುಬಾರಿ ದರ ತೆತ್ತು ಅವನ್ನು ಬಳಸಲು ಅನೇಕರಿಗೆ ಸಾಧ್ಯವಿಲ್ಲ. ಆರಂಭಿಕ ಹಾಗೂ ಮಧ್ಯಮ ದರ್ಜೆಯಲ್ಲಿ ಉತ್ತಮ ಗುಣಮಟ್ಟದ ಮೊಬೈಲ್‍ ಗಳನ್ನು ನೀಡಿ ಜನಪ್ರಿಯವಾದ ರೆಡ್‍ ಮಿ ಬ್ರಾಂಡ್‍ ಫೋನ್‍ ಅಲ್ಲದೇ ಇನ್ನಿತರ ಅನೇಕ ಉಪಕರಣಗಳನ್ನು ಮಿತವ್ಯಯದ ದರಕ್ಕೆ ಒದಗಿಸುತ್ತಿದೆ. ಅದರಲ್ಲೊಂದು ವೈರ್ ಲೆಸ್‍ ಇಯರ್ ಬಡ್‍ ರೆಡ್‍ಮಿ ಇಯರ್ ಬಡ್ಸ್ 3 ಪ್ರೊ.

Advertisement

ಇದರ ದರ ಅಮೆಜಾನ್‍.ಇನ್‍ ನಲ್ಲಿ 2,999 ರೂ. ಇದೆ. ಇದು ನೀಲಿ, ಬಿಳಿ ಮತ್ತು ಪಿಂಕ್‍ ಬಣ್ಣದಲ್ಲಿ ದೊರಕುತ್ತದೆ.

ಟ್ರೂ ವೈರ್ ಲೆಸ್‍ ಇಯರ್ ಬಡ್‍ಗಳು ಆಕಾರದಲ್ಲಿ ಎರಡು ವಿಧ ಹೊಂದಿದೆ. ಕೆಲವು ಪೆನ್ನಿನ ಕ್ಯಾಪಿನಂತೆ, ಕಡ್ಡಿಯಂತಿರುತ್ತವೆ. ಇನ್ನು ಕೆಲವು ಕಿವಿಯಿಂದಾಚೆ ಕಡ್ಡಿ ಇರದ, ಹಾಕಿರುವುದು ಸಹ ಹೊರಗೆ ಕಾಣದಂತಹ ಪುಟ್ಟ ಡಬ್ಬಿಯ ರೀತಿಯಂಥವು. ರೆಡ್‍ ಮಿ ಇಯರ್ ಬಡ್ಸ್ 3 ಪ್ರೊ ಎರಡನೆಯ ಮಾದರಿಯದು.

ತೋರು ಬೆರಳಿನ ಒಂದು ಅಂಗುಲದಷ್ಟಿದೆ. ಮೂರು ಅಳತೆಯ ಟಿಪ್ಸ್ ಗಳಲ್ಲಿ ನಮ್ಮ ಕಿವಿ ಅಳತೆಗೆ ಹೊಂದುವುದನ್ನು ಇಯರ್ ಬಡ್‍ ಗೆ ಅಳವಡಿಸಿ ಹಾಕಿಕೊಂಡರೆ ಸರಿಯಾಗಿ ಕೂರುತ್ತದೆ.

Advertisement

ಇದು ಕ್ವಾಲ್‍ ಕಾಂ ಕ್ಯೂಸಿಸಿ 3040 ಚಿಪ್‍ ಸೆಟ್‍ ಹೊಂದಿದೆ. ಬ್ಲೂಟೂತ್‍ 5.2 ಅನ್ನು ಬೆಂಬಲಿಸುತ್ತದೆ. ಐಪಿಎಕ್ಸ್ 4, ಬೆವರು ಹಾಗೂ ಸಣ್ಣಪುಟ್ಟ ನೀರಿನ ಹನಿಗಳ ನಿರೋಧಕ ಗುಣ ಹೊಂದಿದೆ. ಈ ಇಯರ್ ಬಡ್‍ನ ಆಡಿಯೋ ಗುಣಮಟ್ಟ ಅದರ ದರ ಪಟ್ಟಿಯನ್ನು ನೋಡಿದಾಗ ಚೆನ್ನಾಗಿದೆ. ಇನ್ನಷ್ಟು ಬಾಸ್‍ ಬೇಕಿತ್ತು ಅನಿಸುತ್ತಾದರೂ ಅದರ ದರಪಟ್ಟಿಯಲ್ಲಿ ಇದಕ್ಕಿಂತ ಹೆಚ್ಚು ಬಯಸುವಂತಿಲ್ಲ! ಹಾಗಾಗಿ ಇದರಲ್ಲಿ ವೋಕಲ್‍, ಟ್ರೆಬಲ್‍, ಬಾಸ್‍ ಗಳನ್ನು ಬ್ಯಾಲೆನ್ಸ್ ಮಾಡಲಾಗಿದೆ.

ಈ ದರದಲ್ಲಿ ಇನ್ನೊಂದು ಫೀಚರ್ ಒದಗಿಸಿರುವುದು ವಿಶೇಷ. ಕಿವಿಯಿಂದ ಇಯರ್ ಬಡ್‍ ತೆಗೆದರೆ, ಆಡಿಯೋ ಪ್ರಸಾರ ನಿಲ್ಲುತ್ತದೆ. ಇದಕ್ಕಾಗಿ ಇನ್‍ಫ್ರಾರೆಡ್‍ ಸೆನ್ಸರ್ ಅಳವಡಿಸಲಾಗಿದೆ.

ಸಂಗೀತದೊಂದಿಗೆ ಇದನ್ನು ಮೊಬೈಲ್‍ ಫೋನ್‍ನಲ್ಲಿ ಮಾತನಾಡಲು ಹ್ಯಾಂಡ್ಸ್ ಫ್ರೀ ಇಯರ್ ಫೋನ್‍ ಆಗಿ ಬಳಸಬಹುದು. ಹೊರಾಂಗಣದಲ್ಲಿ ಆಚೀಚೆ ವಾಹನಗಳ ಶಬ್ದ, ಗಾಳಿಯ ಶಬ್ದ ಅತ್ತ ಬದಿಯಲ್ಲಿ ಮಾತನಾಡುವವರಿಗೆ ಅಡಚಣೆ ಉಂಟು ಮಾಡಬಹುದು. ಹಾಗಾಗಿ ಒಳಾಂಗಣದಲ್ಲಿ ಬಳಸಲು ಇದು ಸೂಕ್ತ ಇಯರ್ ಬಡ್‍. ನಿಮ್ಮ ಕೆಲಸಗಳನ್ನು ಮಾಡುತ್ತಲೇ ನಿಮ್ಮ ಗೆಳೆಯರೊಂದಿಗೆ ಫೋನ್‍ ಕೈಯಲ್ಲಿ ಹಿಡಿಯದೇ ಆರಾಮಾಗಿ ಮಾತನಾಡಬಹುದು.

ರೆಡ್‌ಮಿ ಇಯರ್‌ ಬಡ್ಸ್ 3 ಪ್ರೊ ನ ದೊಡ್ಡ ಪ್ಲಸ್ ಪಾಯಿಂಟ್‍ ಎಂದರೆ ಅದರ ಬ್ಯಾಟರಿ ಬಾಳಿಕೆ. ಇದರಲ್ಲಿ 600 ಎಂಎಎಚ್‍ ಬ್ಯಾಟರಿ ಇದೆ. ಅನೇಕ ಟಿಡಬ್ಲೂ ಎಸ್‍ ಗಳಲ್ಲಿ ಬ್ಯಾಟರಿ ಬೇಗ ಮುಗಿಯುತ್ತದೆ. ಮತ್ತು ಕೇಸ್‍ ಗಳಲ್ಲೂ ಬೇಗ ಬ್ಯಾಟರಿ ಖಾಲಿಯಾಗುತ್ತದೆ. ಆದರೆ ಇದು ಹಾಗಲ್ಲ. ಇಯರ್‍ ಬಡ್‍ ಗಳು 5-6 ಗಂಟೆ ಕೆಲಸ ನಿರ್ವಹಿಸುತ್ತವೆ. ಅಲ್ಲದೇ ಕೇಸ್ ಅನ್ನು ಒಮ್ಮೆ ಚಾರ್ಜ್‍ ಮಾಡಿದರೆ 30 ಗಂಟೆ ಬಳಸಬಹುದು. ಕೆಲವು ಇಯರ್ ಬಡ್‍ಗಳ ಸ್ಪೆಷಿಫಿಕೇಷನ್‍ನಲ್ಲಿ 28 ಗಂಟೆ 32 ಗಂಟೆ ಎಂದು ಬರೆಯಲಾಗಿರುತ್ತದೆ. ಆದರೆ ವಾಸ್ತವದಲ್ಲಿ ಅಷ್ಟು ಹೊತ್ತು ಬ್ಯಾಟರಿ ಬಾಳಿಕೆ ಬರುವುದಿಲ್ಲ. ಆದರೆ ಇದರಲ್ಲಿ ಪ್ರತಿದಿನ 4-5 ಗಂಟೆ ಬಳಸಿ, ಕೇಸ್‍ನಲ್ಲಿ ಹಾಕಿ ಮತ್ತೆ ಬಳಸಿದರೆ, ಕೇಸ್‍ನ ಚಾರ್ಜ್‍ 4-5 ದಿನಗಳಿಗೂ ಹೆಚ್ಚು ಸಮಯ ಬರುತ್ತದೆ. ವೇಗದ ಚಾರ್ಜಿಂಗ್ ಇಲ್ಲ ಹಾಗಾಗಿ ಸಂಪೂರ್ಣವಾಗಿ ಬರಿದಾದಾಗ ಕೇಸ್ ರೀಚಾರ್ಜ್ ಮಾಡಲು ಸುಮಾರು ಮೂರು ಗಂಟೆ ತೆಗೆದುಕೊಳ್ಳುತ್ತದೆ.

ಇದರ ದರ ಪ್ರಸ್ತುತ 2999 ರೂ. ಇದ್ದರೂ ಅಮೆಜಾನ್‍ನಲ್ಲಿ ಈಗ ದೀಪಾವಳಿ ವಿಶೇಷ ಆಫರ್ ಸಮಯದಲ್ಲಿ ಕೊಂಡರೆ 2700 ಕ್ಕೆ ದೊರಕುತ್ತದೆ.

ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next