Advertisement

ರಾಜ್ಯದ ಕೆಂಪು, ಕಿತ್ತಳೆ, ಹಳದಿ, ಹಸಿರು ವಲಯಗಳು

08:33 AM Apr 28, 2020 | Sriram |

ಬೆಂಗಳೂರು: ರಾಜ್ಯದಲ್ಲಿ 15ಕ್ಕಿಂತ ಹೆಚ್ಚು ಕೋವಿಡ್ 19 ಸೋಂಕು ಸಕ್ರಿಯ ಪ್ರಕರಣಗಳಿರುವ ಏಳು ಜಿಲ್ಲೆ ಹಾಗೂ 14 ತಾಲೂಕುಗಳನ್ನು ಕೋವಿಡ್ 19 ಕೆಂಪು ವಲಯಗಳನ್ನಾಗಿ ರಾಜ್ಯ ಆರೋಗ್ಯ ಇಲಾಖೆ ಘೋಷಿಸಿದೆ.

Advertisement

ಕೇಂದ್ರ ಆರೋಗ್ಯ ಇಲಾಖೆ ಸೂಚನೆಯಂತೆ ಈ ವಿಂಗಡಣೆ ಮಾಡಿದ್ದು, ಯಾವುದೇ ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳು ಇಲ್ಲದ ಜಿಲ್ಲೆಯನ್ನು ಹಸಿರು ವಲಯ, 1 ರಿಂದ 5ರವರೆಗಿನ ಸಕ್ರಿಯ ಪ್ರಕರಣ ಹೊಂದಿರುವ ಜಿಲ್ಲೆ ಅಥವಾ ತಾಲೂಕನ್ನು ಹಳದಿ ವಲಯ, 6 ರಿಂದ 14 ಪ್ರಕರಣ ಹೊಂದಿರುವ ಜಿಲ್ಲೆಯನ್ನು ಕಿತ್ತಳೆ ವಲಯ ಹಾಗೂ 15ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣ ಹೊಂದಿರುವ ಜಿಲ್ಲೆಯನ್ನು ಕೆಂಪು ವಲಯ ಎಂದು ಪಟ್ಟಿ ಮಾಡಲಾಗಿದೆ.

ಸೋಮವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಾಜ್ಯದ ಏಳು ಜಿಲ್ಲೆಗಳು ಕೆಂಪು ವಲಯದಲ್ಲಿದ್ದರೆ, 6 ಜಿಲ್ಲೆಗಳು ಕಿತ್ತಲೆ ವಲಯದಲ್ಲಿ, ಐದು ಜಿಲ್ಲೆಗಳ: ಹಳದಿ ವಲಯದಲ್ಲಿ, 14 ಜಿಲ್ಲೆಗಳು ಹಸಿರು ವಲಯದಲ್ಲಿವೆ. ಇದಲ್ಲದೆ, ತಾಲೂಕುವಾರು ಪಟ್ಟಿಯನ್ನೂ ಬಿಡುಗಡೆ ಮಾಡಿದ್ದು ಕೆಂಪು ವಲಯದ ಏಳು ಜಿಲ್ಲೆಗಳ 14 ತಾಲೂಕುಗಳು ಕೆಂಪು ಪಟ್ಟಿಯಲ್ಲಿವೆ.

ಕೆಂಪು ವಲಯದ ಜಿಲ್ಲೆಗಳು: ಬೆಂಗಳೂರು ನಗರ, ಮೈಸೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ

ಕಿತ್ತಳೆ ವಲಯ : ಮಂಡ್ಯ, ದಕ್ಷಿಣ ಕನ್ನಡ, ಬೀದರ್‌, ಧಾರವಾಡ, ಬಳ್ಳಾರಿ,

Advertisement

ಹಳದಿ ವಲಯ : ಉತ್ತರ ಕನ್ನಡ, ಗದಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು,

ಹಸಿರು ವಲಯ: ದಾವಣಗೆರೆ, ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಉಡುಪಿ, ಚಿಕ್ಕಮಗಳೂರು, ಹಾಸನ, ರಾಮನಗರ, ಕೊಡಗು, ಕೋಲಾರ, ಚಿತ್ರದುರ್ಗ,ಶಿವಮೊಗ್ಗ, ಚಾಮರಾಜನಗರ

ಕೆಂಪು ಪಟ್ಟಿಯಲ್ಲಿರುವ ತಾಲೂಕುಗಳು: ಬೀದರ್‌, ಕಲಬುರ್ಗಿ, ವಿಜಯಪುರ, ಜಮಖಂಡಿ, ರಾಯಬಾಗ್‌, ಮುಧೋಳ, ಬೆಳಗಾವಿ, ಹುಬ್ಬಳ್ಳಿ, ಹೊಸಪೇಟೆ, ಮೈಸೂರು, ನಂಜನಗೂಡು, ಮಳವಳ್ಳಿ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ತಾಲೂಕು.

Advertisement

Udayavani is now on Telegram. Click here to join our channel and stay updated with the latest news.

Next