Advertisement
ಆಚಾರನಿಷ್ಠರು ಬೆಳಗ್ಗಿನಿಂದಲೇ ಉಪವಾಸ ಕುಳಿತು ರಾತ್ರಿ ಜಪಪೂಜಾದಿಗಳನ್ನು ನಡೆಸಿದರೆ, ಪುರೋಹಿತರು ಗ್ರಹಣ ಶಾಂತಿ ನಡೆಸಿದರು. ಸಂಜೆ ಸುಮಾರು 7 ಗಂಟೆ ಸುಮಾರಿಗೆ ಗ್ರಹಣಗ್ರಸ್ತ ಚಂದಿರನ ವೀಕ್ಷಣೆಗೆ ಹವ್ಯಾಸಿ ಖಗೋಲ ಶಾಸ್ತ್ರಜ್ಞರ ಸಂಘವು ಮಂಗಳೂರು ಕುಲ ಶೇಖರದ ಕೋರ್ಡೆಲ್ ಹಾಲ್ ಎದುರಿನ ಸ್ಫೂರ್ತಿ ಕಾಂಪ್ಲೆಕ್ಸ್ ಮೇಲುಗಡೆ, ಉಡುಪಿಯಲ್ಲಿ ಪಿಪಿಸಿ ಎಂಬಿಎ ಕಟ್ಟಡದ ಮೇಲೆ, ಮೂಡಬಿದಿರೆಯ ಮಹಾವೀರ ಕಾಲೇಜು ಮೊದಲಾದೆಡೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಜೆ ಯಾಗು ತ್ತಿದ್ದಂತೆ ಸ್ಥಳೀಯರು ಅನೇಕ ಮಂದಿ ಇಲ್ಲಿಗೆ ಆಗಮಿಸಿ ಗ್ರಹಣವನ್ನು ಕಣ್ತುಂಬಿಕೊಂಡರು. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಪ್ರಮುಖ ದೇಗುಲ ಗಳ ಪೂಜೆ, ದೇವರ ದರುಶನದ ಅವಧಿಯಲ್ಲಿ ವ್ಯತ್ಯಯವಾಗಿತ್ತು.
Related Articles
Advertisement
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಮಧ್ಯಾಹ್ನ 1ರಿಂದ ರಾತ್ರಿ 4 ಗಂಟೆ ಹೊರತುಪಡಿಸಿ ದೇವರ ದರುಶನಕ್ಕೆ ಅವಕಾಶ ನೀಡಲಾಗಿತ್ತು. ಕುದ್ರೋಳಿಯ ಶ್ರೀ ಭಗವತಿ ದೇವಾಲಯದಲ್ಲಿ ದೇವರ ದರುಶನಕ್ಕೆ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅವಕಾಶವಿರಲಿಲ್ಲ. ಮನೆಗಳಲ್ಲಿ ರಾತ್ರಿ ಗ್ರಹಣ ಬಿಟ್ಟ ಬಳಿಕ ಆಹಾರ ಸ್ವೀಕರಿಸಿದರು.
ಜನಸಂಚಾರ ವಿರಳ: ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಗರ ದಲ್ಲಿ ಜನಸಾಮಾನ್ಯರ ಓಡಾಟ ವಿರಳವಾಗಿತ್ತು. ಸಾಮಾನ್ಯ ವಾಗಿ ಸಂಜೆಯ ಸಮಯದಲ್ಲಿ ಮಂಗಳೂರಿನ ಜ್ಯೋತಿ ವೃತ್ತ, ಕಂಕನಾಡಿ, ಹಂಪನಕಟ್ಟ, ಪಿವಿಎಸ್ ವೃತ್ತ, ಸ್ಟೇಟ್ ಬ್ಯಾಂಕ್, ಉಡುಪಿಯ ಕಲ್ಸಂಕ, ಬನ್ನಂಜೆ ಸಹಿತ ನಗರದ ಅನೇಕ ರಸ್ತೆಗಳು ಟ್ರಾಫಿಕ್ ಸಮಸ್ಯೆ ಎದು ರಾಗು ತ್ತದೆ. ಆದರೆ ಗ್ರಹಣ ಹಿನ್ನೆಲೆಯಲ್ಲಿ ಟ್ರಾಫಿಕ್ ಮುಕ್ತ ವಾಗಿತ್ತು. ಗ್ರಹಣ ರಾತ್ರಿ ಸಂಭವಿಸಿದ್ದೂ ಸಂಚಾರ ವಿರಳಕ್ಕೆ ಪೂರಕವಾಯಿತು. ಅನೇಕ ಹೊಟೇಲ್‌ಗಳ ವ್ಯವಹಾರವೂ ಕಡಿಮೆಯಾಗಿತ್ತು.