ಕಾಸರಗೋಡು: ಕರ್ನಾಟಕಕ್ಕೆ ಹೊಂದಿಕೊಂಡಿರುವ ಗಡಿ ಪಂಚಾಯತ್‌ಗಳಾದ ಮಂಜೇಶ್ವರ, ಮೀಂಜ, ವರ್ಕಾಡಿಗಳಲ್ಲಿ ಕೆಂಗಣ್ಣು ರೋಗ ಹರಡುತ್ತಿರುವ ಭೀತಿ ಯಿಂದಾಗಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ಪಂಚಾಯತ್ ಅಧಿಕಾರಿಗಳು ಕರೆ ನೀಡಿದ್ದಾರೆ. ಕರ್ನಾಟಕದಲ್ಲಿ ಕಳೆದ ಎರಡು ವಾರಗಳಿಂದ ಕೆಂಗಣ್ಣು ರೋಗ ವ್ಯಾಪಕವಾಗಿ ಹರಡುತ್ತಿದ್ದು, ಅತ್ತಿತ್ತ ಸಂಚರಿಸುವವರು ಜಾಗೃತರಾಗಿರುವಂತೆ ತಿಳಿಸಲಾಗಿದೆ.
ಮಂಜೇಶ್ವರ ಹಾಗೂ ಪರಿಸರದಲ್ಲಿ ವಾರ್ಷಿ ಕೋತ್ಸವ, ವಿವಿಧ ಹಬ್ಬಗಳು, ಶಾಲಾ ಕಲೋತ್ಸವ ಜರಗಲಿದ್ದು, ಈ ವೇಳೆ ಕೆಂಗಣ್ಣು ಬಾಧಿತರು ಮನೆ ಯಲ್ಲೇ ಉಳಿದು ಸಹಕರಿಸಬೇಕೆಂದು ಈ ಪಂಚಾ ಯತ್‌ಗಳ ಅಧ್ಯಕ್ಷರು ಕರೆ ನೀಡಿದ್ದಾರೆ. ರೋಗ ಲಕ್ಷಣ ವಿರುವವರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಔಷಧ ಪಡೆದುಕೊಳ್ಳುವಂತೆಯೂ ತಿಳಿಸಿದ್ದಾರೆ.
ಬೆಳ್ತಂಗಡಿಯಲ್ಲೂ ಕೆಂಗಣ್ಣು ಭೀತಿ
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿಗೂ ಕೆಂಗಣ್ಣು ಕಾಯಿಲೆ ವ್ಯಾಪಿಸಿದ್ದು, ದಿನಂಪ್ರತಿ 20ರಿಂದ 30 ಪ್ರಕರಣಗಳು ತಾಲೂಕಿನ ಆಸ್ಪತ್ರೆಗಳಿಂದ ವರದಿಯಾಗುತ್ತಿವೆ.
ಬಾಧಿತರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳೇ ಹೆಚ್ಚಿದ್ದು ಕೆಂಗಣ್ಣಿನ ವೈರಸ್ ಬಹಳಷ್ಟು ವೇಗವಾಗಿ ಹರಡುತ್ತಿದೆ. ರೋಗ ಲಕ್ಷಣ ಕಂಡು ಬಂದರೆ ಗುಣವಾಗುವ ತನಕ ಶಾಲೆಗೆ ಬರದಂತೆ ಮಕ್ಕಳಿಗೆ ಸೂಚಿಸಲಾಗುತ್ತಿದೆ.
ಯಾವುದೇ ಅಪಾಯ ಇಲ್ಲದಿದ್ದರೂ ಹರಡುವ ಕಾಯಿಲೆಯಾಗಿರುವುದರಿಂದ ಮುಂಜಾಗ್ರತೆ ಸೂಕ್ತ. ಲಕ್ಷಣ ಕಂಡುಬಂದ ತತ್‌ಕ್ಷಣ ಮನೆಮದ್ದಿಗಿಂತ ಹತ್ತಿರದ ಆಸ್ಪತ್ರೆಯಿಂದ ಔಷಧ ಪಡೆಯುವುದು ಸೂಕ್ತ. ಶಾಲೆಗಳಿಗೆ ತೆರಳಿ ಕಣ್ಣಿಗೆ ಡ್ರಾಪ್ಸ್ ಹಾಕಲು ಆಸ್ಪತ್ರೆಗಳಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಸರಕಾರಿ ಆಸ್ಪತ್ರೆಯ ನೇತ್ರ ತಜ್ಞೆ ಡಾ| ಶಿಲ್ಪಾ ತಿಳಿಸಿದ್ದಾರೆ.
Related Articles
ಇದನ್ನೂ ಓದಿ: ದೋಣಿಯಲ್ಲೇ ಸಾಗುತ್ತಿದೆ “ಕುರು ಕುದ್ರು’ ವಾಸಿಗಳ ಬದುಕು… ನದಿ ದಾಟಲು ದೋಣಿಯೇ ಆಸರೆ