Advertisement

ರೆಡ್‌ಕ್ರಾಸ್‌ ಸಿಬಂದಿ ಮೇಲೆ ಐಸಿಸ್‌ ದಾಳಿ: 6 ಸಾವು

03:45 AM Feb 09, 2017 | Team Udayavani |

ಕಾಬೂಲ್‌: ಆಫ್ಘಾನಿಸ್ಥಾನದ ಉತ್ತರ ಭಾಗದ ಜೋವ್‌ಜಾನ್‌ ಎಂಬಲ್ಲಿ ಶಂಕಿತ ಐಸಿಸ್‌ ಉಗ್ರರು ರೆಡ್‌ಕ್ರಾಸ್‌ ಸಿಬಂದಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 6 ಮಂದಿ ಮೃತಪಟ್ಟಿದ್ದು,  ಇಬ್ಬರು ನಾಪತ್ತೆಯಾಗಿದ್ದಾರೆ. ಹಿಮಾವೃತ ಪ್ರದೇಶದಲ್ಲಿ ಪರಿಹಾರ ಸಾಮಗ್ರಿಗಳನ್ನು ಹಂಚುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.  ಮತ್ತಿಬ್ಬರು ಕಾಣೆಯಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರೆಡ್‌ಕ್ರಾಸ್‌ ಮೇಲೆ ನಡೆಯುತ್ತಿರುವ ಅತ್ಯಂತ ಭೀಕರ ದಾಳಿ ಇದಾಗಿದೆ.  ಐಸಿಸ್‌ ಉಗ್ರರ ಹಿಡಿತವಿರುವ 
ಪ್ರದೇಶದಲ್ಲಿ ನೆರವು ಕಾರ್ಯ ಕೈಗೊಳ್ಳುವುದು ಬೇಡ ಎಂದು ಸಿಬಂದಿಗೆ ಎಚ್ಚರಿಕೆ ನೀಡಿದ್ದೆವು. ಆದರೂ ಅವರು  ಪ್ರದೇಶಕ್ಕೆ ತೆರಳಿ ಕರ್ತವ್ಯ ನಿರ್ವಹಿಸುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next