Advertisement
ಮರುಬಳಕೆ ಮಾಡಬಹುದಾದ ಸ್ಪೇಸ್ ಶಟಲ್‌ಗಳ ಅಭಿವೃದ್ಧಿ ಪ್ರಕ್ರಿಯೆಯನ್ನು 2016ರಿಂದಲೂ ಇಸ್ರೋ ನಡೆಸುತ್ತಿದೆ. ಈ ಬಾಹ್ಯಾಕಾಶ ನೌಕೆಗಳು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿ ವಾಪಸ್ ಭೂಮಿಗೆ ಬಂದು ತಲುಪುತ್ತವೆ. ಅನಂತರ ಇದೇ ವಾಹಕಗಳನ್ನು ಬಳಸಿ ಇನ್ನೊಂದು ಉಪಗ್ರಹವನ್ನು ಕಕ್ಷೆಗೆ ಕಳುಹಿಸಬಹುದು. ಇದರಿಂದ ಉಡಾವಣೆ ವೆಚ್ಚ ಗಮನಾರ್ಹವಾಗಿ ಇಳಿಕೆಯಾಗುತ್ತದೆ.
ಈ ಪ್ರಯೋಗವನ್ನು ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಫಾಲ್ಕನ್ 9 ರಾಕೆಟ್‌ಗಳು ಯಶಸ್ವಿಯಾಗಿ ಮಾಡಿವೆ. ಇಸ್ರೋ ಕೂಡ 2016ರ ಮೇ 23ರಂದು ಯಶಸ್ವಿಯಾಗಿ ಪ್ರಯೋಗ ಮಾಡಿತ್ತು. ಭೂಮಿ ಮೇಲೆ ಪ್ರಯೋಗ
ಈ ಬಾರಿ ಪ್ರಾಯೋಗಿಕವಾಗಿ ಭೂಮಿಯ ಮೇಲೆಯೇ ಸ್ಪೇಸ್ ಶಟಲ್ ಇಳಿಸುವ ಪ್ರಯೋಗ ಮಾಡಲಿದೆ. ಚಳ್ಳಕೆರೆಯಲ್ಲಿ ಸುಮಾರು 2.2 ಕಿ.ಮೀ. ಉದ್ದದ ರನ್‌ವೇ ನಿರ್ಮಿಸಲಾಗಿದೆ. ಈ ರನ್‌ವೇ ಮೇಲೆ 3 ಕಿ.ಮೀ. ಎತ್ತರದಿಂದ ಹೆಲಿಕಾಪ್ಟರ್ ಬಳಸಿ ಸ್ಪೇಸ್ ಶಟಲ್ ಅನ್ನು ಕೆಳಕ್ಕೆ ಎಸೆಯ ಲಾಗುತ್ತದೆ. ಸ್ವಲ್ಪ ಹೊತ್ತು ಹಾರಾಡಿದ ಬಳಿಕ ಇದು ವಿಮಾನದ ರೀತಿಯಲ್ಲೇ ರನ್‌ವೇ ಯಲ್ಲಿ ಇಳಿಯಲಿದೆ. ಇದರಲ್ಲಿನ ಕಂಪ್ಯೂಟರ್‌ಗಳೇ ಶಟಲ್ ಅನ್ನು ಸಂಪೂರ್ಣ ನಿಯಂತ್ರಣ ಮಾಡಲಿವೆ. ಯಾವಾಗ ಈ ಸ್ಪೇಸ್ ಶಟಲ್ ಪ್ರಯೋಗ ನಡೆಸಲಾಗುತ್ತದೆ ಎಂಬುದರ ಬಗ್ಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.