Advertisement
ನಗರದ ದೇವರಾಜ ಅರಸು ಕಾಲನಿ ನಿವಾಸಿ ಅನ್ವರ್ ಅಲಿ ಶಾಬುದ್ದೀನ್ ಎಕ್ಲಾಸಪುರ (18) ಸೈಕಲ್ ಮೇಲೆ ರಾ.ಹೆ. 63ರಲ್ಲಿ ಬಿಇಒ ಕಚೇರಿ ಮುಂಭಾಗದಲ್ಲಿ ತೆರಳುತ್ತಿದ್ದಾಗ ಸಾರಿಗೆ ಸಂಸ್ಥೆ ಬಸ್ ಈತನ ಕಾಲುಗಳ ಮೇಲೆ ಚಲಿಸಿದೆ. ತೀವ್ರ ರಕ್ತಸ್ರಾವದಿಂದ ರಸ್ತೆ ಮೇಲೆ ಬಿದ್ದು ಒದ್ದಾಡುತ್ತಿದ್ದ. ಅಲ್ಲಿ ಸೇರಿದ್ದ ಜನರಿಗೆ ಆತ “ನನ್ನನ್ನು ಆಸ್ಪತ್ರೆಗೆ ದಾಖಲಿಸಿ, ನಾನು ಬದುಕಬೇಕು…’ ಎಂದು ಅಂಗಲಾಚಿದರೂ ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಿಲ್ಲ. ಸ್ಥಳದಲ್ಲಿದ್ದವರು ಆತನ ನರಳಾಟವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡರು. ಯುವಕ ಅರೆಪ್ರಜ್ಞಾವಸ್ಥೆಗೆ ತಲುಪುತ್ತಿದ್ದಂತೆ ಎಚ್ಚೆತ್ತ ಜನರು ಆತನನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆಗಲೇ ಕಾಲ ಮಿಂಚಿಹೋಗಿತ್ತು. Advertisement
ಆಸ್ಪತ್ರೆಗೆ ದಾಖಲಿಸದೆ ವೀಡಿಯೋ!; ಅಪಘಾತದಲ್ಲಿ ಮೃತಪಟ್ಟ ಯುವಕ
03:45 AM Feb 02, 2017 | |
Advertisement
Udayavani is now on Telegram. Click here to join our channel and stay updated with the latest news.