ಕೊಲಂಬೊ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ನೆರೆ ರಾಷ್ಟ್ರ ಲಂಕಾದಲ್ಲಿ ಶತಮಾನ ದಷ್ಟು ಹಳೆಯದಾದ ರೈಲು ಹಳಿ ಪುನರ್ ನಿರ್ಮಾಣ ಕಾರ್ಯವನ್ನು ಸೋಮವಾರ ಆರಂಭಿಸಲಾಗಿದ್ದು, ಭಾರತದ ನೆರವಿನೊಂದಿಗೆ ಈ ಕಾರ್ಯ ಸಂಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
252 ಕಿ.ಮೀ. ವ್ಯಾಪ್ತಿಯ ಉತ್ತರ ರೈಲು ಮಾರ್ಗದಲ್ಲಿ ಯೋಜನೆಯ ಮೊದಲಹಂತವಾಗಿ ಮೆಡವಚ್ಚಿಯಾ ಹಾಗೂ ಮಧು ರೋಡ್ ನಡುವಿನ 43 ಕಿ.ಮೀ.ನಲ್ಲಿ ಹಳಿ ಪುನರ್ ನಿರ್ಮಾಣವಾಗಲಿದ್ದು, ಲಂಕಾದ ಹಲವು ರೈಲ್ವೇ ಪುನರ್ ನಿರ್ಮಾಣ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದ ಭಾರತೀಯ ಸಂಸ್ಥೆ ಐಆರ್‌ಸಿಒಎನ ಸಂಸ್ಥೆಯೇ ಈ ಯೋಜನೆಯನ್ನೂ ಮುನ್ನಡೆಸಲಿದೆ.