Advertisement
ಕೇಂದ್ರ ಸರಕಾರವು ಸಾಮಾಜಿಕ ಆರ್ಥಿಕ ಜಾತಿ ಗಣತಿ-2011ರಲ್ಲಿ ಕೈ ಬಿಟ್ಟು ಹೋದ ವಸತಿ ಮತ್ತು ನಿವೇಶನ ರಹಿತರ ಸಮೀಕ್ಷೆ ಕೈಗೊಳ್ಳಲು 2018-19ರಲ್ಲಿ ತಿಳಿಸಿತ್ತು. ಅರ್ಹರನ್ನು ಗುರುತಿಸಿ ನಿಗಮದ ವೆಬ್‌ಸೈಟ್‌ನಲ್ಲಿ ನಮೂದಿಸಲು ಕಾಲಾವಕಾಶ ನೀಡಿ ಕೇಂದ್ರ ಸರಕಾರದ ಸೂಚನೆಯಂತೆ ಕಳೆದ ವರ್ಷ ಮಾ. 7ಕ್ಕೆ ಅಂತಿಮಗೊಳಿಸಲಾಗಿತ್ತು. ಆ ಬಳಿಕ ಹೊಸದಾಗಿ ಹೆಸರು ಸೇರ್ಪಡೆಗೆ ಅವಕಾಶವಿರಲಿಲ್ಲ.
ಸಮೀಕ್ಷೆಯಲ್ಲಿ ನಿವೇಶನರಹಿತರು ಕೈಬಿಟ್ಟು ಹೋಗಿರುವುದಾಗಿ ಮತ್ತು ಹೊಸದಾಗಿ ನಮೂ ದಿಸಲು ಅವಕಾಶ ನೀಡುವಂತೆ ಸಚಿವರು, ಶಾಸಕರು ಮತ್ತು ಜಿಲ್ಲೆಗಳಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮರುಸಮೀಕ್ಷೆಗೆ ಉದ್ದೇಶಿಸಲಾಗಿದೆ. ಜತೆಗೆ ಪ್ರತೀ ತಿಂಗಳು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿಯೂ ಈ ವಿಚಾರ ಚರ್ಚೆಗೆ ಬರುತ್ತಿತ್ತು. ಆದ್ದರಿಂದ ಇದೊಂದು “ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಕೈಬಿಟ್ಟು ಹೋಗಿರುವ ಅರ್ಹ ನಿವೇಶನರಹಿತರನ್ನು ನಮೂದಿಸಲು ಅನುಮತಿ ಕೋರಿ ನಿಗಮವು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಸರಕಾರ ಅನುಮೋದನೆ ನೀಡಿದೆ.
ಕೇವಲ ನಿವೇಶನರಹಿತರನ್ನು ನಮೂದಿಸಲು ಮಾತ್ರ ಸದ್ಯ ಅವಕಾಶ ನೀಡಲಾಗಿದೆ. ಎ. 15ರ ಅಂತಿಮ ದಿನಾಂಕವಾಗಿರುತ್ತದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
Related Articles
– ಆರ್. ಸೆಲ್ವಮಣಿ, ಸಿಇಒ, ದ.ಕ. ಜಿ.ಪಂ.
Advertisement