Advertisement

ಅಂಚೆ ಮತದಾನದ ವ್ಯವಸ್ಥೆ ಬದಲಾವಣೆಗೆ ಶಿಫಾರಸು

10:50 PM Sep 21, 2022 | Team Udayavani |

ನವದೆಹಲಿ: ದುರುಪಯೋಗ ತಡೆಯುವ ನಿಟ್ಟಿನಲ್ಲಿ ಚುನಾವಣೆ ಕರ್ತವ್ಯದಲ್ಲಿರುವವರಿಗಾಗಿ ಪ್ರಸ್ತುತ ಇರುವ ಅಂಚೆ ಮತದಾನದ ವ್ಯವಸ್ಥೆಯಲ್ಲಿ ಬದಲಾವಣೆ ತರುವಂತೆ ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ ಶಿಫಾರಸು ಮಾಡಿದೆ.

Advertisement

ಚುನಾವಣೆ ಕರ್ತವ್ಯದಲ್ಲಿರುವವರು ನಿಗದಿಪಡಿಸಿದ ಚುನಾವಣಾ ಕೇಂದ್ರದಲ್ಲಿ ನಿಗದಿಪಡಿಸಿದ ದಿನದಂದು ಸ್ವಯಂ ಮತದಾನ ಮಾಡಬೇಕು. ದೀರ್ಘ‌ ಅವಧಿಯವರೆಗೆ ಬ್ಯಾಲೆಟ್‌ ಪೇಪರ್‌(ಮತಪತ್ರ)ಗಳನ್ನು ಅವರ ಬಳಿ ಇಟ್ಟುಕೊಳ್ಳಬಾರದು ಎಂಬ ನಿಯಮ ಜಾರಿಗೆ ತರುವಂತೆ ಆಯೋಗ ಕೋರಿದೆ.

ಚುನಾವಣಾ ಕರ್ತವ್ಯದಲ್ಲಿರುವವರು ತಮ್ಮ ಬಳಿ ದೀರ್ಘ‌ಕಾಲದವರೆಗೆ ಮತಪತ್ರಗಳನ್ನು ಇಟ್ಟುಕೊಳ್ಳುವುದರಿಂದ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳ ಅನಗತ್ಯ ಪ್ರಭಾವ, ಬೆದರಿಕೆ, ಲಂಚ ಮತ್ತು ಇತರೆ ಅಕ್ರಮಕ್ಕೆ ಒಳಗಾಗುವ ಸಂಭವವಿರುತ್ತದೆ. ಈ ರೀತಿಯ ಸಂಭಾವ್ಯ ದುರುಪಯೋಗ ತಪ್ಪಿಸಲು ನೂತನ ನಿಯಮದ ಜಾರಿಗೆ ಪ್ರಸ್ತಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆ.16ರಂದು ಕೇಂದ್ರ ಚುನಾವಣಾ ಆಯೋಗ ಮುಖ್ಯಸ್ಥ ರಾಜೀವ್‌ ಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ “ವೋಟರ್‌ ಫೆಸಿಲಿಟೇಶನ್‌ ಸೆಂಟರ್‌’ನಲ್ಲಿ ಮಾತ್ರ ಚುನಾವಣಾ ಕರ್ತವ್ಯದಲ್ಲಿರುವವರು ಮತದಾನ ಮಾಡುವಂತೆ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next