Advertisement

ಕೋವಿಡ್‌ ಬಳಿಕ ಬಿಟೌನ್‌ ಬಾಕ್ಸ್‌ ಆಫೀಸ್‌ನಲ್ಲಿ ಮೋಡಿ ಮಾಡಿದ ರೊಮ್ಯಾಂಟಿಕ್‌ ಸಿನಿಮಾಗಳು

04:10 PM Aug 05, 2023 | Team Udayavani |

ಮುಂಬಯಿ:  ಬಾಲಿವುಡ್‌ ಮತ್ತೆ ವಿನ್ನಿಂಗ್‌ ಟ್ರ್ಯಾಕ್‌ ಗೆ ಮರಳಿದೆ. ಬಿಟೌನ್‌ ನಲ್ಲಿ ತೆರೆಗೆ ಬಂದ ಕಳೆದ ಕೆಲ ಸಿನಿಮಾಗಳು ಬಾಕ್ಸ್‌ ಆಫೀಸ್‌  ನಲ್ಲಿ ಭರ್ಜರಿ ಗಳಿಕೆ ಕಾಣುವುದರ ಜೊತೆಗೆ ಪ್ರೇಕ್ಷಕರನ್ನೂ ರಂಜಿಸಿದೆ.

Advertisement

2022 ರಲ್ಲಿ ಕಂಡ ಯಶಸ್ಸು, ಈ ವರ್ಷ ದುಪ್ಟಟ್ಟಾಗಿದೆ.  ಈ ವರ್ಷ ಬಂದ ʼಪಠಾಣ್‌ʼ ಸಿನಿಮಾ ಆಕ್ಷನ್‌ ಜಾನರ್‌ ನಲ್ಲಿ ದೊಡ್ಡ ಹಿಟ್‌ ಆಗಿತ್ತು. ಆ ಬಳಿಕ ಬಂದ ಸಿನಿಮಾಗಳೂ ಬಾಕ್ಸ್‌ ಆಫೀಸ್‌ ನಲ್ಲಿ ಲಾಸ್ ಆಗದ ಬ್ಯುಸಿನೆಸ್‌ ಮಾಡಿದೆ. ಈ ಎಲ್ಲಾ ಸಿನಿಮಾಗಳು ರೊಮ್ಯಾಂಟಿಕ್‌ ಜಾನರ್‌ , ರೊಮ್ಯಾಂಟಿಕ್‌ ಕಾಮಿಡಿ ಅಥವಾ ಫ್ಯಾಮಿಲಿ ಡ್ರಾಮಾ ಸಿನಿಮಾಗಳೆನ್ನುವುದು ವಿಶೇಷ.

ಇದಕ್ಕೆ ಇತ್ತೀಚೆಗಿನ ಹೊಸ ಉದಾಹರಣೆ ಎಂದರೆ ಕರಣ್‌ ಜೋಹರ್‌ ಅವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’.  ಸಿನಿಮಾ ರಿಲೀಸ್‌ ಆದ 8 ದಿನದಲ್ಲಿ ಬಾಕ್ಸ್ ಆಫೀಸ್‌ ನಲ್ಲಿ 76.75 ಕೋಟಿ ರೂಪಾಯಿಯ ಗಳಿಕೆ ಕಂಡಿದೆ. ಒಂದು ಲೆಕ್ಕಚಾರದ ಪ್ರಕಾರ ಸಿನಿಮಾಕ್ಕೆ ಎದುರಾಳಿಯಾಗಿ ಯಾವ ಸಿನಿಮಾದ ಪೈಪೋಟಿ ನೀಡದೇ ಇದರುವುದರಿಂದ ಮುಂದಿನ ವಾರದ ಅಂತ್ಯಕ್ಕೆ ʼ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ 100 ಕೋಟಿ ಕ್ಲಬ್‌ ದಾಟುವ ಸಾಧ್ಯತೆಯಿದೆ.

130 -135 ಕೋಟಿಯವರೆಗೂ ಸಿನಿಮಾ ಕಮಾಯಿ ಮಾಡಬಹುದು ಎನ್ನಲಾಗುತ್ತಿದೆ. ಮತ್ತೊಂದು ವಿಶೇಷ ಕಳೆದ ಕೆಲ ಸಮಯದಿಂದ ಬಾಲಿವುಡ್‌ ನಲ್ಲಿ ಬಂದ ರೊಮ್ಯಾಂಟಿಕ್‌ ಕಥಾಹಂದರದ ಸಿನಿಮಾದಗಳ ಪೈಕಿ ʼ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಪ್ರೇಮ್‌ ಕಹಾನಿ 5ನೇ ಸಕ್ಸಸ್‌ ಸಿನಿಮವಾಗಿದೆ.

ಕೋವಿಡ್‌ ಬಳಿಕ ಹಿಟ್‌ ಸಾಲಿಗೆ ಸೇರಿದ ರೊಮ್ಯಾಂಟಿಕ್‌ ಸಿನಿಮಾಗಳು:  

Advertisement

ಬಿಟೌನ್‌ ಸಿನಿಮಾಗಳಲ್ಲಿ ಗಮನಿಸಬೇಕಾದ ಇನ್ನೊಂದು ವಿಶೇಷ ಅಂಶವೆಂದರೆ. ಕೋವಿಡ್‌ ಬಳಿಕ ಅಂದರೆ  ʼಜುಗ್‌ ಜುಗ್ ಜೀಯೋ‌ʼ ದಿಂದ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼವರೆಗಿನ ರೊಮ್ಯಾಂಟಿಕ್‌  ಕಥಾವುಳ್ಳ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಿದೆ. ಯೂತ್‌ ಮೆಚ್ಚುವ ರೊಮ್ಯಾಂಟಿಕ್‌ ಕಥಾ ಪ್ರಯೋಗಗಳು ಬಾಲಿವುಡ್‌ ನಲ್ಲಿ ಈ ವರ್ಷ ವರ್ಕೌಟ್‌ ಆಗಿದೆ.

ಜುಗ್ ಜುಗ್ ಜೀಯೋ: – 79 ಕೋಟಿ ರೂ.

ತು ಜೂಟಿ ಮೇ ಮಕ್ಕರ್:  – 130 ಕೋಟಿ ರೂ.

ಜರಾ ಹಟ್ಕೆ ಜರಾ ಬಚ್ಕೆ:  – 83 ಕೋಟಿ ರೂ.

ಸತ್ಯಪ್ರೇಮ್ ಕಿ ಕಥಾ:  – 75 ಕೋಟಿ ರೂ.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: – (130 ಕೋಟಿ ಗಳಿಸುವ ಪ್ಲಸ್ ನಿರೀಕ್ಷೆ)

Advertisement

Udayavani is now on Telegram. Click here to join our channel and stay updated with the latest news.

Next