Advertisement

ಬಾಲಿವುಡ್ ನಿಂದ ಆಫರ್‌ಗಳು ಬರುತ್ತಿವೆ,ಆದರೆ… : ರಿಷಬ್ ಶೆಟ್ಟಿ

02:25 PM Nov 05, 2022 | Team Udayavani |

ಮುಂಬೈ : ‘ಕಾಂತಾರ’ದ ಯಶಸ್ಸಿನ ನಂತರ ಬಾಲಿವುಡ್‌ ನಿಂದ ಆಫರ್‌ಗಳು ಬರುತ್ತಿವೆ ಎಂದು ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

Advertisement

ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಿಷಬ್, “ನನಗೆ ಬಾಲಿವುಡ್ ಚಲನಚಿತ್ರ ನಿರ್ಮಾಪಕರಿಂದ ಆಫರ್‌ಗಳು ಬಂದಿವೆ. ಆದರೆ ಸದ್ಯ ನಾನು ಕನ್ನಡದಲ್ಲಿ ಮಾತ್ರ ಚಲನಚಿತ್ರಗಳನ್ನು ಮಾಡಲು ಬಯಸುತ್ತೇನೆ. ನಾನು ಅಮಿತಾಭ್ ಬಚ್ಚನ್ ಅವರನ್ನು ಆರಾಧಿಸುತ್ತೇನೆ, ನಾನು ಅವರನ್ನು ನಿಜವಾಗಿಯೂ ಇಷ್ಟಪಡುತ್ತೇನೆ ಮತ್ತು ಸಲ್ಮಾನ್ ಭಾಯ್, ಯುವ ಪೀಳಿಗೆಯ ನಟರಾದ ಶಾಹಿದ್ ಕಪೂರ್ ಸೇರಿ ಅನೇಕರಲ್ಲಿ ಪ್ರತಿಯೊಂದನ್ನು ಇಷ್ಟಪಡುತ್ತೇನೆ” ಎಂದಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿ ಅದರ ಕಥಾಹಂದರ ಮತ್ತು ಅದ್ಭುತ ದೃಶ್ಯಗಳಿಗಾಗಿ ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆಯನ್ನು ಪಡೆದು ಪ್ಯಾನ್ ಇಂಡಿಯಾ ಸಿನಿಮಾವಾಗಿ ದಿಗ್ವಿಜಯ ಸಾಧಿಸಿ ದಿಗ್ಗಜರ ಪ್ರಶಂಸೆ ಪಡೆದುಕೊಂಡಿದೆ.

ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ದಕ್ಷಿಣ ನಟ ರಜನಿಕಾಂತ್ ಅವರು ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next