ನವದೆಹಲಿ: ಸರ್ಕಾರಿ ಪ್ರಾಯೋಜಕತ್ವದ ಹ್ಯಾಕರ್ಸ್ ಗಳಿಂದ ನಿಮ್ಮ ಐಫೋನ್ ಕದ್ದಾಲಿಕೆ ಮಾಡುತ್ತಿರಬಹುದು ಎಚ್ಚರ…ಎಂಬುದಾಗಿ ಆಪಲ್ ಕಂಪನಿಯಿಂದ ಸಂದೇಶ ಬಂದಿದ್ದು, ಕೇಂದ್ರ ಸರ್ಕಾರ ತಮ್ಮ ಐಫೋನ್ ಗಳನ್ನು ಕದ್ದಾಲಿಸುತ್ತಿದೆ ಎಂದು ವಿಪಕ್ಷದ ಮುಖಂಡರು ಗಂಭೀರವಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ:Rajyotsava Award;ಹಸನಬ್ಬ, ಅದಿತಿ ಅಶೋಕ್ ಸೇರಿ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ಕಾಂಗ್ರೆಸ್ ನ ಶಶಿ ತರೂರ್, ಟಿಎಂಸಿಯ ಮೊಹುವಾ ಮೊಯಿತ್ರಾ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಎಐಎಂಐಎಂ ವರಿಷ್ಠ ಅಸಾದುದ್ದೀನ್ ಒವೈಸಿ, ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ, ಶಿವಸೇನಾದ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಹಲವಾರು ಮುಖಂಡರು ಐಪೋನ್ ಕದ್ದಾಲಿಕೆ ಬಗ್ಗೆ ಆರೋಪಿಸಿದ್ದಾರೆ.
ನಮ್ಮ ಐಫೋನ್ ಗಳನ್ನು ಗುರಿಯಾಗಿರಿಸಿಕೊಂಡು ಆಡಳಿತಾರೂಢ ಬಿಜೆಪಿ ಸರ್ಕಾರ ಕದ್ದಾಲಿಕೆ ಮಾಡುತ್ತಿರುವುದಾಗಿ ದೂರಿದ್ದಾರೆ.
ಆರೋಪ ಅಲ್ಲಗಳೆದ ಬಿಜೆಪಿ:
ಐಫೋನ್ ಕದ್ದಾಲಿಕೆ ಆರೋಪವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ತಳ್ಳಿಹಾಕಿದ್ದು, ಸರ್ಕಾರಿ ಪ್ರಾಯೋಜಕತ್ವ ಎಂಬುದು ಹಾದಿ ತಪ್ಪಿಸುವ ಯತ್ನವಾಗಿದೆ. ಈ ಆರೋಪದ ಬಗ್ಗೆ ಆಪಲ್ ಕಂಪನಿ ಪ್ರತಿಕ್ರಿಯೆ ನೀಡುವವರೆಗೆ ಕಾಯಿರಿ ಎಂಬುದಾಗಿ ತಿಳಿಸಿದ್ದಾರೆ.