Advertisement

ಜೀರ್ಣೋದ್ಧಾರ ಗೊಂದಲಕ್ಕೆ ಜಿಲ್ಲಾಡಳಿತ ತೆರೆ

04:30 PM Jun 03, 2022 | Team Udayavani |

ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಪಂಪಾ ಸರೋವರ ಹಾಗೂ ಇಲ್ಲಿಯ ದೇವಾಲಯಗಳ ಜೀರ್ಣೋದ್ಧಾರ ಗೊಂದಲಕ್ಕೆ ಜಿಲ್ಲಾಡಳಿತ ತೆರೆ ಎಳೆದಿದೆ. ಜಿಲ್ಲಾಡಳಿತ ಭವನದಲ್ಲಿ ಗುರುವಾರ ಪ್ರಾಚ್ಯವಸ್ತು ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮಹತ್ವದ ಸಭೆ ನಡೆಸಿದರು.

Advertisement

ಜೀರ್ಣೋದ್ಧಾರ ಕಾರ್ಯವನ್ನು ನಿಯಮಾನುಸಾರ ಮಾಡಬೇಕು. ಪರವಾನಗಿ ನೀಡುವ ಸಂದರ್ಭದಲ್ಲಿ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ನೀಡಿದ್ದ ನೀಲನಕ್ಷೆ ಮತ್ತು ಯೋಜನಾ ವರದಿ ಅನ್ವಯ ಕಾಮಗಾರಿ ನಡೆಯಬೇಕು.

ಜಯಲಕ್ಷ್ಮಿಗುಡಿ ಅಗೆದು ಮೂರ್ತಿ ಶ್ರೀಚಕ್ರ ಸ್ಥಳಾಂತರ ಮಾಡುವಾಗ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದು, ಮುಂದಿನ ಕಾಮಗಾರಿ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲಾ ಕಾಮಗಾರಿ ನಡೆಯಬೇಕು.

ಆನೆಗೊಂದಿ ರಾಜವಂಶಸ್ಥರು ಮತ್ತು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಡೆದು ಜೂ. 8, 9 ಮತ್ತು 10ರಂದು ಸರಕಾರದ ಶಿಷ್ಟಾಚಾರಂದತೆ ಜಯಲಕ್ಷ್ಮೀ ದೇಗುಲದಲ್ಲಿ ಮೂರ್ತಿ ಮತ್ತು ಶ್ರೀಚಕ್ರ ಪ್ರತಿಷ್ಠಾಪನಾ ಕಾರ್ಯ ನಡೆಯಬೇಕು. ಜೀರ್ಣೋದ್ಧಾರ ಮಾಡುವವರಿಗೆ ಸಂಬಂಧಪಟ್ಟವರು ಈ ಮಾಹಿತಿ ರವಾನೆ ಮಾಡಿ ಪುರಾತತ್ವ ಇಲಾಖೆ ನೀಡಿದ ಯೋಜನೆ ಮತ್ತು ನೀಲನಕ್ಷೆಯಂತೆ ಪಂಪಾ ಸರೋವರ ಮತ್ತು ಮುಖಮಂಟಪ ಜತೆಯಲ್ಲಿ ಜಯಲಕ್ಷ್ಮೀಯ ದೇಗುಲ ಜೀರ್ಣೋದ್ಧಾರ ಮಾಡಲು ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ ನೀಡಲಾಯಿತು.

ಜಿಲ್ಲಾಧಿಕಾರಿ ಸುರಳ್ಕರ್‌ ವಿಕಾಸ ಕಿಶೋರ, ಪುರಾತತ್ವ ಪ್ರಾಚ್ಯವಸ್ತು ಇಲಾಖೆಯ ಪ್ರಹ್ಲಾದ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ, ತಹಸೀಲ್ದಾರ್‌ ಯು.ನಾಗರಾಜ, ಅಭಿಯಂತರ ಚಂದ್ರಶೇಖರ ಮಸಾಳೆ, ಕಂದಾಯ ನಿರೀಕ್ಷಕ ಹನುಮಂತಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿ ಇದ್ದರು.

Advertisement

ಪುರಾತನ ಪಂಪಾ ಸರೋವರವನ್ನು ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಯಲಕ್ಷ್ಮಿಗುಡಿ ಅಗೆದು ಮೂರ್ತಿ ಸ್ಥಳಾಂತರ ಮಾಡಿದ ಸಂದರ್ಭದಲ್ಲಿ ಕೆಲವು ಲೋಪಗಳಾಗಿದ್ದು ಇದನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಲಾಗಿತ್ತು. ಇದೀಗ ಪುರಾತತ್ವ ಪ್ರಾಚ್ಯವಸ್ತು ಇಲಾಖೆ ಜೀರ್ಣೋದ್ಧಾರ ಕಾಮಗಾರಿಯ ಯೋಜನೆ ಹಾಗೂ ನೀಲನಕ್ಷೆ ತಯಾರಿಸಿ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಯೋಜನೆ ರೂಪಿಸಲಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪುನಃ ಜೀರ್ಣೋದ್ಧಾರ ಕಾಮಗಾರಿ ಆರಂಭ ಮಾಡಿ ಜಯಲಕ್ಷ್ಮಿ ಗರ್ಭಗುಡಿ ಜೀರ್ಣೋದ್ಧಾರ ಬೇಗನೆ ಮುಗಿಸಿ ಜೂ.08, 09 ಮತ್ತು 10 ಆನೆಗೊಂದಿ ರಾಜವಂಶಸ್ಥರು ಮತ್ತು ಸ್ಥಳೀಯರ ಜತೆಗೂಡಿ ಸರಕಾರದ ಪ್ರೋಟೋಕಾಲ್‌ ಪ್ರಕಾರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲು ಮುಜರಾಯಿ ಇಲಾಖೆ ಮತ್ತು ಜಿರ್ಣೋದ್ಧಾರ ಕಾರ್ಯ ಮಾಡುವವರು ಕಾರ್ಯಕ್ರಮ ರೂಪಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್‌ ವಿಕಾಶ ಕಿಶೋರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next