Advertisement

ಶಿಥಿಲ ಶಾಲಾ ಕಟ್ಟಡ ಪುನರ್‌ ನಿರ್ಮಾಣಕ್ಕೆ ಆಗ್ರಹ

06:18 PM Jun 12, 2022 | Team Udayavani |

ಹುಣಸಗಿ: ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದ ಜನತಾ ಕಾಲೋನಿಯಲ್ಲಿನ ಶಿಥಿಲಾವಸ್ಥೆಯಲ್ಲಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡವು ಬೇರೆ ಕಡೆ ಸ್ಥಳಾಂತರಿಸಿ ನೂತನ ಕಟ್ಟಡ ನಿರ್ಮಾಣ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟಿಸಿದರು.

Advertisement

ಶನಿವಾರ ಶಾಲೆ ಎದುರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೊಂದಿಗೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. 2016ರಲ್ಲಿ ಲೋಕೋಪಯೋಗಿ ಇಲಾಖೆಯು ಕಟ್ಟಡ ಶಿಥಿಲಗೊಂಡಿದ್ದರಿಂದ ನೆಲಸಮಗೊಳಿಸಲು ದೃಢೀಕರಣ ನೀಡಲಾಗಿತ್ತು. ಆದರೂ ಇವರೆಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಏಕೆ? ಒಂದು ವೇಳೆ ಕಟ್ಟಡ ಕುಸಿತವಾದರೆ ಆಗುವ ಅನಾಹುತಕ್ಕೆ ಇಲಾಖೆ ಹೊಣೆ ಎಂದು ಗುಡುಗಿದರು.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವರಡ್ಡಿ ಹಾಗೂ ಎಸ್‌ ಡಿಎಂಸಿ ಅಧ್ಯಕ್ಷ, ಗ್ರಾಮದ ಕೆಲ ಮುಖಂಡರೊಂದಿಗೆ ಚರ್ಚೆ ನಡೆಸಿ ಶೀಘ್ರ ಬೇರೆ ಕಟ್ಟಡವೊಂದನ್ನು ಬಾಡಿಗೆ ಪಡೆದು ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸಿ ಪುನರ್‌ ನಿರ್ಮಾಣ ಮಾಡುವ ಬಗ್ಗೆ ಅಗತ್ಯ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ನಂತರ ಪ್ರತಿಭಟನೆ ಕೈ ಬಿಡಲಾಯಿತು. ಕರವೇ ತಾಲೂಕು ಅಧ್ಯಕ್ಷ ಶಿವಲಿಂಗಪ್ಪ ಪಟ್ಟಣಶೆಟ್ಟಿ, ಪದಾಧಿಕಾರಿಗಳಾದ ಬಸವರಾಜ್‌ ಚನ್ನೂರ, ನಿಂಗಣ್ಣ ಗುತ್ತೇದಾರ್‌, ರಾಜು ಅವರಾದಿ, ಶರಣಮ್ಮ ದೊಡ್ಡಮನಿ, ಮಹೇಶ ಗುತ್ತೇದಾರ್‌, ಮೌಲಾಲಿ ಸೈಯದ್‌, ರಮೇಶ ಉಪ್ಪಲದಿನ್ನಿ, ಬಸವರಾಜ್‌ ಕೊಂಡಗೂಳಿ, ಪರಶುರಾಮ್‌ ಮಾಲಿಪಾಟೀಲ್‌, ಬಂದೇನವಾಜ್‌ ಯಾತನೂರ್‌, ಮಲ್ಲು ಕಾಮನಟಗಿ, ಸೋಮನಾಥ ಡಂಗಿ, ವೆಂಕಟೇಶ ಸುರಪುರ, ಶಫೀಕ್‌ ಬೆಣ್ಣಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next