ಧಾರವಾಡ: ರಾಜಕೀಯ ಎನ್ನುವುದು ಚದುರಂಗದ ಆಟವಿದ್ದಂತೆ. ಇಲ್ಲಿ ಒಂದು ಕಾಯಿ ಮೇಲೆದ್ದ ತಕ್ಷಣವೇ ಚದುರಂಗ ಪಟದ ಕೊನೆಯ ಮೂಲೆಯಲ್ಲಿನ ಕಾಯಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಸದ್ಯಕ್ಕೆ ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿನ ಕಾಂಗ್ರೆಸ್ ಟಿಕೇಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಮುಖಂಡರು ಕೈಗೊಂಡ ನಿರ್ಧಾರಗಳು ಹುಬ್ಬಳ್ಳಿ-ಧಾರವಾಡ ಪಶ್ಚಿಮ-74 ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಮೇಲೆ ಪರಿಣಾಮ ಬೀರಿದ್ದು,
ಕೈ ಟಿಕೆಟ್ ಪಟ್ಟಿಯಲ್ಲಿ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಸೇರ್ಪಡೆ ಧಾರವಾಡ ಜಿಲ್ಲೆಯ ಆಕಾಂಕ್ಷಿಗಳಿಗೆ ಹೊಡೆತ ಕೊಟ್ಟಿದೆ. ಹೌದು. ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ 25ಲಕ್ಷಕ್ಕೂ ಅಧಿಕ ಇರುವ ಮರಾಠಾ ಸಮುದಾಯದವರನ್ನು ಕಾಂಗ್ರೆಸ್ ಹಿಂದಿನಿಂದಲೂ ಮನವೊಲಿಸುತ್ತಲೇ ಬಂದಿದೆ.
ಹಿಂದಿನ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆ ಕಣಕ್ಕಿಳಿದು ಶಾಸಕರಾದವರು ಮತ್ತು ಸಚಿವರಾಗಿದ್ದವರು ಇದೀಗ ಮತ್ತೆ ಟಿಕೆಟ್ ಕೇಳಿದ್ದರು. ಆದರೆ ಬೆಳಗಾವಿ, ಹಾವೇರಿ ಜಿಲ್ಲೆಯಲ್ಲಿ ಈ ಸಮುದಾಯಕ್ಕೆ ಪ್ರಾಧಾನ್ಯತೆ ನೀಡುವ ಉದ್ದೇಶದಿಂದ ಧಾರವಾಡ ಜಿಲ್ಲೆಯ ಮರಾಠ ಸಮುದಾಯದ ಎಸ್.ಆರ್.ಮೋರೆ ಮತ್ತು ಮರಾಠಾ ಚಿತ್ಪಾವನ ಬ್ರಾಹ್ಮಣ ಸಮುದಾಯದ ದೀಪಕ್ ಚಿಂಚೋರೆ ಅವರಿಗೆ ಟಿಕೆಟ್ ಕೈ ತಪ್ಪಿದೆ.
ಅವರೀಗ ಕೈ ವಿರುದ್ಧ ಬಂಡಾಯ ಸಾರಿದ್ದಾರೆ. ಖಾನಾಪುರ ಕ್ಷೇತ್ರಕ್ಕೆ ರμàಕ್‌ಖಾನ್ ಕಾಂಗ್ರೆಸ್ ಟಿಕೇಟ್ ಕೇಳಿದ್ದರು. ಆದರೆ ಖಾನಾಪುರದಲ್ಲಿ ಮರಾಠಿ ಭಾಷಿಕರಾದ ಅಂಜಲಿ ನಿಂಬಾಳ್ಕರ್‌ಗೆ ಟಿಕೆಟ್ ಸಿಕ್ಕಿದೆ. ಹಾನಗಲ್‌ನಲ್ಲಿ ಮುಸ್ಲಿಂ ಸಮುದಾಯದ ಪಠಾನ್ ಟಿಕೆಟ್ ಕೇಳಿದ್ದರೂ ಅಲ್ಲಿ ಮರಾಠಾ ಸಮುದಾಯದ ಶ್ರೀನಿವಾಸ ಮಾನೆ ಅವರಿಗೆ ಟಿಕೆಟ್ ನೀಡಲಾಗಿದೆ.
ಕಲಘಟಗಿಯಲ್ಲಿ ಸಂತೋಷ ಲಾಡ್, ಬಳ್ಳಾರಿಯಲ್ಲಿ ಅನಿಲ ಲಾಡ್ ಸೇರಿದಂತೆ ಈ ಸಮುದಾಯದ ಕೋಠಾದಲ್ಲಿ ಸದ್ಯಕ್ಕೆ ಒಟ್ಟು ಐದು ಜನರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. 2 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕೈ ಬಿಟ್ಟು -ಧಾ ಪಶ್ಚಿಮಕ್ಕೆ ಮುಸ್ಲಿಂ ಅಭ್ಯರ್ಥಿ ಆಯ್ಕೆ ಮಾಡಿದ್ದರೆ ಪ್ರತಿಫಲವೇ ಇದೀಗ ಬಂಡಾಯವೆದ್ದ ಕೈ ಗಡಗಡ ನಡಗುವಂತಾಗಿದೆ. ದೀಪಕ್ ಚಿಂಚೋರೆ 74ನೇ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದರೂ,
ಅವರು ಬಂಡಾಯ ಅಭ್ಯರ್ಥಿಯಾಗುತ್ತಿರುವುದು ಸಚಿವ ವಿನಯ್ ಕುಲಕರ್ಣಿ ಸ್ಪರ್ಧಿಸುತ್ತಿರುವ ಧಾರವಾಡ ಗ್ರಾಮೀಣ ಕ್ಷೇತ್ರ-71ಕ್ಕೆ. ಇದಕ್ಕೆ ಕಾರಣ ಈ ಕ್ಷೇತ್ರ ವ್ಯಾಪ್ತಿಗೆ ಬರುವ ಧಾರವಾಡ ನಗರದ 8 ವಾರ್ಡ್‌ಗಳ ಪೈಕಿ ಚಿಂಚೋರೆ ಕೂಡ 7ನೇ ವಾರ್ಡ್‌ನ ಪಾಲಿಕೆ ಸದಸ್ಯರಾಗಿದ್ದು, ತಮ್ಮ ಹಿಡಿತ ಸಾಧಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿಂದಲೇ ಸ್ಪರ್ಧಿಸಿ ಕಾಂಗ್ರೆಸ್ ಮುಖಂಡರಿಗೆ ಬಿಸಿ ಮುಟ್ಟಿಸಬೇಕು ಎನ್ನುತ್ತಿದ್ದಾರೆ.
ಮೋರೆ ತೆರೆಗೆ: ವಯಸ್ಸು ಮತ್ತು ಸಂಘಟನಾತ್ಮಕ ಚಾತುರ್ಯದ ಕೊರತೆಯಿಂದ ಮಾಜಿ ಸಚಿವ ಧಾರವಾಡದ ಮರಾಠಾ ಹುಲಿ ಎಸ್.ಆರ್.ಮೋರೆ ಸದ್ಯಕ್ಕೆ ರಾಜಕೀಯದ ತೆರೆಗೆ ಸರಿದಂತೆ ಭಾಸವಾಗುತ್ತಿದೆ. ಈವರೆಗೂ ಮಹಾರಾಷ್ಟ್ರದ ಮರಾಠಾ ನಾಯಕರ ನೆರವಿನಿಂದ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುತ್ತ ಬಂದಿದ್ದರು.
ಆದರೆ ಜಿಲ್ಲೆಯಲ್ಲಿ ಮರಾಠಾ ಸಮುದಾಯ ನೇರವಾಗಿ ಸಂತೊಷ ಲಾಡ್ ಮತ್ತು ಮಾನೆ ಅವರ ಬೆನ್ನಿಗೆ ನಿಂತಿದ್ದರಿಂದ ಈ ಯುವ ಪಡೆ ವಯಸ್ಸಾದ ಕೈ ಮುಖಂಡರನ್ನು ಹಿಂದಿಕ್ಕಿ ರಾಜಕಾರಣದಲ್ಲಿ ಮುಂದಡಿ ಇಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಾನೆ ಅವರು ಹಾಲಿ ಎಂಎಲ್‌ಸಿ ಇದ್ದರೂ, ಹಾನಗಲ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
* ಬಸವರಾಜ್ ಹೊಂಗಲ್