Advertisement

ಟಿಕೆಟ್‌ ಸಿಕ್ಕರೂ ಕೈಗೆ ಸಿಗದ ರೆಬೆಲ್‌ ಸ್ಟಾರ್‌

06:00 AM Apr 23, 2018 | |

ಬೆಂಗಳೂರು/ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಬಳಿಕವೂ ಕಾಂಗ್ರೆಸ್‌ಗೆ ಮಂಡ್ಯ ಅಭ್ಯರ್ಥಿ ವಿಚಾರದಲ್ಲಿ ಆಗುತ್ತಿರುವ ಮುಜುಗರ  ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿ ಫಾರಂ ಮನೆ ಬಾಗಿಲಿಗೆ ಕಳುಹಿಸಿದ ಬಳಿಕವೂ “ರೆಬೆಲ್‌ ಸ್ಟಾರ್‌’ ಅಂಬರೀಶ್‌ ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಕೈಗೂ ಸಿಗದಿರುವುದು ಕ್ಷೇತ್ರದಲ್ಲಿ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.

Advertisement

ನಾಮಪತ್ರ ಸಲ್ಲಿಕೆಗೆ ಎರಡು ದಿನಗಳಷ್ಟೇ ಇದ್ದರೂ, ತಾನು ಮಂಡ್ಯದಲ್ಲಿ ಸ್ಪರ್ಧಿಸುವ ಬಗ್ಗೆ ಖಚಿತ ತೀರ್ಮಾನವನ್ನು ಇನ್ನೂ ಪ್ರಕಟಿಸದ ಅಂಬಿ ಅಕ್ಷ ರಶಃ “ಕೈ’ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಈ ವಿಚಾ ರ‌ಕ್ಕಾಗಿ ಭಾನುವಾರ ಮೈಸೂರಿನಲ್ಲಿ ಸಿಎಂ ಭೇಟಿ ಮಾಡಿ ಚರ್ಚಿಸುತ್ತಾರೆನ್ನುವ ಸುದ್ದಿ ಇತ್ತಾದರೂ ಅದೂ ಹುಸಿಯಾಗಿದೆ. ಆದರೆ, ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವ ಅಂಬರೀಷ್‌ ಮನವೊಲಿಕೆ ಮುಂದುವರಿದೆ.

ಈ ನಡುವೆ, ಅಂಬರೀಶ್‌ ಸ್ಪರ್ಧಿಸದಿದ್ದರೆ ತಾನೇ ಸ್ಪರ್ಧಿ ಸುವುದಾಗಿ ಅಮರಾವತಿ ಚಂದ್ರಶೇಖರ್‌ ಹೇಳಿ ಕೊಂಡಿ ದ್ದಾರೆ. ಇದು ಅಂಬಿ ಅಪೇ ಕ್ಷೆಯೂ ಹೌದು ಎನ್ನಲಾಗಿದೆ. ಒಂದು ಮೂಲಗಳ ಪ್ರಕಾರ ಸೋಮವಾರ ಅಥವಾ ಮಂಗಳವಾರ “ರೆಬೆಲ್‌ ಸ್ಟಾರ್‌’ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಒಂದೊಮ್ಮೆ ಅಂಬರೀಷ್‌ ಸ್ಪರ್ಧೆ ಮಾಡದಿದ್ದರೆ, ಎಚ್‌.ಬಿ.ರಾಮು, ಆತ್ಮಾನಂದ, ಅಮರಾವತಿ ಚಂದ್ರಶೇಖರ್‌ ಅವರಲ್ಲಿ ಒಬ್ಬರು ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

5 ಕ್ಷೇತ್ರಗಳ ಅಭ್ಯರ್ಥಿಗಳು ಚೇಂಜ್‌:
ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿದ್ದ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದೆ. ತಿಪಟೂರಿನಿಂದ ನಂಜಾಮರಿ ಬದಲು ಹಾಲಿ ಶಾಸಕ ಷಡಕ್ಷರಿ, ಮಲ್ಲೇಶ್ವರಂನಿಂದ ಎಂ.ಆರ್‌.ಸೀತಾರಾಂ ಬದಲು ಕೆಂಗಲ್‌ ಹನುಮಂತಯ್ಯ ಮೊಮ್ಮಗ ಶ್ರೀಪಾದ ರೇಣು, ಪದ್ಮನಾಭನಗರದಿಂದ ಗುರಪ್ಪನಾಯ್ಡು ಬದಲು ಮಾಜಿ ಸಂಸದ ಎಂ.ಶ್ರೀನಿವಾಸ, ಮಡಿಕೇರಿಯಲ್ಲಿ ಚಂದ್ರಮೌಳಿ ಬದಲು ಚಂದ್ರಕಲಾ, ಜಗಳೂರಿನಲ್ಲಿ ಪುಷ್ಪಾ ಬದಲು ರಾಜೇಶ್‌ ಅವರನ್ನು ಕಣಕ್ಕಿಳಿಸಲಾಗಿದೆ. ಇಲ್ಲಿ ಜಗ ಳೂ ರಿನಲ್ಲಿ ಪುಷ್ಪಾ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ.

ಬಾದಾಮಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಿತ್ತೂರು ಕ್ಷೇತ್ರದಿಂದ ಮಾಜಿ ಸಚಿವ ಡಿ.ಬಿ.ಇನಾಂದಾರ್‌, ಶಾಂತಿನಗರದಿಂದ ಎನ್‌.ಎ.ಹ್ಯಾರೀಸ್‌ ಸೇರಿ ಹನ್ನೊಂದು ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಪ್ರಕಟಿಸಿದೆ. ರಾಯಚೂರು ಕ್ಷೇತ್ರಕ್ಕೆ ಸಿ.ಕೆ.ಜಾಫ‌ರ್‌ ಷರೀಫ್ ಅಳಿಯ ಸೈಯದ್‌ ಯಾಸೀನ್‌, ಸಿಂದಗಿ ಕ್ಷೇತ್ರದಿಂದ ಮಲ್ಲಣ್ಣ, ನಿಂಗಣ್ಣ ಸಾಲಿ ಅವರಿಗೆ ಟಿಕೆಟ್‌ ನೀಡಲಾಗಿದೆ. ನಾಗಠಾಣಾ ಕ್ಷೇತ್ರದಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದ ವಿಠಲ್‌ ಕಟಕದೊಂಡ ಅವರಿಗೆ ಟಿಕೆಟ್‌ ನೀಡಲಾಗಿದೆ.

Advertisement

ನನ್ನ ಕ್ಷೇತ್ರದ ಟಿಕೆಟ್‌ ಘೋಷಣೆಯಾಗಿರಲಿಲ್ಲ. ಇದೀಗ ಎಲ್ಲವೂ ಸುಸೂತ್ರವಾಗಿ ಮುಗಿದಿದೆ. ನಾನು ಎಂಟು ಬಾರಿ ಬಿ ಫಾರಂ ಪಡೆದಿದ್ದೇನೆ. ಇದೇನು ಹೊಸದಲ್ಲ. ಕ್ಷೇತ್ರದ ಜನತೆ  ಈ ಬಾರಿಯೂ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ.
– ಡಿ.ಬಿ. ಇನಾಂದಾರ್‌

ಮೊದಲ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಇದರಿಂದ ನನಗೆ ಆತಂಕವಾಗಿದ್ದು ನಿಜ. ಈಗ ಬಿ ಫಾರಂ ಸಿಕ್ಕಿದೆ. ಕ್ಷೇತ್ರದ ಜನರ ಕೆಲಸ ಮುಂದುವರಿಸುತ್ತೇನೆ. ಎಸ್‌.ಎಸ್‌.ಮಲ್ಲಿಕಾರ್ಜುನ್‌, ಎಂ.ಪಿ.ರವೀಂದ್ರ ಅವರಿಂದ ನನಗೆ ಟಿಕೆಟ್‌ ಸಿಕ್ಕಿದೆ. ಪುಷ್ಪಾ ಅವರಿಗೆ ಅಸಮಾಧಾನವಾಗಿದ್ದು , ಅವರನ್ನು ಜತೆಗೆ ಕೊಂಡೊಯ್ದು ಕೆಲಸ ಮಾಡುತ್ತೇನೆ.
– ಎಚ್‌.ಪಿ.ರಾಜೇಶ್‌

ನನಗೆ ಮೊದಲು ನಿರೀಕ್ಷೆ ಇರಲಿಲ್ಲ. ಸೀತಾರಾಂ ಅವರು ಒಪ್ಪದಿದ್ದ ಕಾರಣ ನನಗೆ ಅವಕಾಶ ಸಿಕ್ಕಿದೆ. ಹರಿಪ್ರಸಾದ್‌, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್‌ ಅವರು ಶಿಫಾರಸು ಮಾಡಿ ರಾಹುಲ್‌ ಗಾಂಧಿಯವರು ಟಿಕೆಟ್‌ ನೀಡಿದ್ದಾರೆ. ಇದರಿಂದ ಸಂತೋಷವಾಗಿದೆ. ಕ್ಷೇತ್ರದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ದು ಕೆಲಸ ಮಾಡುತ್ತೇನೆ.
– ಶ್ರೀಪಾದ ರೇಣು

Advertisement

Udayavani is now on Telegram. Click here to join our channel and stay updated with the latest news.

Next