Advertisement

ನನ್ನ ಜೊತೆ 50 ಶಾಸಕರಿದ್ದಾರೆ: ಮಹಾ ಸರ್ಕಾರಕ್ಕೆ ಗುಟುರು ಹಾಕಿದ ರೆಬೆಲ್ ಏಕನಾಥ್ ಶಿಂಧೆ

10:12 AM Jun 24, 2022 | Team Udayavani |

ಗುವಾಹಟಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ದಂಗೆಯಲ್ಲಿ 50 ಕ್ಕೂ ಹೆಚ್ಚು ಶಾಸಕರು ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ ತಿಳಿಸಿದ್ದಾರೆ. ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಶಿಂಧೆ ಅವರು 50 ಶಾಸಕರಲ್ಲಿ ಸುಮಾರು 40 ಮಂದಿ ಶಿವಸೇನೆಯವರು ಎಂದು ಹೇಳಿದ್ದಾರೆಂದು ಎನ್ ಡಿಟಿವಿ ವರದಿ ತಿಳಿಸಿದೆ.

Advertisement

“ನಮ್ಮಲ್ಲಿ ನಂಬಿಕೆ ಇರುವವರು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ನಾವು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಮುಂದುವರಿಸಲು ಬಯಸುತ್ತೇವೆ, ಅದನ್ನು ಇಷ್ಟಪಡುವವರು ಬರುತ್ತಾರೆ. ಬಂಡಾಯ ಶಾಸಕರು ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ತೊರೆದಿಲ್ಲ” ಎಂದು ಏಕನಾಥ್ ಶಿಂಧೆ ಹೇಳಿದರು.

ಬಂಡಾಯ ಶಾಸಕರ ವಿರುದ್ಧ ಅನರ್ಹತೆ ನೋಟಿಸ್‌ ನೀಡಿದ ಠಾಕ್ರೆ ತಂಡದ ಕ್ರಮವು “ಕಾನೂನುಬಾಹಿರ” ಎಂದು ಶಿಂಧೆ ಹೇಳಿದ್ದಾರೆ. “ನಿನ್ನೆ ಮಾಡಿದ್ದು ಸರಿಯಲ್ಲ, ಅವರಿಗೆ ಆ ಹಕ್ಕಿಲ್ಲ. ನಮಗೆ ಬಹುಮತವಿದೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳೇ ಮುಖ್ಯ. ಅವರ ನೋಟಿಸ್ ಕಾನೂನುಬಾಹಿರ, ಅಮಾನತು ಮಾಡಲು ಅವರಿಗೆ ಸಾಧ್ಯವಿಲ್ಲ. ಇದರಿಂದ ನಾವು ಹೆದರುವುದಿಲ್ಲ,’’ ಎಂದು ಬಂಡಾಯ ಗುಂಪಿನ ನಾಯಕ ಏಕನಾಥ್ ಶಿಂಧೆ ಗುಡುಗಿದ್ದಾರೆ.

ಶಿವಸೇನೆ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಬಂಡಾಯ ಶಾಸಕರ ನಡುವೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ:ಕಾಮನ್ ಮ್ಯಾನ್ ಸಿಎಂಗೆ ಮುಜುಗರ ತಂದಿಟ್ಟ ಕಳಪೆ ರಸ್ತೆ; ಸ್ಪಷ್ಟನೆ ಕೇಳಿದ ಪ್ರಧಾನಿ ಕಚೇರಿ

Advertisement

ಮೂವತ್ತೇಳು ಶಾಸಕರು ರಾಜ್ಯಪಾಲರು ಮತ್ತು ಉಪಸಭಾಪತಿಗೆ ಪತ್ರ ಬರೆದಿದ್ದು, ಏಕನಾಥ್ ಶಿಂಧೆ ಅವರನ್ನು ತಮ್ಮ ನಾಯಕ ಎಂದು ಹೆಸರಿಸಿದ್ದಾರೆ. ಶಿಂಧೆ ಸೇರಿದಂತೆ 12 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಉದ್ಧವ್ ಠಾಕ್ರೆ ಕೋರಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next