Advertisement

ಬಹಿರಂಗಗೊಂಡಿದೆ ರಿಯಲ್ ಮಿ ಎಕ್ಸ್ 7 5ಜಿ ಮತ್ತು ರಿಯಲ್ ಮಿ ಎಕ್ಸ್ 7 ಪ್ರೊ 5ಜಿ ಗಳ ಫೀಚರ್ಸ್

11:22 AM Jan 29, 2021 | Team Udayavani |

ನವ ದೆಹಲಿ :  ರಿಯಲ್ ಮಿ ಎಕ್ಸ್ 7 5ಜಿ ಮತ್ತು ರಿಯಲ್ ಮಿ ಎಕ್ಸ್ 7 ಪ್ರೊ 5ಜಿ ಗಳ ಪ್ರಮುಖ ಫೀಚರ್ ಗಳನ್ನು ಕಂಪನಿಯು ತನ್ನ ಇಂಡಿಯಾ ವೆಬ್‌ ಸೈಟ್ ಮೂಲಕ ಬಿಡುಗಡೆ ಮಾಡುವ ಮುನ್ನವೇ ಬಹಿರಂಗಪಡಿಸಲಾಗಿದೆ.

Advertisement

ಫೀಚರ್ ಗಳನ್ನು ಗಮನಿಸಿದರೇ, ರಿಯಲ್ ಮಿ ಎಕ್ಸ್ 7 5ಜಿ ಈ ತಿಂಗಳ ಆರಂಭದಲ್ಲಿ ಚೀನಾದಲ್ಲಿ ಬಿಡುಗಡೆಯಾದ ರಿಯಲ್ ಮಿ ವಿ15 ಗೆ ಹೋಲುತ್ತದೆ ಎಂದು ಹೇಳಲಾಗುತ್ತಿದೆ.

ಓದಿ :  ಡ್ರಗ್ಸ್‌ ಕೇಸ್‌ ನಲ್ಲಿ ಚಿಕ್ಕ, ಚಿಕ್ಕ ಮೀನುಗಳನ್ನು ಹಿಡಿಯಲಾಗಿದೆ : ಇಂದ್ರಜಿತ್‌ ಲಂಕೇಶ್‌

ಈ ಸ್ಮಾರ್ಟ್‌ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 800 ಯು ಸೋಕ್‌ ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 64 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಗಳನ್ನು ಒಳಗೊಂಡಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಸೆಪ್ಟೆಂಬರ್‌ ನಲ್ಲಿ ಚೀನಾದಲ್ಲಿ ಬಿಡುಗಡೆಯಾದ ರಿಯಲ್ ಮಿ ಎಕ್ಸ್ 7 ಪ್ರೊ 5ಜಿ ಜೊತೆಗೆ  ಇದನ್ನು ಫೆಬ್ರವರಿ 4 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿ ಹೇಳಿಕೊಂಡಿದೆ.

ರಿಯಲ್ ಮಿ ಇಂಡಿಯಾ ಸೈಟ್, ರಿಯಲ್ ಮಿ ಎಕ್ಸ್ 7 5ಜಿ ಮತ್ತು ರಿಯಲ್ ಮಿ ಎಕ್ಸ್ 7 ಪ್ರೊ 5ಜಿ ಯ ಪ್ರಮುಖ ಫೀಚರ್ ಗಳನ್ನು ಬಹಿರಂಗಪಡಿಸಿದೆ. ಕಂಪನಿಯು ಬಹಿರಂಗ ಪಡಿಸಿದ ರಿಯಲ್ ಮಿ ಎಕ್ಸ್ 7 5ಜಿ ಯ ಕೆಲವು ಫೀಚರ್ ಗಳು ರಿಯಲ್ ಮಿ ವಿ 15 ಗೆ ಹೋಲುತ್ತವೆ. ರಿಯಲ್ ಮಿ ಎಕ್ಸ್ 7 5ಜಿ ಈ ಹಿಂದೆ ಮಾರುಕಟ್ಟೆಗೆ ಪ್ರವೇಶಿಸಿದ ರಿಯಲ್  ವಿ 15ನಲ್ಲಿ ನೋಡಿದ ಗ್ರೇಡಿಯಂಟ್ ನೆಬ್ಯುಲಾ ಕಲರ್ ಫಿನಿಶಿಂಗ್ ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನನಲಾಗುತ್ತಿದೆ.

Advertisement

ರಿಯಲ್‌ ಮಿ ಎಕ್ಸ್ 7 5ಜಿ ಮತ್ತು ರಿಯಲ್ ಮಿ ಎಕ್ಸ್ 7 ಪ್ರೊ 5ಜಿ ಫೆಬ್ರವರಿ 4 ರಂದು ಮಧ್ಯಾಹ್ನ 12: 30 ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪೆನಿ ಹೇಳಿದೆ.

ಓದಿ :  ರೈತ ಹೋರಾಟ ಬೆಂಬಲಿಸಿ ಜಂಟಿ ಅಧಿವೇಶನದ ರಾಷ್ಟ್ರಪತಿ ಭಾಷಣಕ್ಕೆ ಬಹಿಷ್ಕಾರ: ಎಚ್ ಡಿ ದೇವೇಗೌಡ

 ರಿಯಲ್ ಮಿ ಎಕ್ಸ್ 7 5ಜಿ ಮತ್ತು ರಿಯಲ್ ಮಿ ಎಕ್ಸ್ 7 ಪ್ರೊ 5ಜಿ ಬೆಲೆ ಎಷ್ಟಿರಬಹುದು..?  

ಚೀನಾ ಮಾಡೆಲ್ ಗೆ ಹೋಲಿಸಿದರೆ ರಿಯಲ್ ಮಿ ಎಕ್ಸ್ 7 5ಜಿ ಯ ಭಾರತದ ಮಾಡೆಲ್, ಚೀನಾ ಮಾಡೆಲ್ ಗೆ ಹೋಲಿಸಿದರೇ, ಸ್ವಲಪ್ ಕಡಿಮೆ ದರದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಸ್ಮಾರ್ಟ್ ಫೋನ್ ರಿಯಲ್ ಮಿ ವಿ 15 ಗೆ ಹೋಲುವ ಫೀಚರ್ ಗಳನ್ನು ಹೊಂದಿರುವುದರಿಂದ, ನಾವು ಅದರ ಆಸುಪಾಸಿನ ಬೆಲೆಯನ್ನೇ ನಿರೀಕ್ಷಿಸಬಹುದಾಗಿದೆ.  ರಿಯಲ್‌ ಮಿ ವಿ 15 ಬೆಲೆ 6 ಜಿಬಿ ರ್ಯಾಮ್ ರೂಪಾಂತರಕ್ಕೆ ಸಿ ಎನ್‌ ವೈ (Chinese Yuan Renminbi) 1,399 (ಸರಿಸುಮಾರು ರೂ. 15,900) ಆಗಿದ್ದರೆ, 8 ಜಿಬಿ ರ್ಯಾಮ್ ರೂಪಾಂತರದ ಬೆಲೆ ಸಿಎನ್‌ವೈ 1,999 (ಸರಿಸುಮಾರು 22,700 ರೂ.) ಆಗಿದೆ.

  ವಿಶೇಷತೆಗಳೇನು..?

ಮುಂಬರುವ ರಿಯಲ್ ಮಿ ಸ್ಮಾರ್ಟ್‌ ಫೋನ್ 50W ಸೂಪರ್‌ ಡಾರ್ಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ 4,300mAh ಬ್ಯಾಟರಿಯನ್ನು ಹೊಂದಿರಲಿದೆ. ಫೋನ್‌ನ ತೂಕ 185 ಗ್ರಾಂ. ರಿಯಲ್ ಮಿ ಎಕ್ಸ್ 7 6ಜಿಬಿ ಮತ್ತು 8 ಜಿಬಿ ರ್ಯಾಮ್ ಮಾಡೆಲ್ ಗಳು 128 ಜಿಬಿ ಗುಣಮಟ್ಟದ ಸ್ಟೋರೇಜ್ ಹೊಂದಿರಲಿದೆ.  ರಿಯಲ್ಮೆ ಎಕ್ಸ್ 7 ಪ್ರೊ 5ಜಿ ಫೀಚರ್ ಗಳು ರಿಯಲ್ ಮಿ ಎಕ್ಸ್ 7 ಪ್ರೊ 5ಜಿ 120Hz ರಿಫ್ರೆಶ್ ದರದೊಂದಿಗೆ ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ.

ಓದಿ : ಹಾವು ಕಡಿತಕ್ಕೆ ಇವರು ನೀಡುವ ನಾಟಿ ಔಷಧಿಯೇ ರಾಮಬಾಣ

ಇದನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 1000+ SoC ನಿಂದ ನಿಯಂತ್ರಿಸಲಾಗುವುದು. ಫೋನ್ 64 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಒಳಗೊಂಡಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಇದಲ್ಲದೆ, ಇದು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್, 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿರುತ್ತದೆ.  ಸ್ಮಾರ್ಟ್ ಫೋನ್ 65W ಸೂಪರ್ ಡಾರ್ಟ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ ಮತ್ತು 184 ಗ್ರಾಂ ತೂಕವಿರುತ್ತದೆ.

ಈ ಬಹಿರಂಗಪಡಿಸಿದ ಫೀಚರ್ ಗಳು ಚೀನಾದಲ್ಲಿ ಬಿಡುಗಡೆಯಾದ ರಿಯಲ್ ಮಿ ಎಕ್ಸ್ 7 ಪ್ರೊ 5 ಜಿ ಮಾದರಿಗೆ ಹೊಂದಿಕೆಯಾಗುತ್ತವೆ. ಮತ್ತು 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು 4,500 ಎಮ್ಎಹೆಚ್ ಬ್ಯಾಟರಿಯನ್ನು ಹೊಂದಿರಲಿದೆ ಎನ್ನುವುದು ಸದ್ಯಕ್ಕೆ ಇರುವ ಮಾಹಿತಿ.

ಓದಿ : ಭದ್ರತೆಗೆ ಮತ್ತೊಂದು ಫೀಚರ್ ನೀಡುತ್ತಿದೆ ವಾಟ್ಸ್ಯಾಪ್

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next