Advertisement
Realme ಇಂಡಿಯಾದ ಚೀಫ್ ಮಾರ್ಕೇಟಿಂಗ್ ಆಫೀಸರ್ ಫ್ರಾನ್ಸಿಸ್ ವಾಂಗ್ ಅವರು ದೇಶದಲ್ಲಿ ಕಂಪೆನಿಯ ಮೂರನೇ ವಾರ್ಷಿಕೋತ್ಸವದಂದು ಈ ಸ್ಮಾರ್ಟ್ ಫೋನ್ ನನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕಂಪೆನಿ ದೃಢಪಡಿಸಿದೆ.
Related Articles
Advertisement
Realme ತನ್ನ, Realme GT 5G ನನ್ನು ಚೀನಾದಲ್ಲಿ ಕಳೆದ ತಿಂಗಳು ಪರಿಚಯಿಸಿತು. Realme ಶೀಘ್ರದಲ್ಲೇ ಈ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ತರುಲು ನಿರೀಕ್ಷೆಸಿದೆ.
Realme GT 5G ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 120Hz ಡಿಸ್ಪ್ಲೇ ಮತ್ತು 64 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ನನ್ನು ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನಂತಹ ಪ್ರೀಮಿಯಂ ವಿಶೇಷತೆಗಳನ್ನು ಹೊಂದಿದೆ.
ಇನ್ನು, Realme GT 5G 4,500mAh ಬ್ಯಾಟರಿಯನ್ನು ಒಳಗೊಂಡಿದ್ದು, ಗೇಮರುಗಳಿಗಾಗಿ ಹೊಸ ಜಿಟಿ ಮೋಡ್ ಅನ್ನು ಹೊರತುಪಡಿಸಿ ಟಚ್ ಎಂಜಿನ್ ಅನ್ನು ಸಹ ಹೊಂದಿದೆ ಎಂದು ಹೇಳಲಾಗುತ್ತಿದೆ
Realme GT 5G ಚೀನಾದಲ್ಲಿ CNY 2,799 ರಿಂದ (ಸರಿಸುಮಾರು 31,400 ರೂ.) ಪ್ರಾರಂಭವಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿಯೂ ಕೂಡ ಅದೇ ಬೆಲೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಓದಿ : ಮುದ್ದೇಬಿಹಾಳದಲ್ಲಿ ಸೇವೆಗೆ ಹಾಜರಾದ ಸಿಬ್ಬಂದಿ: ಸಾರಿಗೆ ಬಸ್ ಸಂಚಾರ ಆರಂಭ