Advertisement

ರಿಯಲ್ ಮಿ 8 5ಜಿ ಏಪ್ರಿಲ್ 21ಕ್ಕೆ ಮಾರುಕಟ್ಟೆಯಲ್ಲಿ ಲಭ್ಯ..!

04:28 PM Apr 11, 2021 | Team Udayavani |

ನವ ದೆಹಲಿ : ರಿಯಲ್ ಮಿ 8 5ಜಿ ಸ್ಮಾರ್ಟ್ ಫೋನ್ ನ ಬಿಡುಗಡೆ ದಿನಾಂಕವನ್ನು ಏಪ್ರಿಲ್ 21 ಕ್ಕೆ ನಿಗದಿಪಡಿಸಲಾಗಿದೆ ಎಂದು ಕಂಪನಿ ತನ್ನ ಸಾಮಾಜಿಕ ಮಾಧ್ಯಮಗಳ ಅಧಿಕೃತ ಖಾತೆ ಮೂಲಕ ಬಹಿರಂಗಪಡಿಸಿದೆ.

Advertisement

ಈ ನೂತನ ರಿಯಲ್ ಮಿ ಸ್ಮಾರ್ಟ್ ಫೋನ್ ಕಳೆದ ತಿಂಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ರಿಯಲ್ ಮಿ 8 ರ ಅಪ್‌ ಗ್ರೇಡ್ ಆವೃತ್ತಿಯಂತಿರುತ್ತದೆ ಎಂದು ಹೇಳಲಾಗುತ್ತಿದೆ.

 ಓದಿ : ಕಳಪೆ: ಶಾಲೆ ಕಟ್ಟಡ ಕಾಮಗಾರಿಗೆ ತಡೆ, ಪ್ರತಿಭಟನೆ

ರಿಯಲ್ ಮಿ ಥೈಲ್ಯಾಂಡ್ ನ ಫೇಸ್ ಬುಕ್ ಪೇಜ್  ರಿಯಲ್ ಮಿ 8 5 ಜಿ ಬಿಡುಗಡೆ ದಿನಾಂಕವನ್ನು ಪ್ರಕಟಿಸಿತು. ಫೇಸ್‌ ಬುಕ್ ಪೇಜ್ ನಲ್ಲಿ ಟೀಸರ್ ವೀಡಿಯೊವನ್ನು ಸಹ ಪೋಸ್ಟ್ ಮಾಡಲಾಗಿದ್ದು ಅದು ಬಿಡುಗಡೆಗೊಳ್ಳಲಿರುವ ರಿಯಲ್ ಮಿ ಸ್ಮಾರ್ಟ್ ಫೋನ್‌ ನ  ಒಂದು ಸಂಕ್ಷಿಪ್ತ ವಿವರಣೆಯನ್ನು ನೀಡುತ್ತಿದೆ.

ಟೀಸರ್ ವಿಡಿಯೋ ತನ್ನ 4ಜಿ ಮಾಡೆಲ್ ಗಿಂತ ಭಿನ್ನವಾಗಿ, ರಿಯಲ್ ಮಿ 8 5 ಜಿ 48 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ನ್ನು ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.

Advertisement

ರಿಯಲ್ ಮಿ ವಿ 13 5ಜಿ 48 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿದೆ. ಯುಎಸ್ ಎಫ್ ಸಿ ಸಿ  ಪಟ್ಟಿಯು ಇತ್ತೀಚೆಗೆ ರಿಯಲ್ ಮಿ 8  5ಜಿ ಸ್ಮಾರ್ಟ ಫೋನ್ 185 ಗ್ರಾಂ ತೂಕದ 5,000mAh ಬ್ಯಾಟರಿ ಮತ್ತು ಹೊಂದಿರಲಿದೆ ಎಂದು ಟೀಸರ್ ನಲ್ಲಿ ಗಮನಿಸಬಹುದು.

 ಓದಿ : ಮೇ ಮೊದಲ ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು: ಸುಧಾಕರ್

Advertisement

Udayavani is now on Telegram. Click here to join our channel and stay updated with the latest news.

Next