Advertisement

ಶೂಟಿಂಗ್‌ ಅಖಾಡಕ್ಕೆ ಡೈರೆಕ್ಟರ್‌ ಉಪ್ಪಿ

03:23 PM Jun 29, 2022 | Team Udayavani |

ಸುಮಾರು ಏಳು ವರ್ಷಗಳ ನಂತರ ನಟ ಕಂ ನಿರ್ದೇಶಕ ರಿಯಲ್‌ಸ್ಟಾರ್‌ ಉಪೇಂದ್ರ ನಿರ್ದೇಶಿಸುತ್ತಿರುವ ಹೊಸ ಚಿತ್ರ “ಯುಐ’ ಸಿನಿಮಾದ ಮುಹೂರ್ತ ಕೆಲ ದಿನಗಳ ಹಿಂದಷ್ಟೇ ಅದ್ಧೂರಿಯಾಗಿ ನೆರವೇರಿತ್ತು. ಇದೀಗ ಚಿತ್ರದ ಚಿತ್ರೀಕರಣ ಕೆಲಸಗಳಿಗೆ ಚಾಲನೆ ನೀಡಿರುವ ಉಪ್ಪಿ ಮತ್ತು ಚಿತ್ರತಂಡ, ಸದ್ದಿಲ್ಲದೆ ಬೆಂಗಳೂರಿನ ಹೊರವಲಯದಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ.

Advertisement

ಸದ್ಯ ಉಪೇಂದ್ರ ಅವರ ಹೊಸ ಸಿನಿಮಾದ ಚಿತ್ರೀಕರಣದ ಕೆಲವೊಂದು ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಉಪ್ಪಿ ಹೊಸ ಸಿನಿಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ.

ಉಪ್ಪಿ ಚಿತ್ರಕ್ಕೆ ನಾಯಕಿ ಯಾರು?: ಇನ್ನು ಉಪೇಂದ್ರ ಹೊಸಚಿತ್ರದ ಚಿತ್ರೀಕರಣ ಆರಂಭವಾದರೂ, ಚಿತ್ರದ ನಾಯಕಿ ಯಾರು ಅನ್ನೋ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಇಲ್ಲಿಯವರೆಗೆ ಉಪೇಂದ್ರ ಅವರಾಗಲಿ ಅಥವಾ ಚಿತ್ರತಂಡವಾಗಲಿ ಸಿನಿಮಾದ ನಾಯಕಿಯ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. “ಕೆಜಿಎಫ್’ ಖ್ಯಾತಿಯ ಶ್ರೀನಿಧಿ ಶೆಟ್ಟಿ ಅಥವಾ ತಮನ್ನಾ ಭಾಟಿಯಾ ಉಪ್ಪಿ ಹೊಸ ಸಿನಿಮಾದಲ್ಲಿ ನಾಯಕಿಯಾಗಬಹುದು ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದ್ದರೂ, ಚಿತ್ರತಂಡ ಮಾತ್ರ ಅಧಿಕೃತವಾಗಿ ಯಾರ ಹೆಸರನ್ನೂ ಇದುವರೆಗೂ ಘೋಷಿಸಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next