Advertisement
ಗುರುವಾರ ಅವರು ತಾಲೂಕಿನ ಚಳಗೇರಾ ಹಿರೇಮಠದ ಲಿಂ.ವಿರುಪಾಕ್ಷಲಿಂಗ ಶ್ರೀಗಳವರ 8ನೇ ವರುಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ , ಧರ್ಮ ಮತ್ತು ಆಧ್ಯಾತ್ಮಿಕತೆ ಬದುಕಿಗೆ ಆಶಾಕಿರಣ. ಭೌತಿಕ ಬದುಕಿಗೆ ಆಧ್ಯಾತ್ಮ ಜ್ಞಾನ ಅವಶ್ಯಕ. ಮೌಲ್ಯಾಧಾರಿತ ಜೀವನದಿಂದ ಮನುಷ್ಯನಿಗೆ ಬೆಲೆ ಮತ್ತು ಬಲ ದೊರಕುತ್ತದೆ. ಮನದ ಅಜ್ಞಾನ ಎಂಬ ಕತ್ತಲೆ ಕಳೆಯಲು ಗುರು ಎಂಬ ಸೂರ್ಯ ಬೇಕೇ ಬೇಕು ಎಂದರು.
Related Articles
Advertisement
ತತ್ವದರ್ಶ ಚಿಂತಕ ಪ್ರಶಸ್ತಿಯನ್ನು ದೋಟಿಹಾಳ ಚಂದ್ರಶೇಖರ ದೇವರು, ಅಖಿಲ ಭಾರತ ವೀರಶೈವ ಯುವ ವೇದಿಕೆ ಅಧ್ಯಕ್ಷ ಬೆಂಗಳೂರಿನ ಜಯಂತ ಕುಮಾರ ಅವರಿಗೆ ವೀರಶೈವ ಯುವ ಸಿರಿ ಪ್ರಶಸ್ತಿ, ಸರಸ್ವತಿ ಸೇವಾಪುತ್ರ ಸೂರ್ಯಬಾಬು,ಜೆಡಿಎಸ್ ರಾಜ್ಯ ಕಾರ್ಯದರ್ಶಿ ವ್ಹಿ. ನಾಗೇಂದ್ರ ಅವರಿಗೆ ಸರಸ್ವತಿ ಸೇವಾ ಪುತ್ರ, ಹನುಮಸಾಗರದ ಮಲ್ಲಯ್ಯ ಕೋಮಾರಿ, ಪ್ರಶಸ್ತಿಗಳನ್ನಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಸಮಾರಂಭದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ವೀರಯ್ಯ ಹಿರೇಮಠ ಕೆಸರಟ್ಟಿ, ದೊಡ್ಡಯ್ಯ ಗದ್ದಡಕಿ, ಸಂಗಯ್ಯ ವಸ್ತ್ರದ, ಡಿಎಸ್ ಎಸ್ ವಕ್ತಾರ ವೆಂಕಟೇಶ, ಬಿಜೆಪಿ ತಾಲೂಕಾ ಅಧ್ಯಕ್ಷ ಬಸವರಾಜ್ ಹಳ್ಳೂರು, ಬಣಜಿಗ ಸಮಾಜದ ಅಧ್ಯಕ್ಷ ವಿಶ್ವನಾಥ ಕನ್ನೂರು, ಚಳಗೇರಾ ಗ್ರಾ.ಪಂ.ಅಧ್ಯಕ್ಷ ಮಹಾಂತೇಶ ಹಡಪದ, ಉಪಾಧ್ಯಕ್ಷೆ ಶಾಂತವ್ಬ ಜಾಲಿ, ವಿಜಯಕುಮಾರ ಹಿರೇಮಠ, ಲಾಡ್ಲೆ ಮಷಾಕ್ ದೋಟಿಹಾಳ, ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ, ರಾಜಕೀಯ ಗಣ್ಯರು ಮತ್ತು ದಾನಿಗಳು ಪಾಲ್ಗೊಂಡು ಗುರುರಕ್ಷೆ ಪಡೆದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಲಿಂ. ವಿರುಪಾಕ್ಷಲಿಂಗ ಶ್ರೀಗಳವರ ಪಲ್ಲಕ್ಕಿ ಉತ್ಸವ ಜರುಗಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.