Advertisement

ಕಟಪಾಡಿ : ದೇವಸ್ಥಾನಕ್ಕೆಂದು ಹೋದ ರಿಯಲ್‌ ಎಸ್ಟೇಟ್‌ ಉದ್ಯಮಿ ನಾಪತ್ತೆ

11:06 PM May 16, 2022 | Team Udayavani |

ಕಟಪಾಡಿ : ರಿಯಲ್‌ ಎಸ್ಟೇಟ್‌ ಉದ್ಯಮಿ, ಕಟಪಾಡಿ ನಿವಾಸಿ ಪ್ರಕಾಶ್‌ ರಾವ್‌ (46) ಮೇ 9ರಿಂದ ನಾಪತ್ತೆಯಾಗಿದ್ದಾರೆ.

Advertisement

ಕಟಪಾಡಿಯ ತನ್ನ ಮನೆಯಿಂದ ಹೊರಟು ಬಾರ್ಕೂರು ಗರಿಕೆ ಮಠ ದೇವಸ್ಥಾನಕ್ಕೆಂದು ಹೋಗಿದ್ದ ಅವರು ವಾಪಸು ಮನೆಗೆ ಬಾರದೆ ಕಾಣೆಯಾಗಿದ್ದು, ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವಾಹಿತರಾಗಿರುವ ಪ್ರಕಾಶ್‌ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಉರುಟು ಮುಖ, ಕಪ್ಪು ಮೈಬಣ್ಣ, ಸಾಮಾನ್ಯ ಮೈಕಟ್ಟು ಹೊಂದಿರುವ ಅವರು, ನೀಲಿ ಬಣ್ಣದ ಟೀ ಶರ್ಟ್‌, ಕಂದು ಬಣ್ಣದ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಾರೆ. ಹಿಂದಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.

ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್‌ ಠಾಣೆ 0820-2551033 ದೂರವಾಣಿಯನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ.

ಇದನ್ನೂ ಓದಿ : ಎಸೆಸೆಲ್ಸಿ ಅನಂತರ ಮುಂದೇನು? ವಿದ್ಯಾರ್ಥಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ಕಾರ್ಯಕ್ರಮ

Advertisement
Advertisement

Udayavani is now on Telegram. Click here to join our channel and stay updated with the latest news.

Next