Advertisement

Real Estate ಉದ್ಯಮಿ ಸಂತೋಷ ಪದ್ಮಣ್ಣವರ ಕೊ*ಲೆ ಪ್ರಕರಣ: ಖಾಸಗಿ ಆಸ್ಪತ್ರೆ ವೈದ್ಯನ ಬಂಧನ

09:44 PM Dec 04, 2024 | Team Udayavani |

ಬೆಳಗಾವಿ: ನಗರದ ರಿಯಲ್ ಎಸ್ಟೇಟ್‌ ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬುಧವಾರ ಮತ್ತೊಬ್ಬ ಆರೋಪಿ ಲಾಗಿದ್ದು ಇದರೊಂದಿಗೆ ಬಂಧಿತರ ಸಂಖ್ಯೆ ಐದಕ್ಕೇರಿದೆ.

Advertisement

ನಗರದ ಖಾಸಗಿ ಆಸ್ಪತ್ರೆ ವೈದ್ಯ ಪ್ರಶಾಂತ ಶಿವಾನಂದ (38) ಬಂಧಿತರು.

ಮೃತ ಸಂತೋಷ ಅವರಿಗೆ ಯಾವ ರೀತಿಯ ಮಾತ್ರೆ ಮತ್ತು ಚುಚ್ಚುಮದ್ದು ಕೊಡಬೇಕು ಎಂದು ಆರೋಪಿಗಳಿಗೆ ಪ್ರಶಾಂತ ಸೂಚಿಸಿದ್ದರು. ಬಂಧಿತ ಆರೋಪಿ ಪ್ರಶಾಂತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅ.9ರಂದು ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಮೃತಪಟ್ಟರು. ಆಗ ಹೃದಯಾಘಾತದಿಂದ ಸಾವು ಆಗಿದೆ ಎಂದು ಪತ್ನಿ ಉಮಾ ಸಂಬಂಧಿಕರಿಗೆ ತಿಳಿಸಿದ್ದರು. ನಂತರ ದಿನಾಂಕ 10ರಂದು ಅಂತ್ಯಕ್ರಿಯೆ ಮಾಡಿದ್ದರು. ಆದರೆ, ಸಂತೋಷ ಪುತ್ರಿ ಸಂಜನಾ ಅನುಮಾನಗೊಂಡು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next