Advertisement

ಗ್ಯಾಂಗ್ ಸ್ಟರ್ ಗಳ ಮೋಹ, ಇಬ್ಬರು ಪತಿಯರೂ ಎನ್ ಕೌಂಟರ್ ನಲ್ಲಿ ಸಾವು: ಸಿನಿಮಾಗೆ ಕಥೆಯಾದ ಸೋನು

12:39 PM Jul 23, 2020 | keerthan |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತು ಪಂಜಾಬ್ ಸೇರಿದಂತೆ ಉತ್ತರ ಭಾರತದ ಅತೀ ದೊಡ್ಡ ವೇಶ್ಯಾವಾಟಿಕೆ ಜಾಲದ ಕಿಂಗ್ ಪಿನ್ ಸೋನು ಪಂಜಾಬ್ ಗೆ 24 ವರ್ಷ ಜೈಲು ಶಿಕ್ಷೆ ನೀಡಿ ಕೋರ್ಟ್ ಆದೇಶಿಸಿದೆ. “ಮಹಿಳೆ ಎಂದು ಕರೆಯಲ್ಪಡುವ ಎಲ್ಲಾ ಮಿತಿಗಳನ್ನು ಈಕೆ ಮೀರಿದ್ದಾಳೆ”ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹಾಗಾದರೆ ಯಾರು ಈ ಸೋನು ಪಂಜಾಬನ್? ಆಕೆಯ ಜೀವನ ಕಥೆ ಸಿನಿಮಾ ಆಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Advertisement

ಸೋನು ಪಂಜಾಬನ್ ಳ ನಿಜವಾದ ಹೆಸರು ಗೀತಾ ಅರೋರಾ. ಹುಟ್ಟಿದ್ದು ದಕ್ಷಿಣ ದಿಲ್ಲಿಯಲ್ಲಿ. ವ್ಯವಹಾರ- ವೇಶ್ಯಾವಾಟಿಕೆ ಜಾಲ.

ದಿಲ್ಲಿಯ ಪ್ರತಿಷ್ಠಿತ ವ್ಯಕ್ತಿಗಳಿಗೆ ಸೋನು ಪಂಜಾಬನ್ ಹುಡುಗಿಯರನ್ನು ಸರಬರಾಜು ಮಾಡುತ್ತಿದ್ದಳು. ಕೆಲವರನ್ನು ಕಿಡ್ನಾಪ್ ಮಾಡಿ, ಕೆಲವರಿಗೆ ಮಾದಕ ನಶೆ ನೀಡಿ ಮತ್ತೆ ಕೆಲವರಿಗೆ ಸಿನಿಮಾ- ಸೀರಿಯಲ್ ಗಳಲ್ಲಿ ಅವಕಾಶ ನೀಡುತ್ತೇವೆ ಎಂದು ಆಮಿಷವೊಡ್ಡಿ ತನ್ನ ಬಲೆಗೆ ಬೀಳಿಸುತ್ತಿದ್ದಳು ಸೋನು. ದಿಲ್ಲಿಯ ಪ್ರತಿಷ್ಠಿತ ವ್ಯಕ್ತಿಗಳ ಮನೆಗಳಿಗೆ, ಪಂಚತಾರಾ ಹೋಟೆಲ್ ಗಳಿಗೆ, ರೆಸಾರ್ಟ್ ಗಳಿಗೆ ಸೋನು ಈ ಹುಡುಗಿಯರನ್ನು ಕಳುಹಿಸಿ ತನ್ನ ದಂಧೆ ನಡೆಸುತ್ತಿದ್ದಳು.

ಎರಡು ಮದುವೆಯಾಗಿದ್ದಳು

ದಿಲ್ಲಿಯಲ್ಲಿ ದಂಧೆ ನಡೆಸುತ್ತಿದ್ದ ಸೋನು ಪಂಜಾಬನ್ ಗೆ ಗ್ಯಾಂಗ್ ಸ್ಟರ್ ಗಳೆಂದರೆ ಪ್ರೀತಿ. ಕ್ರಿಮಿನಲ್ ಗಳ ಪ್ರೀತಿಯ ಬಲೆಗೆ ಬೀಳುತ್ತಿದ್ದಳು ಸೋನು. ಹೀಗಾಗಿ ಎರಡು ಮದುವೆಯಾಗಿದ್ದ ಸೋನು, ಇಬ್ಬರೂ ಕ್ರಿಮಿನಲ್ ಗಳೇ. ವಿಪರ್ಯಾಸವೆಂದರೆ ಇಬ್ಬರೂ ಎನ್ ಕೌಂಟರ್ ನಲ್ಲಿ ಸತ್ತಿದ್ದರು.

Advertisement

ಮೊದಲು ಹೇಮಾನು ಸೋನು ಎಂಬಾತನನ್ನು ಈಕೆ ಮದುವೆಯಾಗಿದ್ದಳು. ಆತನ ಹೆಸರನ್ನು ತಾನು ‘ಸೋನು’ ಎಂದು ಇಟ್ಟುಕೊಂಡಿದ್ದಳು. ಆದರೆ ಆತ ಈತ ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದ.

ನಂತರ ಗ್ಯಾಂಗ್ ಸ್ಟರ್ ಪ್ರಕಾಶ್ ಶುಕ್ಲಾ ನ ಬಂಟನಾಗಿದ್ದ ವಿಜಯ್ ಸಿಂಗ್ ನ ಪ್ರೀತಿಯ ಬಲೆಗೆ ಬಿದ್ದ ಸೋನು 2003ರಲ್ಲಿ ಆತನನ್ನು ವರಿಸಿದ್ದಳು. ಆದರೆ ಕೆಲವೇ ದಿನಗಳಲ್ಲಿ ಆತ ಗೌರಿ ಕುಖ್ತೇಶ್ವರ್ ನಲ್ಲಿ ಪೊಲೀಸ್ ಗುಂಡಿಗೆ ಬಲಿಯಾಗಿದ್ದ. ನಂತರ ದೀಪಕ್ ಎಂಬ ಕ್ರಿಮಿನಲ್ ಜೊತೆ ಸಂಬಂಧವಿಟ್ಟುಕೊಂಡಿದ್ದಳು ಸೋನು, ಆದರೆ ಆತನೂ ಅಸ್ಸಾಂ ನಲ್ಲಿ ಎನ್ ಕೌಂಟರ್ ಆಗಿದ್ದ! ಆಕೆಯ ಬದುಕಿಗೆ ಬಂದ ಎಲ್ಲಾ ಪುರುಷರು ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದರು!

ಸಿಕ್ಕಿಬಿದ್ದಿದ್ದು ಹೇಗೆ?

ಮಾಂಸ ದಂಧೆ ನಡೆಸುತ್ತಿದ್ದ ಸೋನು ಪಂಜಾಬನ್ ಕೆಲವು ಬಾರಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಳು. ಸೆರೆ ಸಿಕ್ಕರೂ ಸಾಕ್ಷಾಧಾರಗಳ ಕೊರತೆಯಿಂದ ಬಚಾವಾಗುತ್ತಿದ್ದಳು. ಆದರೆ 2014ರಲ್ಲಿ ಬಾಲಕಿಯೋರ್ವಳು ನೀಡಿದ ದೂರಿನಲ್ಲಿ ಸೋನು ಸಿಕ್ಕಿಬಿದ್ದಿದ್ದಳು. ಇದೇ ಪ್ರಕರಣದಲ್ಲಿ ಈಕೆಗೆ ಈಗ ಶಿಕ್ಷೆಯಾಗಿರುವುದು.

ಇದನ್ನೂ ಓದಿ: ವೇಶ್ಯಾವಾಟಿಕೆ ಜಾಲ ಕುಖ್ಯಾತಿಯ ಸೋನು ಪಂಜಾಬನ್ ಗೆ 24 ವರ್ಷ ಜೈಲು ಶಿಕ್ಷೆ

ಸೋನು ಸಹಚರ ಸಂದೀಪ್ ಬೆಡ್ವಾಲ್ ಎಂಬಾತ 13 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದ. ಆಕೆಗೆ ಇಂಗ್ಲೀಶ್ ಕಲಿಸಿ ಆಕೆಯನ್ನು ‘ದೊಡ್ಡವರ’ ತೆಕ್ಕೆಗೆ ಬಿಸಾಕಿದ್ದ. ಅಲ್ಲಿ ಆಕೆಯನ್ನು 12 ಮಂದಿ ಅತ್ಯಾಚಾರ ನಡೆಸಿದ್ದರು. ನಂತರ ಸಂದೀಪ್ ಆಕೆಯನ್ನು ಸೋನು ಪಂಜಾಬನ್ ಗೆ ಮಾರಿದ್ದ. ಅಲ್ಲಿಂದ ತಪ್ಪಿಸಿಕೊಂಡಿದ್ದ ಬಾಲಕಿ ನಜಾಫ್ ಗಢ್ ಠಾಣೆಯಲ್ಲಿ ದೂರು ನೀಡಿದ್ದಳು. 2017ರಲ್ಲಿ ಸೋನು ಪಂಜಾಬನ್ ಅಲಿಯಾಸ್ ಗೀತಾ ಅರೋರಾ ಮತ್ತು ಸಹಚರರನ್ನು ಪೊಲೀಸರು ಬಂಧಿಸಿದ್ದರು.

ಸಿನಿಮಾ ಕಥೆಯಾಗಿದ್ದ ಸೋನು

ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ ಸೋನು ಬದುಕು ಜನಪ್ರಿಯವಾಗಿತ್ತು. ಈಕೆಯ ಜೀವಾನ ಆಧಾರಿತ ಚಿತ್ರ ‘ಫುಕ್ರೆ; ಬಾಲುವುಡ್ ನಲ್ಲಿ ತೆರೆಗೆ ಬಂದಿತ್ತು. ಭೋಲಿ ಪಂಜಾಬನ್ ಹೆಸರಲ್ಲಿ ಸೋನು ಪಂಜಾಬನ್ ಪಾತ್ರವನ್ನು ರಿಚಾ ಚಡ್ಡ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next