Advertisement
ಇತ್ತೀಚೆಗಷ್ಟೇ ಬಿಸಿಸಿಐ ತನ್ನ ವಿಶೇಷ ಸಭೆ ನಡೆಸಿ, ನ್ಯಾಯಪೀಠದ ಆದೇಶವನ್ನು ಪುನಃ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿತ್ತು. ಇದು ನ್ಯಾಯಾಲಯದ ಆದೇಶದ ಜಾರಿಯನ್ನು ವಿಳಂಬಗೊಳಿಸಲು ಬಿಸಿಸಿಐ ಮಾಡಿದ ತಂತ್ರ ಎಂದು ವರ್ಣಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ವಿನೋದ್ ರಾಯ್ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಒಂದು ವೇಳೆ ಇದು ಸಾಧ್ಯವಾಗದಿದ್ದರೆ ನಾವು ಆದೇಶವನ್ನು ಒತ್ತಾಯಪೂರ್ವಕವಾಗಿ ಜಾರಿ ಮಾಡಬೇಕಾಗುತ್ತದೆ. ಇದು ಬಹಳ ಸರಳ ಸಂಗತಿ ಎಂದು ರಾಯ್ ಸ್ಪಷ್ಟಪಡಿಸಿದ್ದಾರೆ. ಜು.14ರಂದು ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಇದೇ ವೇಳೆ ತನ್ನ ವಿರೋಧವನ್ನು ಸೂಚಿಸಲು ಬಿಸಿಸಿಐ ಕೂಡ 7 ಮಂದಿಯ ಸಮಿತಿ ರಚಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿನೋದ್ ರಾಯ್, ಬಿಸಿಸಿಐ ವಾರ್ಷಿಕ ಸರ್ವ ಸದಸ್ಯರ ಸಭೆ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಅ.31ರೊಳಗೆ ಚುನಾವಣೆ ನಡೆದು ಹೊಸ ಪದಾಧಿಕಾರಿಗಳು ಆಯ್ಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
Related Articles
ದುರದೃಷ್ಟಕರ: ಲೋಧಾ
ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಬಿಸಿಸಿಐ ಇನ್ನೂ ಜಾರಿ ಮಾಡದಿರುವ ಕುರಿತು ನ್ಯಾ.ಲೋಧಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೀರ್ಪು ಜಾರಿಯಾಗಿ ವರ್ಷವಾಗುತ್ತಿದೆ. ಆಡಳಿತಾಧಿಕಾರಿಗಳ ಸಮಿತಿ ರಚನೆಯಾಗಿ 6 ತಿಂಗಳಾಗಿದೆ. ಆದರೂ ಆದೇಶ ಜಾರಿಯಾಗದಿರುವುದು ದುರದೃಷ್ಟಕರ ಎಂದು ಲೋಧಾ ಹೇಳಿದ್ದಾರೆ.
Advertisement