Advertisement

ವರಾಹಗಿರಿ ಬೆಟ್ಟ ಪ್ರವಾಸಿ ತಾಣ ಮಾಡಲು ಸಿದ್ಧ

01:10 PM Oct 18, 2021 | Team Udayavani |

ಗುಡಿಬಂಡೆ: ತಾಲೂಕಿನ ವರ್ಲಕೊಂಡ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ವರಾಹಗಿರಿ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ನಾನು ಸಿದ್ಧ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

Advertisement

ತಾಲೂಕಿನ ವರ್ಲಕೊಂಡ ಗ್ರಾಮದ ವರಾಹಗಿರಿ ಬೆಟ್ಟಕ್ಕೆ ಮೆಟ್ಟಿಲು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಾನು ಚಿಕ್ಕಂದಿನಿಂದಲೂ ವರ್ಲಕೊಂಡ ಗ್ರಾಮದ ಬೆಟ್ಟದ ಬಗ್ಗೆ ಕೇಳಲ್ಪಟ್ಟಿದ್ದೆ, ಆದರೆ, ನಾನೆಂದೂ ಬೆಟ್ಟದತ್ತ ಬಂದಿರಲಿಲ್ಲ, ಇಂದು ಈ ದೇವರ ಕಾರ್ಯಕ್ಕೆ ಆಗಮಿಸಿ, ಚಾಲನೆ ನೀಡಿರುವುದು ನನ್ನ ಅದೃಷ್ಟ ಎಂದು ಹೇಳಿದರು.

 ದೇಗುಲಗಳ ಜೀರ್ಣೋದ್ಧಾರ: ವರಾಹಗಿರಿ ಬೆಟ್ಟದ ಮೇಲಿನ ಶ್ರೀರಾಮದೇವರ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಿಸಿದ್ದು, ಬೆಟ್ಟದ ಬುಡದಲ್ಲಿ ವೇಣುಗೋಪಾಲ, ಆಂಜನೇಯ, ಚಂದ್ರಮೌಳೇಶ್ವರ, ಬೈರವೇಶ್ವರ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳು ಇವೆ. ಈ ಐದು ದೇಗುಲಗಳು ಜೀಣೊìà ದ್ಧಾರಗೊಳ್ಳಬೇಕಾಗಿದೆ ಎಂದು ವಿವರಿಸಿದರು.

ಪ್ರವಾಸಿ ತಾಣ ಮಾಡಲು ಸಿದ್ಧ: ಈ ಬೆಟ್ಟದ ಮಹತ್ವ ತಿಳಿಯುತ್ತಾ ಹೋದಂತೆ, ಬೆಟ್ಟವನ್ನು ನಾನಾ ಕಡೆಗಳಿಂದ ನೋಡಿದರೆ, ಆನೆಯು ಮಲಗಿರುವಂತೆ, ಪರ್ವತದಂತೆ, ವರಾಹನರಸಿಂಹಸ್ವಾಮಿಯಂತೆ ಕಾಣುತ್ತದೆ, ಇಂತಹ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಅಭಿವೃದ್ಧಿಯನ್ನು ಮಾಡುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಟ್ಟು, ಪ್ರವಾಸಿ ತಾಣವನ್ನಾಗಿ ಮಾಡಲು ನಾನು ಸಿದ್ಧ ಎಂದು ಹೇಳಿದರು. ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ಮಾತನಾಡಿ, ವರಾಹಗಿರಿ ಬೆಟ್ಟವು ಚೋಳರ ಕಾಲದಲ್ಲಿ ನಿರ್ಮಿಸಿದ್ದು, ಇತಿಹಾಸ ಪ್ರಸಿದ್ಧವಾಗಿದೆ, ಮೈಸೂರು ಅರಸರಾಗಿದ್ದ ಶ್ರೀಕೃಷ್ಣದೇವರಾಜ ಒಡೆಯರ್‌ ಕಾಲದಲ್ಲಿ ದಸರಾ ಸಮಯದಲ್ಲಿ ನಾಡ ದೇವತೆ ಚಾಮುಂಡಿ ದೇವರಿಗೆ ಈ ವರಾಹಗಿರಿ ಬೆಟ್ಟದಿಂದ ಶ್ವೇತ ವರ್ಣದ ತಾವರೆಗಳನ್ನು ಸಮರ್ಪಿಸಿದ ನಂತರ ಜಂಬೂ ಸವಾರಿ ಹೊರಡುತ್ತಿದ್ದೆಂದು ಬೆಟ್ಟದ ಇತಿಹಾಸ ಹುಡುಕುತ್ತಾ ಹೋದರೆ ತಿಳಿಯುತ್ತದೆ ಎಂದು ವಿವರಿಸಿದರು.

 ಪ್ರವಾಸಿ ತಾಣಕ್ಕಾಗಿ ಸಹಕರಿಸಿ: ಈ ಬೆಟ್ಟವು ಏಷ್ಯ ಖಂಡದಲ್ಲಿ ಬೃಹತ್‌ ಏಕಶಿಲಾ ಬೆಟ್ಟಗಳಲ್ಲಿ ಮೂರನೇ ಸ್ಥಾನ ಗಳಿಸಿರುವುದು ಒಂದು ಹೆಮ್ಮೆಯ ವಿಷಯವಾಗಿದೆ. ಇಂತಹ ಇತಿಹಾಸ ಪ್ರಸಿದ್ಧ ಬೆಟ್ಟವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಮಾಡಲು ಪಣ ತೊಟ್ಟಿರುವ ಎಲ್ಲರಿಗೂ ಧನ್ಯವಾದಗಳು, ಈ ಬೆಟ್ಟವನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಸಚಿವರು ತಮ್ಮ ಸಹಕಾರ ನೀಡಬೇಕು ಎಂದು ವಿವರಿಸಿದರು.

Advertisement

 ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ: ಟ್ರಸ್ಟ್‌ನಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಚಿವರು, ವರಾಹಗಿರಿ ಬೆಟ್ಟವನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಈ ಸಾಲಿನಲ್ಲಿ ಬೇಕಾದ ಅನುದಾನ ಬಿಡುಗಡೆಗೊಳಿಸಲು ಸೂಚಿಸುತ್ತೇನೆ ಎಂದು ವಿವರಿಸಿದರು.

ಮೂಲ ಭೂತ ಸೌಕರ್ಯಕ್ಕೆ ಜಾಗ: ವರಾಹಗಿರಿ ಬೆಟ್ಟಕ್ಕೆ ಈಗಾಗಲೇ ವಾರಾಂತ್ಯದಲ್ಲಿ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದೆ. ಆದರೆ, ವರ್ಲಕೊಂಡ ಗ್ರಾಮದಲ್ಲಿ ಹಾಗೂ ಬೆಟ್ಟದ ಬುಡದಲ್ಲಿ ಪ್ರವಾಸಿಗರಿಗೆ ಅನುಕೂಲಕರವಾಗಿ ಶೌಚಾಲಯವಾಗಲಿ, ತಂಗುದಾಣವಾಗಲಿ ಇರುವುದಿಲ್ಲ ಎಂಬ ವಿಷಯಕ್ಕೆ ಮಾತನಾಡಿದ ಸಚಿವ, ಮೂಲ ಸೌಕರ್ಯಗಳಿಗೆ ಬೆಟ್ಟದ ಬಳಿ ಭೂಮಿ ಅವಶ್ಯಕತೆ ಇದ್ದು, ಜಾಗ ಒದಗಿಸಿಕೊಡುವ ಬಗ್ಗೆ ಜಿಲ್ಲಾ ಧಿಕಾರಿಗಳ ಬಳಿ ಚರ್ಚಿಸಿ ಸೂಕ್ತ ಕ್ರಮ ವಹಿಸುತ್ತೇನೆ ಎಂದರು.

ಇದನ್ನೂ ಓದಿ;- ಶಾಸಕ ಪಾಟೀಲ್‌ ಹೇಳಿಕೆಗೆ ರಾಜಕೀಯ ಧ್ವನಿ

ರಸ್ತೆ ಸಂಪರ್ಕ: ಬೆಟ್ಟದ ಬುಡಕ್ಕೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಪೋಲಂಪಲ್ಲಿ ರಸ್ತೆ ಬಳಿ 500 ಮೀಟರ್‌ಗಳ ರಸ್ತೆ ಕಲ್ಪಿಸಲು ಮನವಿ ಮಾಡಿದ್ದು, ಇದಕ್ಕೆ ಸ್ಪಂ ದಿಸಿದ ಸಚಿವರು, ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ತ್ವರಿತ ಗತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವಾಗುವಂತೆ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿ ಕಾರಿಗಳಿಗೆ ಸೂಚಿಸಿ, ರಸ್ತೆ ಮಾಡಿಸಿಕೊಡುತ್ತೇನೆ ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀವರಾಹಗಿರಿ ಎಂಬ ಕಿರುಹೊತ್ತಿಗೆ ಪುಸ್ತಕವನ್ನು ಸಚಿವ ಕೆ.ಸುಧಾಕರ್‌, ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ, ಟ್ರಸ್ಟ್‌ನ ಅಧ್ಯಕ್ಷ ಹಾಗೂ ಎಲ್ಲಾ ಸದಸ್ಯರು ಬಿಡುಗಡೆ ಮಾಡಿದರು. ನಂತರ ಸಚಿವರಿಗೆ ಮತ್ತು ಶಾಸಕರಿಗೆ ಬೆಟ್ಟದ ಅಭಿವೃದ್ಧಿಗಾಗಿ ಟ್ರಸ್ಟ್‌ನ ಆಡಳಿತ ಮಂಡಳಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್‌ ಸಿಗ್ಬತುಲ್ಲಾ, ಟ್ರಸ್ಟ್‌ನ ಅಧ್ಯಕ್ಷ ಎ.ಶಿವರಾಂ, ಕಾರ್ಯದರ್ಶಿ ಶ್ರೀನಿವಾಸಾಚಾರಿ, ಉಪಾಧ್ಯಕ್ಷ ಎಲ್‌.ಎ.ಬಾಬು, ಗ್ರಾಪಂ ಅಧ್ಯಕ್ಷೆ ಅನಂದಮ್ಮ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next