ಆಳಂದ: ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಯ ಒಟ್ಟು 42909 ವಿದ್ಯಾರ್ಥಿಗಳಿಗೆ 132 ದಿನಗಳ ಆಹಾರಧಾನ್ಯ (ಶೇ. 60) ಗಳನ್ನು ಆಯಾ ಶಾಲೆಗಳಿಗೆ ವಿತರಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಭರತರಾಜ ಸಾವಳಗಿ ಹೇಳಿದರು. ತಾಲೂಕಿನ ಸುಂಟನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಆಹಾರಧಾನ್ಯ ವಿತರಿಸಿ ಅವರು ಮಾತನಾಡಿ ದರು.
ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಪ್ರವೇಶ ಪಡೆದಿದ್ದಾರೆ. ಕೋವಿಡ್ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆ ಆಗಿದೆ. ಈ ನಿಟ್ಟಿನಲ್ಲಿ ಅಕ್ಕಿ, ಬೇಳೆ, ಉಪ್ಪು, ಎಣ್ಣೆ, ಗೋಧಿ ಯಂತ ಪದಾರ್ಥಗಳನ್ನು ಆಯಾ ಶಾಲೆಗಳ ಮೂಲಕ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಒಟ್ಟು 42909 ವಿದ್ಯಾರ್ಥಿಗಳಿಗೆ ಕಳೆದ ನವೆಂಬರ್ 2020ರಿಂದ ಏಪ್ರಿಲ್ 2021ರ ವರೆಗಿನ ಅವ ಧಿಯ ವರೆಗಿನ ಆಹಾರಧಾನ್ಯವನ್ನು ಆಯಾ ಶಾಲೆಗಳಿಗೆ ವಿತರಣೆ ಮಾಡಲಾಗಿದೆ.
ಈ ಪೈಕಿ ಶೇ. 30ರಷ್ಟು ಮಕ್ಕಳಿಗೆ ಹಂಚಿಕೆಯಾಗಿದೆ. ಎರಡೇ ವಾಹನಗಳು ಇರುವುದರಿಂದ ಇನ್ನುಳಿದ ಆಹಾರಧಾನ್ಯವನ್ನು ಏಕಕಾಲಕ್ಕೆ ಎಲ್ಲ ಶಾಲೆಗಳಿಗೆ ಪೂರೈಸಲು ವಿಳಂಬವಾಗುತ್ತಿದೆ. ವಾರದಲ್ಲೇ ಎಲ್ಲವನ್ನು ಪೂರೈಸಿ ಶಾಲಾ ಮುಖ್ಯಸ್ಥರು ವರದಿ ಸಲ್ಲಿಸಬೇಕು ಎಂದು ತಿಳಿಸಿದರು. ಕೋವಿಡ್ 3ನೇ ಅಲೆ ಭೀತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತರಗತಿ ಸದ್ಯಕ್ಕೆ ಆರಂಭವಾಗುವ ಲಕ್ಷಣಗಳಿಲ್ಲ. ಮೊದಲ ಹಂತದಲ್ಲಿ ಪದವಿ, ನಂತರ ಪಿಯು, ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳನ್ನು ಹಂತ- ಹಂತವಾಗಿ ಆರಂಭಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.
ಪ್ರೌಢಶಾಲೆಗಳಿಗೆ ಶೈಕ್ಷಣಿಕವಾಗಿ ಸದ್ಯದಲ್ಲೇ ಆನ್‌ಲೈನ್ ತರಗತಿ ಆರಂಭಿಸಲು ಇಲಾಖೆ ಸೂಚನೆ ಮೆರೆಗೆ ಪಾಲಕರ ಮತ್ತು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ ಸಂಗ್ರಹಿಸಲು ಶಾಲೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಆದರೆ ಪ್ರಸಕ್ತ ವರ್ಷದ ಪಠ್ಯಪುಸ್ತಕಗಳ ಪೂರೈಕೆ ಆಗಿಲ್ಲ. ಸದ್ಯಕ್ಕೆ ಹಳೆ ವಿದ್ಯಾರ್ಥಿಗಳ ಬಳಿಯಿಂದ ಪುಸ್ತಕಗಳನ್ನು ಪಡೆದು ಹೊಸಬರಿಗೆ ನೀಡಿ ಜುಲೈ 1ರಿಂದ ಆನ್‌ಲೈನ್ ತರಗತಿ ನಡೆಸುವ ಕುರಿತು ಸಿದ್ಧತೆ ನಡೆಯುತ್ತಿದೆ. ಎಲ್ಲ ಶಾಲೆಗಳ ಶಿಕ್ಷಕರು ಸಜಾಗಿರಬೇಕು ಎಂದು ಸೂಚಿಸಿದರು
. ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಕೋಣೆಗಳ ಸ್ಯಾನಿಟೈಸ್ ಮಾಡಬೇಕು. ಎಲ್ಲ ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು ಎಂದು ಹೇಳಿದರು. ಮುಖ್ಯ ಶಿಕ್ಷಕಿ ಸ್ಮಿàತಾ ಜೈನ್, ಶಿಕ್ಷಕ ಕೇಶವರಾವ್, ಮಳಯ್ಯ ಸ್ವಾಮಿ ಇದ್ದರು.