Advertisement

ಯಾವ ತ್ಯಾಗಕ್ಕೂ ಸಿದ್ಧ

12:30 AM Feb 01, 2019 | |

ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರಿಂದ ಒಬ್ಬರಿಗೆ ಕೆಸರೆರಚಾಟ ಮುಂದುವರಿದಿದೆ. ಕಾಂಗ್ರೆಸ್‌ ಶಾಸಕರಿಗೆ ಸಿದ್ದರಾಮಯ್ಯ
ಮುಖ್ಯಮಂತ್ರಿಯಾಗಿರಬಹುದು. ರಾಜ್ಯದ ಜನತೆಗೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಸಚಿವ ಜಿ.ಟಿ.ದೇವೇಗೌಡ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರೇ ನಮ್ಮ ನಾಯಕ. ನನ್ನ ವ್ಯಕ್ತಿ ನಿಷ್ಠೆಯೆಂದರೆ ಸಿದ್ದರಾಮಯ್ಯ, ಪಕ್ಷ ನಿಷ್ಠೆ ಎಂದರೆ ಕಾಂಗ್ರೆಸ್‌ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

Advertisement

ಬೆಂಗಳೂರು: ಕಾಂಗ್ರೆಸ್‌ ಶಾಸಕರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರಬಹುದು. ರಾಜ್ಯದ ಜನತೆಗೆ ಎಚ್‌
.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ತಿರುಗೇಟು ನೀಡಿದ್ದಾರೆ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಏಳನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌-ಕಾಂಗ್ರೆಸ್‌ ಸಮಿಶ್ರ ಸರ್ಕಾರ ಉಳಿಸುವ ಸಲುವಾಗಿ ಜೆಡಿಎಸ್‌ ಶಾಸಕರು ಮತ್ತು ಕಾರ್ಯಕರ್ತರು ಎಂತಹ ತ್ಯಾಗಕ್ಕೂ ಸಿದಟಛಿ ಎಂದು ತಿಳಿಸಿದರು.

ಕಾಂಗ್ರೆಸ್‌ ಪಕ್ಷದ ಮುಖಂಡರಿಗೆ ಅವರು ಕೇಳಿರುವ ಎಲ್ಲ ಹುದ್ದೆಗಳನ್ನು ನೀಡಲಾಗಿದೆ. ಆದರೂ ಕೆಲವರು ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಎಂಬುವುದನ್ನು ಕಾಂಗ್ರೆಸ್‌ ಮುಖಂಡರು ಮತ್ತು ಶಾಸಕರು ಮರೆಯಬಾರದು ಎಂದರು.

ಸಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಇದುವರೆಗೂ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಅಪಸ್ವರ ಎತ್ತಿಲ್ಲ. ಸಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡಲಿ ಎಂಬುವುದು ಪಕ್ಷದ ಕಾರ್ಯಕರ್ತರ ಉದ್ದೇಶವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುವುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಮುಖಂಡರ ನಡೆಯನ್ನು ಹೈಕಮಾಂಡ್‌ ಗಮನಿಸುತ್ತಿದ್ದು, ಅಶಿಸ್ತಿನಿಂದ ನಡೆದುಕೊಂಡರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ. ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬಾದಾಮಿಗೆ 224 ಕೋಟಿ ರೂ.: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿ ಅಭಿವೃದ್ಧಿಗೆ 224 ಕೋಟಿ ರೂ.ಬಿಡುಗಡೆ ಮಾಡಲಾಗಿದೆ.

ಕುಡಿಯುವ ನೀರಿಗಾಗಿ ನನ್ನ ಕ್ಷೇತ್ರಕ್ಕೆ ಕಳೆದ ಸಲದ ಬಜೆಟ್‌ನಲ್ಲಿ ಅನುದಾನ ನೀಡಿ ಎಂದು ಕೇಳಿದ್ದೆ. ಆದರೆ ನನಗೆ ನೀಡದೆ ಬಾದಾಮಿಗೆ ದಿಢೀರ್‌ ಎಂದು ಕೋಟ್ಯಂತರ ರೂ. ಅನುದಾನ ನೀಡಿರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಶ್ನಿಸಿದ್ದಾಗಿ ಹೇಳಿದರು.

“ಸಿದ್ದರಾಮಯ್ಯನೇ ನಮ್ಮ ನಾಯಕ’
ಕೊಪ್ಪಳ
: ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆಯೇ ಕೊಪ್ಪಳ ಕ್ಷೇತ್ರ ಹೆಚ್ಚು ಅಭಿವೃದ್ಧಿ ಮಾಡಿದ್ದೇನೆ. ಅವರೇ ನಮ್ಮ ನಾಯಕ. ನನ್ನ ವ್ಯಕ್ತಿ ನಿಷ್ಠೆಯೆಂದರೆ ಸಿದ್ದರಾಮಯ್ಯ, ಪಕ್ಷ ನಿಷ್ಠೆ ಎಂದರೆ ಕಾಂಗ್ರೆಸ್‌ ಎಂದು ಸಂಸದೀಯ ಕಾರ್ಯದರ್ಶಿ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಅಪಾರ. ಅವರಿಂದಲೇ ಕ್ಷೇತ್ರ ಅಭಿವೃದ್ಧಿಯಾಗಿದೆ. ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಅವರು ನಮ್ಮ ನಾಯಕ ಎಂದರೆ ತಪ್ಪೇನಿದೆ? ವ್ಯಕ್ತಿ ನಿಷ್ಠೆಯೆಂದರೆ ನಮಗೆ ಸಿದ್ದರಾಮಯ್ಯ ನಾಯಕ. ಮೈತ್ರಿ ಸರ್ಕಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ.ಅವೆಲ್ಲವುಗಳನ್ನೂ ಪಕ್ಷದ ಮುಖಂಡರು ಬಗೆಹರಿಸುತ್ತಾರೆ ಎಂದರು.

ಸಿದ್ದು ನಮ್ಮ ನಾಯಕ ಅಂದರೆ ತಪ್ಪೇನು?
ಕೊಪ್ಪಳ
: ಸಿದ್ದರಾಮಯ್ಯ ಅವರು ನಮ್ಮ ನಾಯಕ ಎಂದರೆ ತಪ್ಪೇನು? ನಮ್ಮ ಶಾಸಕರು ಸಿದ್ದರಾಮಯ್ಯ ಅವರ ಬಗ್ಗೆ ಪ್ರೀತಿ, ಅಭಿಮಾನದಿಂದ ನಮ್ಮ ನಾಯಕರು ಎಂದು ಹೇಳುತ್ತಿದ್ದು ಇದರಲ್ಲಿ ತಪ್ಪೇನಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ರಾಜೇಖರ ಪಾಟೀಲ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿ ಕಾರ ನಡೆಸುತ್ತಿದೆ. ಕುಮಾರಸ್ವಾಮಿ ನಮಗೆಲ್ಲ ಮುಖ್ಯಮಂತ್ರಿ. ಆದರೆ, ನಮ್ಮ ನಾಯಕ ಸಿದ್ದರಾಮಯ್ಯ. ಅವರೊಬ್ಬ ಸಿಎಲ್‌ಪಿ
ನಾಯಕರಾಗಿದ್ದಾರೆ. ಹಾಗಾಗಿ ಪ್ರೀತಿ, ಅಭಿಮಾನದಿಂದ ನಾವೆಲ್ಲ ನಮ್ಮ ನಾಯಕಎಂದು ಹೇಳಿಕೊಳ್ಳುತ್ತಿದ್ದೇವೆ ಎಂದರು.

ಮುಖ್ಯಮಂತ್ರಿ ಒಬ್ಬರೇ, ನಾಯಕರು ಬೇರೆ
ಬೆಂಗಳೂರು:
ರಾಜ್ಯದಲ್ಲಿ ಸಂವಿಧಾನ ಪ್ರಕಾರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರೇ ಮುಖ್ಯಮಂತ್ರಿ ಇದ್ದಾರೆ. ಆದರೆ, ಪಕ್ಷದ ನಾಯಕರು ಬೇರೆ ಬೇರೆ ಎಂದು ನಗರಾಭಿವೃದಿಟಛಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಈಗಾಗಲೇ ಹೇಳಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಆಯಾ ವ್ಯಕ್ತಿಗಳಿಗೆ ನಾಯಕರು ಬೇರೆ ಬೇರೆಯಾಗಿರುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು.ಸಿದ್ದರಾಮಯ್ಯ ಬಗ್ಗೆ ಹೇಳಿಕೆ ಕೊಟ್ಟವರು ಕುಮಾರಸ್ವಾಮಿ ಮುಖ್ಯಮಂತ್ರಿ ಅಲ್ಲ ಎಂದು ಹೇಳಿಲ್ಲ. ಯಾರ ಹೇಳಿಕೆಯೂ ಇನ್ನೊಬ್ಬರಿಗೆ ನೋವಾಗದಂತಿರಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next