ಕುಂಬಳೆ: ಓದುವ ಹವ್ಯಾಸ ವಿಸ್ತರಿಸಿದಷ್ಟು ಇಂದಿನ ಔಪಚಾರಿಕ ಶಿಕ್ಷಣ ನೀಡುವುದಕ್ಕಿಂತ ಹೆಚ್ಚು ಅರಿವನ್ನು ನೀಡುತ್ತದೆ.ಉತ್ತಮ ಪುಸ್ತಕಗಳ ಓದು ಜಗತ್ತನ್ನು ನೋಡುವ, ಜೀವನದ ಸಂಕಷ್ಟ ಗಳನ್ನು ಎದುರಿಸುವ ಬಲ ನೀಡುತ್ತದೆ ಎಂದು ಸಾಹಿತಿ ಕೃಷ್ಣವೇಣಿ ಕಿದೂರು ಅಭಿಪ್ರಾಯ ಹೇಳಿದರು.
ಕೇರಳ ರಾಜ್ಯ ಲೆ„ಬ್ರರಿ ಕೌನ್ಸಿಲ್ ಆಯೋಜಿಸಿದ ಅಖೀಲ ಕೇರಳ ವಾಚನ ಸ್ಪರ್ಧೆಯ ಮಂಜೇಶ್ವರ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಕುಂಬಳೆ ಸರಕಾರಿ ಹೆ„ಸ್ಕೂಲಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಲೆ„ಬ್ರರಿ ಕೌನ್ಸಿಲ್ ಯುವ ಸಮೂಹಕ್ಕೆ ನೀಡುತ್ತಿರುವ ಓದುವ ಹವ್ಯಾಸಗಳ ಬಗೆಗಿನ ಚಟುವಟಿಕೆಗಳು ಸ್ತುತ್ಯರ್ಹವಾಗಿದ್ದು, ಇದು ರಾಜ್ಯದಲ್ಲಿ ದೊಡ್ಡ ಆಂದೋಲನವನ್ನೇ ಸƒಷ್ಟಿಸಿ ಇತರೆಡೆಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದ ಅವರು ವಿದ್ಯಾರ್ಥಿ ಯುವ ಸಮೂಹಕ್ಕೆ ಪುಸ್ತಕಗಳು ತಲಪುವಂತೆ, ಓದುವ ಹವ್ಯಾಸ ಬೆಳೆಸುವಂತೆ ಮಾಡುವ ಚಟು ವಟಿಕೆಗಳು ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದರು.
ಎಂ.ಎಸ್. ಮೊಗ್ರಾಲ್ ಗ್ರಂಥಾ ಲಯದ ಅಧ್ಯಕ್ಷ ಸಿದ್ದೀಕ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ಕುಂಜತ್ತೂರು ಸರಕಾರಿ ಹೆ„ಸ್ಕೂಲಿನ ಮುಖ್ಯೋಪಾಧ್ಯಾಯ ಆಗಸ್ಟಿನ್ ಬರ್ನಾಡ್, ಧರ್ಮ ತ್ತಡ್ಕ ಹಿ. ಪ್ರಾಥಮಿಕ ಶಾಲಾ ಮುಖ್ಯೋಪಾ ಧ್ಯಾಯ ಎನ್. ಶಂಕರನಾರಾಯಣ ಭಟ್ ಶುಭಾಶಂಸನೆಗೆ„ದರು. ಮಂಜೇಶ್ವರ ತಾಲೂಕು ಲೆ„ಬ್ರರಿ ಕೌನ್ಸಿಲ್ ಕಾರ್ಯ ದರ್ಶಿ ಅಹಮ್ಮದ್ ಹುಸೆ„ನ್ ಪಿ.ಕೆ. ಸ್ವಾಗತಿಸಿ, ವಂದಿಸಿದರು.
ಬಳಿಕ ನಡೆದ ವಾಚನ ಸ್ಪರ್ಧೆಯಲ್ಲಿ ಅಪೂರ್ವಾ ಎಡಕ್ಕಾನ ಪ್ರಥಮ-ಎಸ್‌ಡಿಪಿಎಚ್‌ಎಸ್ ಶಾಲೆ ಧರ್ಮತ್ತಡ್ಕ, ಕ್ಷತೀಶ ಸಿ.ಎಸ್. ದ್ವಿತೀಯ-ಶಾರದಾಂಬಾ ಹೆ„ಸ್ಕೂಲು ಶೇಣಿ, ಶಿವೇಶ್ ಎಸ್ ತƒತೀಯ-ವಿದ್ಯಾವರ್ಧಕ ಹೆ„ಸ್ಕೂಲು ಮೀಯಪದವು ಆಯ್ಕೆಯಾಗಿ ಸೆ.24 ರಂದು ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಭಾಗವಹಿಸಿದ ಕಾರ್ತಿಕ್ ಕೆ. 4ನೇ ಸ್ಥಾನ-ಸರಕಾರಿ ಪ್ರೌಢಶಾಲೆ ಪೈವಳಿಕೆ ನಗರ, ಧ್ವನೀಶ್ 5ನೇ ಸ್ಥಾನ-ಸರಕಾರಿ ಪ್ರೌಢಶಾಲೆ ಪೈವಳಿಕೆ ನಗರ, ಯಶಸ್ವೀ ಐ. 6ನೇ ಸ್ಥಾನ-ಸರಕಾರಿ ಫೌÅಢಶಾಲೆ ಕುಂಬಳೆ, ಸಾತ್ವಿಕ್ ಕೃಷ್ಣ ಎನ್. 7ನೇ ಸ್ಥಾನ-ಧರ್ಮತ್ತಡ್ಕ ಹೆ„ಸ್ಕೂಲು,ಆಯಿಶತ್ ಶಮ್ನಾಹನ್ನಾ 8ನೇ ಸ್ಥಾನ-ಎಸ್‌ಎಟಿ ಹೆ„ಸ್ಕೂಲು ಮಂಜೇಶ್ವರ, ಪ್ರೇಕ್ಷಾ ಪಿ. 9ನೇ ಸ್ಥಾನ-ಎಸ್‌ಎಟಿ ಹೆ„ಸ್ಕೂಲು ಮಂಜೇಶ್ವರ, ಚರಣ್ ರಾಜ್ 10ನೇ ಸ್ಥಾನ- ವಿದ್ಯಾವರ್ಧಕ ಹೆ„ಸ್ಕೂಲು ಮೀಯಪದವು ಬಹುಮಾನಗಳನ್ನು ಪಡೆದರು.