Advertisement

ಹೆಚ್ಚುವರಿ ಕೋವಿಡ್ ಲಸಿಕೆ ಪೂರೈಸಿ :  ಮೋದಿಗೆ ದೀದಿ ಪತ್ರ

02:06 PM Apr 19, 2021 | Team Udayavani |

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿನ ಕೋವಿಡ್  ಸೋಂಕನ್ನು ನಿವಾರಣೆ ಮಾಡುವ ಉದ್ದೇಶದದಿಂದ ಹೆಚ್ಚುವರಿ ಲಸಿಕೆಯನ್ನು ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ.

Advertisement

ಈ ಕುರಿತಾಗಿ ಟ್ವೀಟ್ ಮಾಡಿರುವ ಮಮತಾ, ದೇಶದಾದ್ಯಂತ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಪಶ್ಚಿಮ ಬಂಗಾಳ ಸರ್ಕಾರ ಕೋವಿಡ್ ಸೋಂಕಿನಿಂದ ಜನರನ್ನು ರಕ್ಷಿಸಲು ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಲುತ್ತಿದೆ. ಹೆಚ್ಚುವರಿ ಲಸಿಕೆಗಳಿಗಾಗಿ ಪ್ರಧಾನಿಯವರನ್ನು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಓದಿ : ಗುತ್ತಿಗಾರು ಪ್ರೌಢಶಾಲೆಯ ಮೂವರು ಮಕ್ಕಳಿಗೆ ಕೋವಿಡ್: ಪರೀಕ್ಷೆ ರದ್ದುಗೊಳಿಸಿ ರಜೆ ಘೋಷಣೆ

ಇನ್ನು, ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಎಲ್ಲಾ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ನಿನ್ನೆ(ಆದಿತ್ಯವಾರ), ದೇಶದಾದ್ಯಂತ ಕೋವಿಡ್ ಸೋಂಕು ಹೆಚ್ಚಳ ವಾಗುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ತಪ್ಪು ನಿರ್ಧಾರಗಳೇ ಕಾರಣವೆಂದು ಟೀಕಿಸಿದ್ದ ಮಮತಾ, ಪ್ರಧಾನಿಯವರು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಮಾತ್ರವಲ್ಲದೇ, ಕೋವಿಡ್ ನಿಯಂತ್ರಣ ಮಾಡುವುದಕ್ಕೆ ಕೇಂದ್ರ ಯಾವುದೇ ರೀತಿಯಲ್ಲಿ ಪಶ್ಚಿಮ ಬಂಗಾಳಕ್ಕೆ ಸಹಾಯ ಮಾಡಿಲ್ಲ, ಲಸಿಕೆಗಳ ಪೂರೈಕೆಗಾಗಿ ಕೇಳಿಕೊಂಡಿದ್ದರೂ ಕೇಂದ್ರದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಆರೋಪಸಿದ್ದರು.

Advertisement

ಇನ್ನು, ಪಶ್ಚಿಮ ಬಂಗಾಳದ ಉಳಿದ ಮೂರು ಹಂತದ ಚುನಾವಣೆಗೆ ಸಂಬಂಧಿಸಿದಂತೆ ನಿನ್ನೆ(ಆದಿತ್ಯವಾರ., ಏ. 18) ಪ್ರತಿಕ್ರಿಯೆ ನೀಡಿದ್ದ ಮಮತಾ, ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟಿಎಂಸಿ ಕೋಲ್ಕತ್ತಾದಲ್ಲಿ ಸಣ್ಣ ಸಭೆಗಳನ್ನು ಆಯೋಜಿಸುತ್ತದೆ ಮತ್ತು ಉಳಿದ ಮೂರು ಹಂತಗಳಲ್ಲಿ ಮತದಾನ ನಡೆಯುವ ಜಿಲ್ಲೆಗಳಲ್ಲಿ ನಡೆಯುವ ಚುನಾವಣಾ ಪ್ರಚಾರ ಸಭೆಯಲ್ಲಿ ಚುಟುಕು ಭಾಷಣಗಳನ್ನು ನೀಡುವುದಾಗಿ ಹೇಳಿದ್ದರು.

ಓದಿ : ‘ಮಠ’ ನಿರ್ದೇಶಕನಿಗೆ ಕೋವಿಡ್ ದೃಢ : ಸರ್ಕಾರದ ವಿರುದ್ಧ ‘ಗುರ್’ ಎಂದ ಗುರು ಪ್ರಸಾದ್  

Advertisement

Udayavani is now on Telegram. Click here to join our channel and stay updated with the latest news.

Next