Advertisement

ರಸ್ತೆ ಅಗಲೀಕರಣದಲ್ಲಿ ಮತ್ತೆ ತಾರತಮ್ಯ: ಆರೋಪ

06:01 PM Jan 05, 2022 | Shwetha M |

ಮುದಗಲ್ಲ: ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಗೆ ಪಟ್ಟಣದಲ್ಲಿ ಡಿವೈಡರ್‌ ಕಾಮಗಾರಿ ಆರಂಭಿಸಲಾಗಿದ್ದು, ಪಟ್ಟಣದ ಮಾರುತೇಶ್ವರ ದೇವಸ್ಥಾನದ ಹತ್ತಿರ ರಸ್ತೆ ಕಾಮಗಾರಿ ಅಗಲೀಕರಣ ವೇಳೆ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಮಾಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ಶಾಸಕ ಡಿ.ಎಸ್‌. ಹೂಲಗೇರಿ ನೇತೃತ್ವದಲ್ಲಿ ಪುರಸಭೆ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ 48 ಅಡಿ ರಸ್ತೆ ಅಗಲೀಕರಣ ಮಾಡಬೇಕು ಎಂದು ನಿರ್ಧಾರ ಮಾಡಲಾಗಿದೆ. ಆದರೆ, ಪುರಸಭೆ ಅಧಿಕಾರಿಗಳು ಕೆಲವು ಕಡೆ ಹೆಚ್ಚು ಕಡಿಮೆ ರಸ್ತೆ ಅಗಲೀಕರಣ ಮಾಡಿದ್ದಾರೆ. ಪಟ್ಟಣದ ಮಾರುತೇಶ್ವರ ದೇವಸ್ಥಾನ ಹತ್ತಿರ ಇರುವ ಮನೆಗಳನ್ನು ಮನಸೊ ಇಚ್ಚೆಯಂತೆ ತೆರವುಗೊಳಿಸಿದರೇ, ಪೊಲೀಸ್‌ ಠಾಣೆ ಮುಂಭಾಗದಲ್ಲಿ ಮಾತ್ರ ಕಡಿಮೆ ಅಳತೆಯಲ್ಲಿ ತೆರವುಗೊಳಿಸಲಾಗಿದೆ. ಅಗಲೀಕರಣ ಮಾಡುವ ವೇಳೆ ಅಳೆದು ತೂಗಿ ಬಡವರ ಮತ್ತು ಶ್ರೀಮಂತರ ಮನೆಗಳನ್ನು ಸಮಾನವಾಗಿ ತೆರವುಗೊಳಿಸಿ ಎಂದು ಸಾರ್ವಜನಿಕರ ಹಾಗೂ ಪುರಸಭೆ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.

ಈ ರಸ್ತೆ ಅಗಲೀಕರಣ ಕಾಮಗಾರಿ ವಾಗ್ವಾದ ನಂತರ ಕೆಲವರು ಕೆಲಸ ಮಾಡಲು ಅಡ್ಡಿಪಡಿಸಿದ್ದಾರೆ ಎಂದು ಮುಖ್ಯಾಧಿಕಾರಿ ಪೊಲೀಸ್‌ ಠಾಣೆಗೆ ದೂರು ನೀಡಲು ಮುಂದಾದರು. ಆಗ ಅಧಿಕಾರಿಗಳು ಹಾಗೂ ಸಾರ್ವಜನಿಕರ ನುವೆ ನಡುವೆ ಪೊಲೀಸರು ರಾಜಿ ಸಂಧಾನ ಮಾಡಿದರು.

ಪಟ್ಟಣದಲ್ಲಿ ಯಾವ ರೀತಿ ರಸ್ತೆ ಅಗಲೀಕರಣ ಮಾಡಿದ್ದಾರೆ. ಅದೇ ರೀತಿ ಮಾರುತೇಶ್ವರ ದೇವಸ್ಥಾನದ ಹತ್ತಿರ ಕೂಡ ರಸ್ತೆ ಅಗಲೀಕರಣ ಮಾಡಬೇಕು. ಕೆಲವರು ಎರಡು-ಮೂರು ವರ್ಷದ ಹಿಂದೆಯೇ ಮನೆ ಕಟ್ಟಲಾಗಿದೆ. ಅವುಗಳನ್ನು ತೆರವುಗೊಳಿಸಲು ಬಡವರಿಗೆ ನೋವಾಗುತ್ತದೆ. -ವೀರೇಶ ಉಪ್ಪಾರ, ಉಪಾಧ್ಯಕ್ಷ, ಹುಸೇನ್‌ ಆಲಂ ಕಟ್ಟಡ ಕಾರ್ಮಿಕರ ಸಂಘ ಮುದಗಲ್‌ ಘಟಕ

Advertisement

Udayavani is now on Telegram. Click here to join our channel and stay updated with the latest news.

Next