Advertisement

ರಾಯಲ್ ಕದನ: ಇಲ್ಲಿದೆ ಬೆಂಗಳೂರು-ರಾಜಸ್ಥಾನ ನಡುವಿನ ಸ್ವಾರಸ್ಯಕರ ಅಂಶಗಳು

03:22 PM May 27, 2022 | Team Udayavani |

ಅಹಮದಾಬಾದ್: 2022ರ ಸಾಲಿನ ಐಪಿಎಲ್ ಕೂಟದ ಕೊನೆಯ ಎರಡು ಪಂದ್ಯಗಳು ಬಾಕಿ ಉಳಿದಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲನುಭವಿಸಿದ ರಾಜಸ್ಥಾನ ರಾಯಲ್ಸ್ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು ಮುಖಾಮುಖಿಯಾಗಲಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಫೈನಲ್ ಪ್ರವೇಶ ಪಡೆಯಲಿರುವ ಎರಡನೇ ತಂಡ ಯಾವುದೆಂಬ ಬಗ್ಗೆ ತಿಳಿಯಲಿದೆ.

Advertisement

ಒಟ್ಟಾರೆಯಾಗಿ, ಇದುವರೆಗೆ ಎರಡು ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು, ರಾಜಸ್ಥಾನ ತಂಡ 11 ಮತ್ತು ಆರ್ ಸಿಬಿ 13 ರಲ್ಲಿ ವಿಜಯಶಾಲಿಯಾಗಿದೆ. 2018 ರ ಬಳಿಕ ನಾಲ್ಕು ಪಂದ್ಯಗಳಲ್ಲಿ ರಾಜಸ್ಥಾನ ಗೆದ್ದರೆ, ಆರ್ ಸಿಬಿ ಐದರಲ್ಲಿ ಗೆದ್ದಿದೆ.

ಈ ಬಾರಿಯ ಕೂಟದಲ್ಲಿ ಎರಡು ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದೆ. ಎ.5ರಂದು ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ನಾಲ್ಕು ವಿಕೆಟ್ ಅಂತರದಿಂದ ಗೆಲುವು ಸಾಧಿಸಿತ್ತು. ಎ.26ರಂದು ಪುಣೆಯಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 29 ರನ್ ಅಂತರದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಆರ್ ಸಿಬಿ 115 ರನ್ ಗೆ ಆಲೌಟಾಗಿತ್ತು.

ಈ ಬಾರಿ ಆರ್ ಸಿಬಿ ಅತೀ ಹೆಚ್ಚು ಅಂದರೆ 137 ಸಿಕ್ಸರ್ ಗಳನ್ನು ಬಿಟ್ಟುಕೊಟ್ಟಿದೆ. ಮತ್ತೊಂದೆಡೆ ರಾಜಸ್ಥಾನ ತಂಡ ಅತೀ ಹೆಚ್ಚು ಸಿಕ್ಸರ್ ಬಾರಿಸಿದೆ. (123)

ಇದನ್ನೂ ಓದಿ:ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

Advertisement

2011 ರಲ್ಲಿ ಪ್ಲೇ ಆಫ್‌ಗಳನ್ನು ಪರಿಚಯಿಸಿದಾಗಿನಿಂದ, ಲೀಗ್ ಹಂತದಲ್ಲಿ ಎರಡನೇ ಸ್ಥಾನ ಗಳಿಸಿದ ತಂಡವು ಹಿಂದಿನ 11 ವರ್ಷಗಳಲ್ಲಿ ಪ್ರತಿಯೊಂದು ಬಾರಿಯೂ ಫೈನಲ್‌ ಗೆ ತಲುಪಿದೆ. ಏಳು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಈ ಬಾರಿ ರಾಜಸ್ಥಾನ ಲೀಗ್ ಹಂತದಲ್ಲಿ ಎರಡನೇ ಸ್ಥಾನ ಗಳಿಸಿದೆ.

ಸಂಭಾವ್ಯ ತಂಡ

ಆರ್ ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾ), ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿ.ಕೀ), ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

ರಾಜಸ್ಥಾನ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾ ಮತ್ತು ವಿ.ಕೀ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜುವೇಂದ್ರ ಚಾಹಲ್, ಓಬೇಡ್ ಮೆಕಾಯ್.

Advertisement

Udayavani is now on Telegram. Click here to join our channel and stay updated with the latest news.

Next