Advertisement

ಶಾರ್ಜಾದಲ್ಲಿ ರಾಹುಲ್- ವಿರಾಟ್ ಪೈಪೋಟಿ: ಟಾಸ್ ಗೆದ್ದ RCB; ಪಂಜಾಬ್ ತಂಡದಲ್ಲಿ 3 ಬದಲಾವಣೆ

03:03 PM Oct 03, 2021 | Team Udayavani |

ಶಾರ್ಜಾ: ಪ್ಲೇ ಆಫ್ ಗೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಕೆ.ಎಲ್.ರಾಹುಲ್ ನಾಯಕತ್ವದ ಪಂಬಾಬ್‌ ಕಿಂಗ್ಸ್‌ ಭಾನುವಾರದ ಹಗಲು ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ.

Advertisement

ಶಾರ್ಜಾ ಮೈದಾನದಲ್ಲಿ ಟಾಸ್ ಗೆದ್ದ ವಿರಾಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

ಇಂದಿನ ಪಂದ್ಯ ಗೆದ್ದರೆ ಪಂಜಾಬ್ ಕಿಂಗ್ಸ್ ಗೆ ಮುಂದಿನ ಹಂತಕ್ಕೇರುವ ಕನಸು ಜೀವಂತವಾಗಿರಲಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದಿನ ಗೆದ್ದರೆ ಅಧಿಕೃತವಾಗಿ ಪ್ಲೇ ಆಫ್ ಗೆ ಎಂಟ್ರಿ ಕೊಡಲಿದೆ.

ಕಡಿಮೆ ಮೊತ್ತ ದಾಖಲಾಗುತ್ತಿರುವ ಶಾರ್ಜಾದ ಮೈದಾನದಲ್ಲಿ ಎರಡೂ ತಂಡಗಳು ತಮ್ಮ ಅಮೂಲ್ಯ ಜಯಕ್ಕಾಗಿ ಸೆಣಸಾಡುತ್ತಿದೆ. ಅಹ್ಮದಾಬಾದ್‌ನಲ್ಲಿ ನಡೆದ ಮೊದಲ ಮುಖಾಮುಖೀಯಲ್ಲಿ ಪಂಜಾಬ್‌ ತಂಡವು ಆರ್‌ಸಿಬಿ ವಿರುದ್ಧ 34 ರನ್‌ಗಳ ಗೆಲುವು ಸಾಧಿಸಿತ್ತು.

ತಂಡಗಳು:

Advertisement

ಬೆಂಗಳೂರು: ವಿರಾಟ್ ಕೊಹ್ಲಿ (ನಾ), ದೇವದತ್ ಪಡಿಕ್ಕಲ್, ಕೆಎಸ್ ಭರತ್ (ವಿ.ಕೀ), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹಮದ್, ಡ್ಯಾನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್

ಪಂಜಾಬ್: ಕೆಎಲ್ ರಾಹುಲ್ (ನಾ & ವಿ.ಕೀ), ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಏಡೆನ್ ಮಾರ್ಕ್ರಮ್, ಶಾರುಖ್ ಖಾನ್, ಮಂದೀಪ್ ಸಿಂಗ್, ಹರ್ ಪ್ರೀತ್ ಬ್ರಾರ್, ಮೋಸಿಸ್ ಹೆನ್ರಿಕ್ಸ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next