Advertisement

RCBvsCSK: ಟಾಸ್ ಗೆದ್ದ ಬೆಂಗಳೂರು; ಒಂದು ಬದಲಾವಣೆ ಮಾಡಿದ ಚೆನ್ನೈ

07:10 PM Apr 17, 2023 | Team Udayavani |

ಬೆಂಗಳೂರು: ಐಪಿಎಲ್ ಸೀಸನ್ 16ರ 24 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫಾಪ್ ಡು ಪ್ಲೆಸಿಸ್ ಮತ್ತು ಎಂ.ಎಸ್ ಧೋನಿ ನಾಯಕತ್ವದ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಬೆಂಗಳೂರು ಮೊದಲು ಬೌಲಿಂಗ್ ಆಯ್ಕೆ ಮಾಡಿದೆ.

Advertisement

ಬೆಂಗಳೂರು ತಂಡದ ಆರಂಭಿಕ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸಿಎಸ್ ಕೆ ಪರ ಗಾಯಗೊಂಡ ಮಗಲಾ ಬದಲು ಪತಿರಣ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:BJP ಮೂರನೇ ಪಟ್ಟಿ ಬಿಡುಗಡೆ: ಶೆಟ್ಟರ್ ಕ್ಷೇತ್ರಕ್ಕೆ ಟೆಂಗಿನಕಾಯಿ; ರಾಮದಾಸ್ ಗೆ ಕೊಕ್

ಆರ್ ಸಿಬಿ ಮತ್ತು ಸಿಎಸ್ ಕೆ ತಂಡಗಳು ಇದುವರೆಗೆ ಐಪಿಎಲ್ ನಲ್ಲಿ 29 ಬಾರಿ ಎದುರಾಗಿದ್ದು, ಅದರಲ್ಲಿ ಸಿಎಸ್ ಕೆ 19 ಬಾರಿ ಮತ್ತು ಬೆಂಗಳೂರು 10 ಬಾರಿ ಜಯ ಗಳಿಸಿದೆ.

ತಂಡಗಳು

Advertisement

ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿ.ಕೀ), ಹರ್ಷಲ್ ಪಟೇಲ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್

ಚೆನ್ನೈ: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾ/ವಿ.ಕೀ), ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

Advertisement

Udayavani is now on Telegram. Click here to join our channel and stay updated with the latest news.

Next