Advertisement

ಸೇಡು ತೀರಿಸಿಕೊಂಡ ಆರ್‌ಸಿಬಿ

03:42 PM Jul 16, 2019 | keerthan |

ಬೆಂಗಳೂರು: ಚೆನ್ನೈ ಎದುರಿನ ಉದ್ಘಾಟನಾ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲಿಗೆ ಆರ್‌ಸಿಬಿ ರವಿವಾರ ರಾತ್ರಿ ತವರಿನ ಅಂಗಳದಲ್ಲಿ ಸೇಡು ತೀರಿಸಿಕೊಂಡಿದೆ. ಅಂಕಪಟ್ಟಿಯ ಅಗ್ರ ಮತ್ತು ಕೊನೆಯ ಸ್ಥಾನದಲ್ಲಿರುವ ತಂಡಗಳ ಈ ರೋಚಕ ಸೆಣಸಾಟದಲ್ಲಿ ಆರ್‌ಸಿಬಿ 1 ರನ್ನಿನಿಂದ ಜಯಭೇರಿ ಬಾರಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 7 ವಿಕೆಟಿಗೆ 161 ರನ್‌ ಗಳಿಸಿದರೆ, ಚೆನ್ನೈ ತಂಡವು ಧೋನಿ (ಅಜೇಯ 84) ಅವರ ಅಮೋಘ ಬ್ಯಾಟಿಂಗಿನ ಹೊರತಾಗಿಯೂ ನಿಗದಿತ ಓವರ್‌ಗಳಲ್ಲಿ 8 ವಿಕೆಟಿಗೆ 160 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಮೊದಲ ಓವರಿನಲ್ಲೇ ವಾಟ್ಸನ್‌ ಮತ್ತು ರೈನಾ ಅವರನ್ನು ಸತತ ಎಸೆತಗಳಲ್ಲಿ ಕೆಡವಿದ ಸ್ಟೇನ್‌ ಚೆನ್ನೈಗೆ ಘಾತಕವಾಗಿ ಪರಿಣಮಿಸಿದರು. ಆದರೆ ಧೋನಿ ಅವರ ಸಾಹಸದ ಬ್ಯಾಟಿಂಗಿನಿಂದಾಗಿ ಚೆನ್ನೈ ಗೆಲ್ಲುವ ಸನಿಹಕ್ಕೆ ಬಂತು. ಅಂತಿಮ ಓವರಿನಲ್ಲಿ ತಂಡ ಗೆಲ್ಲಲು 26 ರನ್‌ ಗಳಿಸಬೇಕಿತ್ತು. ಮೊದಲ ಐದು ಎಸೆತಗಳಲ್ಲಿ ಧೋನಿ ಮೂರು ಸಿಕ್ಸರ್‌ ಸಹಿತ 24 ರನ್‌ ಕಸಿದರು. ಅಂತಿಮ ಎಸೆತದಲ್ಲಿ 2 ರನ್‌ ಬೇಕಿತ್ತು. ಆದರೆ ಶಾದೂಲ್‌ ಠಾಕುರ್‌ ರನೌಟ್‌ ಆಟ ಕಾರಣ ಚೆನ್ನೈ ಸೋಲು ಕಾಣುವಂತಾಯಿತು.

ಆರ್‌ಸಿಬಿ ಸರದಿಯಲ್ಲಿ ಆರಂಭಕಾರ ಪಾರ್ಥಿವ್‌ ಪಟೇಲ್‌ ಅವರ ಅರ್ಧ ಶತಕ ಹೊರತುಪಡಿಸಿದರೆ ಉಳಿದವರ್ಯಾರಿಂದಲೂ ದೊಡ್ಡ ಕೊಡುಗೆ ಸಂದಾಯವಾಗಲಿಲ್ಲ. 16ನೇ ಓವರ್‌ ತನಕ ಚೆನ್ನೈ ದಾಳಿ ನಿಭಾಯಿಸಿ ನಿಂತ ಪಾರ್ಥಿವ್‌ 37 ಎಸೆತಗಳಿಂದ 53 ರನ್‌ ಹೊಡೆದರು (2 ಬೌಂಡರಿ, 4 ಸಿಕ್ಸರ್‌). ಕಳೆದ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದ ನಾಯಕ ವಿರಾಟ್‌ ಕೊಹ್ಲಿ ಇಲ್ಲಿ ಕೇವಲ 9 ರನ್ನಿಗೆ ಔಟಾದರು.

ಎಬಿ ಡಿ ವಿಲಿಯರ್ ಆಟ 25 ರನ್ನಿಗೆ ನಿಂತಿತು (19 ಎಸೆತ, 3 ಬೌಂಡರಿ, 1 ಸಿಕ್ಸರ್‌). ಅಕ್ಷದೀಪ್‌ ನಾಥ್‌ ನಿಧಾನ ಗತಿಯಲ್ಲಿ ಆಡಿ 24 ರನ್‌ ಮಾಡಿದರು. ಇವರಿಬ್ಬರ ವಿಕೆಟ್‌ ರವೀಂದ್ರ ಜಡೇಜ ಪಾಲಾಯಿತು. ಇಬ್ಬರೂ ಡು ಪ್ಲೆಸಿಸ್‌ಗೆ ಕ್ಯಾಚ್‌ ನೀಡಿದರು. ಮಾರ್ಕಸ್‌ ಸ್ಟೋಯಿನಿಸ್‌ ಆಟದಲ್ಲೂ ಬಿರುಸಿರಲಿಲ್ಲ. 14 ರನ್ನಿಗೆ 13 ಎಸೆತ ತೆಗೆದುಕೊಂಡರು. ಮೊಯಿನ್‌ ಅಲಿ ಬಿರುಸಿನ ಆಟಕ್ಕಿಳಿದರೂ ಇನ್ನಿಂಗ್ಸ್‌ ಬೆಳೆಸಲು ಸಾಧ್ಯವಾಗಲಿಲ್ಲ. 16 ಎಸೆತಗಳಿಂದ 26 ರನ್‌ ಮಾಡಿ (5 ಬೌಂಡರಿ) ಬ್ರಾವೋಗೆ ವಿಕೆಟ್‌ ಒಪ್ಪಿಸಿದರು. ಚೆನ್ನೈ ಪರ ದೀಪಕ್‌ ಚಹರ್‌, ರವೀಂದ್ರ ಜಡೇಜ ಮತ್ತು ಡ್ವೇನ್‌ ಬ್ರಾವೊ ತಲಾ 2 ವಿಕೆಟ್‌ ಉರುಳಿಸಿದರು.

Advertisement

ರಾಯಲ್‌ ಚಾಲೆಂಜರ್ ಬೆಂಗಳೂರು
ಪಾರ್ಥಿವ್‌ ಪಟೇಲ್‌ ಸಿ ವಾಟ್ಸನ್‌ ಬಿ ಬ್ರಾವೊ 53
ವಿರಾಟ್‌ ಕೊಹ್ಲಿ ಸಿ ಧೋನಿ ಬಿ ಚಹರ್‌ 9
ಎಬಿ ಡಿ ವಿಲಿಯರ್ ಸಿ ಡು ಪ್ಲೆಸಿಸ್‌ ಬಿ ಜಡೇಜ 25
ಅಕ್ಷದೀಪ್‌ ನಾಥ್‌ ಸಿ ಡು ಪ್ಲೆಸಿಸ್‌ ಬಿ ಜಡೇಜ 24
ಮಾರ್ಕಸ್‌ ಸ್ಟೋಯಿನಿಸ್‌ ಸಿ ಶೋರಿ ಬಿ ತಾಹಿರ್‌ 14
ಮೊಯಿನ್‌ ಅಲಿ ಸಿ ಠಾಕೂರ್‌ ಬಿ ಬ್ರಾವೊ 26
ಪವನ್‌ ನೇಗಿ ಸಿ ರಾಯುಡು ಬಿ ಚಹರ್‌ 5
ಉಮೇಶ್‌ ಯಾದವ್‌ ಔಟಾಗದೆ 1
ಡೇಲ್‌ ಸ್ಟೇನ್‌ ಔಟಾಗದೆ 0
ಇತರ 4
ಒಟ್ಟು (7 ವಿಕೆಟಿಗೆ) 161
ವಿಕೆಟ್‌ ಪತನ: 1-11, 2-58, 3-99, 4-124, 5-126, 6-150, 7-160.
ಬೌಲಿಂಗ್‌:
ದೀಪಕ್‌ ಚಹರ್‌ 4-0-25-2
ಶಾದೂಲ್‌ ಠಾಕೂರ್‌ 4-0-40-0
ರವೀಂದ್ರ ಜಡೇಜ 4-0-29-2
ಡ್ವೇನ್‌ ಬ್ರಾವೊ 4-0-34-2
ಇಮ್ರಾನ್‌ ತಾಹಿರ್‌ 4-0-31-1

ಚೆನ್ನೈ ಸೂಪರ್‌ ಕಿಂಗ್ಸ್‌
ಶೇನ್‌ ವಾಟ್ಸನ್‌ ಸಿ ಸ್ಟೋಯಿನಿಸ್‌ ಬಿ ಸ್ಟೇನ್‌ 5
ಫಾ ಡು ಪ್ಲೆಸಿಸ್‌ ಸಿ ಡಿ ವಿಲಿಯರ್ ಬಿ ಯಾದವ್‌ 5
ಸುರೇಶ್‌ ರೈನಾ ಬಿ ಸ್ಟೇನ್‌ 0
ಅಂಬಾಟಿ ರಾಯುಡು ಬಿ ಚಾಹಲ್‌ 29
ಕೇದಾರ್‌ ಜಾಧವ್‌ ಸಿ ಡಿ ವಿಲಿಯರ್ ಬಿ ಯಾದವ್‌ 9
ಎಂ.ಎಸ್‌. ಧೋನಿ ಔಟಾಗದೆ 84
ರವೀಂದ್ರ ಜಡೇಜ ರನೌಟ್‌ 11
ಡ್ವೇನ್‌ ಬ್ರಾವೊ ಸಿ ಪಾರ್ಥಿವ್‌ ಬಿ ಸೈನಿ 5
ಶಾದೂìಲ್‌ ಠಾಕುರ್‌ ರನೌಟ್‌ 0
ಇತರ 12
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 160
ವಿಕೆಟ್‌ ಪತನ: 1-6, 2-6, 3-17, 4-28, 5-83, 6-108, 7-136, 8-160
ಬೌಲಿಂಗ್‌:
ಡೇಲ್‌ ಸ್ಟೇನ್‌ 4-0-29-2
ನವದೀಪ್‌ ಸೈನಿ 4-0-24-1
ಉಮೇಶ್‌ ಯಾದವ್‌ 4-0-47-2
ಪವನ್‌ ನೇಗಿ 1-0-7-0
ಮಾರ್ಕಸ್‌ ಸ್ಟೋಯಿನಿಸ್‌ 3-0-20-0
ಯಜುವೇಂದ್ರ ಚಾಹಲ್‌

Advertisement

Udayavani is now on Telegram. Click here to join our channel and stay updated with the latest news.

Next