ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಈ ಹಿಂದೆ ಪ್ರತಿನಿಧಿ ಸಿದ್ದ ಜಗತ್ತಿನ ಶ್ರೇಷ್ಠ ಬ್ಯಾಟರ್‌ಗಳಾದ ಎಬಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರ ಜರ್ಸಿ ನಂ.ಗಳಿಗೆ ವಿದಾಯ ಹೇಳಲು ಆರ್‌ಸಿಬಿ ಮುಂದಾಗಿದೆ.
ಡಿವಿಲಿಯರ್ಸ್ ಅವರು 17ನೇ ಸಂಖ್ಯೆಯ ಜರ್ಸಿ ಮತ್ತು ಕ್ರಿಸ್ ಗೇಲ್ ಅವರು 333ನೇ ಸಂಖ್ಯೆಯ ಜರ್ಸಿ ಯನ್ನು ತೊಡುತ್ತಿದ್ದರು. ಈ ಇಬ್ಬರು ಆಟಗಾರರಿಗೆ ಗೌರವ ನೀಡುವ ಸಲುವಾಗಿ ಈ ಎರಡೂ ಸಂಖ್ಯೆಗಳಿಗೆ ವಿದಾಯ ಹೇಳಲಾಗುತ್ತದೆ. ಮಾ.26ರಂದು ಐಪಿಎಲ್‌ನ ಸೈಡಿನ ಹಾಲ್ ಆಫ್ ಫೇಮ್‌ನಲ್ಲಿ ಅಳವಡಿಸಲಾಗುತ್ತದೆ ಎಂದು ಆರ್‌ಸಿಬಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ದಕ್ಷಿಣ ಆಫ್ರಿಕಾ ಮೂಲದ, ಮಿ.360 ಬ್ಯಾಟರ್ ಎಂದೇ ಖ್ಯಾತಿಗಳಿಸಿರುವ ಡಿವಿಲಿಯರ್ಸ್ ಅವರು 2011ರಿಂದ 2021ರ ವರೆಗೆ ಒಟ್ಟು 11 ಆವೃತ್ತಿಗಳಲ್ಲಿ ಆರ್‌ಸಿಬಿ ಪರ ಆಡಿದ್ದರು. 156 ಮ್ಯಾಚ್‌ಗಳಲ್ಲಿ 4,491 ರನ್ ಬಾರಿಸಿದ್ದಾರೆ.
ಇದನ್ನೂ ಓದಿ:ಲಂಡನ್ ಹೇಳಿಕೆ ವಿವಾದ: ಜಿ-20 ಸಮಾಲೋಚನಾ ಸಭೆಯಲ್ಲಿ ಸ್ಪಷ್ಟನೆ ನೀಡಿದ ರಾಹುಲ್
ಇನ್ನು ವೆಸ್ಟ್ ಇಂಡೀಸ್‌ನ ಅಗ್ರ ಆಟಗಾರ ಕ್ರಿಸ್ ಗೇಲ್ ಅವರು 2011ರಿಂದ 2017ರ ವರೆಗೆ ಆರ್‌ಸಿಬಿ ಪರ ಆಡಿದ್ದು, 37 ಅರ್ಧಶತಕ ಮತ್ತು 2 ಶತಕ ಬಾರಿಸಿದ್ದಾರೆ. 2013ರಲ್ಲಿ ಒಟ್ಟಾರೆ 16 ಪಂದ್ಯಗಳಲ್ಲಿ 708 ರನ್ ಗಳಿಸಿದ್ದು ಅಲ್ಲದೇ, ಪಂದ್ಯವೊಂದರಲ್ಲಿ ಅಜೇಯ 175 ರನ್ ಹೊಡೆದಿದ್ದರು.