Advertisement

ದಾಂಪತ್ಯಕ್ಕೆ ಕಾಲಿಟ್ಟ ಶ್ರೀಲಂಕಾದ ಸ್ಪಿನ್‌ ಮಾಂತ್ರಿಕ, ಆರ್‌ ಸಿಬಿ ಆಟಗಾರ ವನಿಂದು ಹಸರಂಗ

12:31 PM Mar 09, 2023 | Team Udayavani |

ಕೊಲೊಂಬೊ: ಶ್ರೀಲಂಕಾ ತಂಡದ ಲೆಗ್ ಸ್ನಿನ್‌ ಮಾಂತ್ರಿಕ ವನಿಂದು ಹಸರಂಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತ ಫೋಟೋವನ್ನು ಹಸರಂಗ ಹಂಚಿಕೊಂಡಿದ್ದಾರೆ.

Advertisement

ಶ್ರೀಲಂಕಾ ತಂಡದಲ್ಲಿ ತನ್ನ ಸ್ಪಿನ್‌ ಬೌಲಿಂಗ್‌ ಹಾಗೂ ಸ್ಫೋಟಕ ಆಟದಿಂದ ಕ್ರಿಕೆಟ್‌ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ವನಿಂದು ಹಸರಂಗ. ಕಳೆದ ಕೆಲ ಸಮಯದಿಂದ ಐಪಿಎಲ್‌ ನಲ್ಲಿ ಆರ್‌ ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್‌ ಸಿಬಿ ತಂಡದ ಸ್ಟಾರ್‌ ಬೌಲರ್‌ ಆಗಿ ಹಲವು ಪಂದ್ಯದಲ್ಲಿ ವಿಕೆಟ್‌ ಗಳನ್ನು ಕಬಳಿಸಿ ಮಿಂಚಿದ್ದಾರೆ.

ಮಾರ್ಚ್‌ 9 ರಂದು ಆತ್ಮೀಯರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆದಿದೆ.‌  ವಿಂದ್ಯಾ ಅವರನ್ನು ಹಸರಂಗ ವರಿಸಿದ್ದಾರೆ. ನವ ಜೋಡಿಯ ಫೋಟೋವನ್ನು ಹಸರಂಗ ಅವರ ಸ್ನೇಹಿತ, ಛಾಯಗ್ರಾಹಕ ದನುಷ್ಕ ಸೇನಾಧೀರ ಅವರು ಹಂಚಿಕೊಂಡು ಶುಭಕೋರಿದ್ದಾರೆ.

ಇತ್ತ ಆರ್ ಸಿಬಿ ತಂಡ ಕೂಡ ನವ ಜೋಡಿಯ ಫೋಟೋವನ್ನು ಹಂಚಿಕೊಂಡು, ಹಸರಂಗ ಕ್ಲೀನ್‌ ಬೌಲ್ಡ್‌ ಆಗಿದ್ದಾರೆ ಎಂದು ಬರೆದುಕೊಂಡು ಶುಭಕೋರಿದೆ.

ಶ್ರೀಲಂಕಾಕ್ಕೆ ಇದೇ ತಿಂಗಳು ನ್ಯೂಜಿಲ್ಯಾಂಡ್‌ ವಿರುದ್ಧ ವೈಟ್‌ ಬೌಲ್‌ ಸರಣಿ ಇರಲಿದ್ದು, ಹಸರಂಗ ಅದರಲ್ಲಿ ಆಡಲಿದ್ದಾರೆ. ಟೆಸ್ಟ್‌ ಸರಣಿಯಲ್ಲಿ ಹಸರಂಗ ಸ್ಥಾನ ಪಡೆದುಕೊಂಡಿಲ್ಲ. ಏಪ್ರಿಲ್‌ 8 ಕ್ಕೆ ಸರನು ಮುಕ್ತಾವಾಗಲಿದ್ದು, ಆರ್‌ ಸಿಬಿಯ ಕೆಲ ಪಂದ್ಯಗಳಿಂದ ಹಸರಂಗ ಹೊರಗುಳಿಯುವ ಸಾಧ್ಯತೆಯಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next